ಒರಿಜಿನಲ್‌ ವರ್ಜಿನಿಯಾ!

ಕೇರಳದಿಂದ ಕನ್ನಡ ನಾಡಿಗೆ ಬಂದ ಪ್ರತಿಭೆ

Team Udayavani, Jul 28, 2019, 5:00 AM IST

ಮಹಿರಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದ ವರ್ಜಿನಿಯಾ.
ಕನ್ನಡ ಚಿತ್ರರಂಗಕ್ಕೆ ಪರಭಾಷಾ ನಟಿಯರ ಆಗಮನ ಇಂದು-ನಿನ್ನೆಯದಲ್ಲ. ಅದಕ್ಕೆ ಹತ್ತಾರು ದಶಕಗಳ ಸುದೀರ್ಘ‌ ಇತಿಹಾಸವಿದೆ. ಈಗ ಈ ಸಾಲಿಗೆ ಮತ್ತೂಬ್ಬ ನಟಿಯ ಹೆಸರು ಸೇರ್ಪಡೆಯಾಗುತ್ತಿದೆ. ಅವರೇ ಮಲೆಯಾಳಂ ನಟಿ ವರ್ಜಿನಿಯಾ ರೋಡ್ರಿಗಸ್‌. ಸುಮಾರು ಎರಡೂವರೆ ದಶಕಗಳಿಂದ ಮಲೆಯಾಳಂ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ನಟಿಯಾಗಿ ತನ್ನದೇ ಆದ ಛಾಪು ಮೂಡಿಸಿರುವ ವರ್ಜಿನಿಯಾ, ಅತ್ಯುತ್ತಮ ಭರತನಾಟ್ಯ ಮತ್ತು ಪಾಶ್ಚಿಮಾತ್ಯ ನೃತ್ಯ ಕಲಾವಿದೆ ಕೂಡ ಹೌದು. ಕನ್ನಡ ರಂಗಭೂಮಿಯಲ್ಲಿ ಅರುಂಧತಿ ನಾಗ್‌, ಎಂ.ಎಸ್‌. ಸತ್ಯು, ಬಿ. ಜಯಶ್ರೀ- ಹೀಗೆ ಅನೇಕ ರಂಗ ದಿಗ್ಗಜರ ಜೊತೆ ನಿಕಟ ಸಂಪರ್ಕ ಹೊಂದಿರುವ ವರ್ಜಿನಿಯಾ ಹೆಸರು ರಂಗಭೂಮಿಯಲ್ಲಿ ಪರಿಚಿತವಿದ್ದರೂ, ಕನ್ನಡ ಚಿತ್ರರಂಗದ ಮಟ್ಟಿಗೆ ಇವರ ಹೆಸರು ಬಹುತೇಕರಿಗೆ ಅಪರಿಚಿತ ಎನ್ನಬಹುದು.

ಈಗಾಗಲೇ ಮಲೆಯಾಳಂ, ಹಿಂದಿ, ಇಂಗ್ಲೀಷ್‌, ಮರಾಠಿ- ಹೀಗೆ ಸುಮಾರು ಆರು ಭಾಷೆಗಳಲ್ಲಿ ಅನೇಕ ಜಾಹೀರಾತುಗಳು, ಕಿರುಚಿತ್ರಗಳಲ್ಲಿ ಅಭಿನಯಿಸಿ, ಜೊತೆಗೆ ಅವುಗಳಿಗೆ ಹಿನ್ನೆಲೆೆ ಧ್ವನಿ ನೀಡಿ ಕಂಠದಾನ ಕಲಾವಿದೆಯಾಗಿ, ರಂಗಭೂಮಿ ಕಲಾವಿದೆಯಾಗಿ, ಚಿತ್ರ ಕಲಾವಿದೆಯಾಗಿ ಗುರುತಿಸಿಕೊಂಡಿರುವ ವರ್ಜಿನಿಯಾ ರೋಡ್ರಿಗಸ್‌, ಈಗ ಕನ್ನಡ ಚಿತ್ರರಂಗಕ್ಕೂ ಅಡಿಯಿಟ್ಟಿದ್ದಾರೆ. ಇತ್ತೀಚೆಗೆ ತೆರೆಕಂಡಿರುವ ಕ್ರೈಂ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರ ಮಹಿರಾ ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ವರ್ಜಿನಿಯಾ, ತನ್ನ ಅಭಿನಯದ ಮೂಲಕ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡುತ್ತಿರುವುದರ ಬಗ್ಗೆ ಮಾತನಾಡುವ ವರ್ಜಿನಿಯಾ, “ಮೊದಲಿನಿಂದಲೂ ಕನ್ನಡ ರಂಗಭೂಮಿಯ ಜೊತೆ ನನ್ನ ಒಡನಾಟವಿದೆ. ಇಲ್ಲಿ ಅನೇಕ ರಂಗ ಪ್ರಯೋಗಗಳಲ್ಲಿ ನಾನು ಭಾಗಿಯಾಗಿದ್ದೇನೆ. ಆದರೆ ಕನ್ನಡ ಚಿತ್ರರಂಗದಲ್ಲಿ ಇದು ನನಗೆ ಹೊಸ ಹೆಜ್ಜೆ. ಕಳೆದ ಕೆಲ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲ ಚಿತ್ರಗಳಲ್ಲಿ ಅಭಿನಯಿಸುವ ಆಫ‌ರ್‌ಗಳು ಇತ್ತಾದರೂ, ನಾನು ಏಕಕಾಲಕ್ಕೆ ಬೇರೆ ಬೇರೆ ಭಾಷೆಗಳಲ್ಲಿ, ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಮಹಿರಾ ಚಿತ್ರದಲ್ಲಿ ಒಂದೊಳ್ಳೆ ಪಾತ್ರ ಮತ್ತು ಅದರ ತಯಾರಿಗೆ ಬೇಕಾದ ಸಮಯ ಎರಡೂ ಸಿಕ್ಕಿದ್ದರಿಂದ ಆ ಚಿತ್ರವನ್ನು ಒಪ್ಪಿಕೊಂಡೆ. ಚಿತ್ರದ ಕಥೆ ಮತ್ತು ಪಾತ್ರ ಎರಡೂ ಚೆನ್ನಾಗಿದೆ. ಸಾಕಷ್ಟು ಸಮಯ ತೆಗೆದುಕೊಂಡು ಪ್ರತಿಯೊಂದು ಸೂಕ್ಷ್ಮಸಂಗತಿಗಳನ್ನೂ ಪರಿಣಾಮಕಾರಿಯಾಗಿ ಈ ಚಿತ್ರದಲ್ಲಿ ಚಿತ್ರತಂಡ ತೆರೆಗೆ ತಂದಿದೆ. ಒಂದೊಳ್ಳೆ ಎನರ್ಜಿಟಿಕ್‌ ಟೀಮ್‌ ಜೊತೆ ಕೆಲಸ ಮಾಡಿರುವುದಕ್ಕೆ ಖುಷಿ ಇದೆ. ಮುಂದೆಯೂ ಇಂಥ ಟೀಮ್‌ ಸಿಕ್ಕರೆ ಕನ್ನಡ ಚಿತ್ರಗಳಲ್ಲೂ ಅಭಿನಯಿಸಲು ನನಗೇನೂ ಅಭ್ಯಂತರವಿಲ್ಲ’ ಎನ್ನುತ್ತಾರೆ.

ಸದ್ಯ ಮಹಿರಾ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಮುಂದೆ ಕನ್ನಡ ಚಿತ್ರರಂಗದಲ್ಲಿ ವರ್ಜಿನಿಯಾ ಅವರಿಗೆ ಎಷ್ಟರ ಮಟ್ಟಿಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ ಅನ್ನೋದನ್ನ ಕಾದು ನೋಡಬೇಕು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ