ನಮ್ಮದು ಮದುವೆಯೇ ಆಗಿಲ್ಲ: ಗಂಡನಿಗೆ ಶಾಕ್ ಕೊಟ್ಟ ನಟಿ-ಸಂಸದೆ ನುಸ್ರತ್!
Team Udayavani, Jun 9, 2021, 4:45 PM IST
ಕೊಲ್ಕತ್ತಾ: ನಟಿ ಹಾಗೂ ಟಿಎಂಸಿ ಸಂಸದೆ ಸುಸ್ರತ್ ಜಹಾನ ಮದುವೆ ಹಾಗೂ ಪ್ರಗ್ನೆಸಿ ವಿಚಾರವಾಗಿ ಕೊನೆಗೂ ಮೌನ ಮುರಿದಿದ್ದಾರೆ. ಹಾಗೂ ತಮ್ಮ ಹಾಗೂ ನಿಖಿಲ್ ಜೊತೆ ನಡೆದ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ನುಸ್ರತ್ ಜಹಾನ ಅವರು ಬೋಡ್ರಮ್ ಟೌನ್‌ನ ಉದ್ಯಮಿ ನಿಖಿಲ್ ಜೈನ್ ಜೊತೆ 2019ರ ಜೂನ್ 19 ರಂದು ಮದುವೆಯಾಗಿದ್ದರು. ಖುದ್ದು ನುಸ್ರತ್ ತಮ್ಮ ಮದುವೆ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೀಗ ಅವರೇ ಈ ಮದುವೆ ಮಾನ್ಯವಲ್ಲ ಎನ್ನುತ್ತಿದ್ದಾರೆ. ಟರ್ಕಿಶ್ ಕಾನೂನು ಪ್ರಕಾರ ನಡೆದ ಈ ಮದುವೆ ಭಾರತದಲ್ಲಿ ಅಸಿಂಧು. ಇಲ್ಲಿಯ ಕಾನೂನಿನ ಕಣ್ಣಿಗೆ ನಮ್ಮದು ಮದುವೆ ಅಲ್ಲ ಎಂದಿದ್ದಾರೆ.
ಗರ್ಭಿಣಿಯಾಗಿರುವ ನುಸ್ರತ್ ಶೀಘ್ರದಲ್ಲೇ ತಾಯಿಯಾಗಲಿದ್ದಾರೆಂಬ ಸುದ್ದಿ ಇತ್ತೀಚೆಗೆ ಹರಿದಾಡುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅವರ ಗಂಡ ನಿಖಿಲ್ ಜೈನ್ ತಾವಿಬ್ಬರೂ ಒಟ್ಟಿಗೆ ಇಲ್ಲವೆಂದಾಗ ಈ ಮಗು ನನ್ನದು ಹೇಗಾಗುತ್ತದೆ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನುಸ್ರತ್, ವಿದೇಶೀ ನೆಲದಲ್ಲಿದ್ದ ಕಾರಣ, ಹಾಗೂ ಟರ್ಕಿ ಮ್ಯಾರೇಜ್ ರೆಗ್ಯುಲೇಷನ್ ಅನ್ವಯ ಈ ಮದುವೆ ಮಾನ್ಯವಲ್ಲ. ಅಲ್ಲದೇ ಇದೊಂದು ಅಪೂರ್ಣ(ಎರಡು ವಿಭಿನ್ನ ಧರ್ಮದವರ ನಡುವೆ ನಡೆದ) ಮದುವೆ. ಹೀಗಾಗಿ ಇದಕ್ಕೆ ಭಾರತದಲ್ಲಿ ಶಾಸನಬದ್ಧ ಮಾನ್ಯತೆ ನೀಡಬೇಕಾದ ಅಗತ್ಯವಿತ್ತು. ಆದರೆ ಹಾಗಾಗಲಿಲ್ಲ ಎಂದಿದ್ದಾರೆ.
ಕಾನೂನಾತ್ಮಕವಾಗಿ ಈ ಮದುವೆ ಮಾನ್ಯವಲ್ಲ. ಇದನ್ನು ಕೇವಲ ರಿಲೇಷನ್‌ಶಿಪ್ ಅಥವಾ ಲಿವ್ ಇನ್ ರಿಲೇಷನ್‌ಶಿಪ್ ಎನ್ನಬಹುದು. ಹೀಗಾಗಿ ಡೈವೋರ್ಸ್ ಪ್ರಶ್ನೆಯೇ ಉದ್ಭವಿಸಲ್ಲ. ನಾವು ತುಂಬಾ ಸಮಯದ ಹಿಂದೆಯೇ ಪ್ರತ್ಯೇಕವಾಗಿದ್ದೇವೆ. ನಾನು ಈ ಬಗ್ಗೆ ಎಲ್ಲೂ ಮಾತನಾಡಿರಲಿಲ್ಲ ಯಾಕೆಂದರೆ ನಾನು ನನ್ನ ವೈಯುಕ್ತಿಕ ಜೀವನದ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳುವುದಿಲ್ಲ. ನಮ್ಮ ಸೋ ಕಾಲ್ಡ್ ಮದುವೆ ಕಾನೂನಿನ ಪ್ರಕಾರ ಮಾನ್ಯವಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ
ಹಿಂದಿ ಕಿಚ್ಚಿಗೆ ಅರ್ಜುನ್ ರಾಮ್ಪಾಲ್ ತುಪ್ಪ
ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ