ಹಳೇ ಹಾಡುಗಳನ್ನು ಹೊಸಾ ರೀತಿಯಲ್ಲಿ ಪರಿಚಯಿಸಿದ ಪಡ್ಡೆಹುಲಿ!

Team Udayavani, Apr 12, 2019, 11:37 AM IST

ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣ ಮಾಡಿರುವ ಪಡ್ಡೆಹುಲಿ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ತೆರೆ ಕಾಣುತ್ತಿದೆ. ಈ ಚಿತ್ರವೀಗ ಹಾಡುಗಳ ಮೂಲಕವೇ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ. ಈ ಪೀಳಿಗೆಗೆ ಅಪರಿಚಿತವಾಗಿದ್ದ ವಚನಗಳನ್ನು, ಭಾವಗೀತೆಗಳನ್ನು ಈಗಿನವರಿಗೆ ಬೇಕಾದ ರೀತಿಯಲ್ಲಿಯೇ ಪರಿಚಯಿಸಲಾಗಿದೆ. ಇದು ನಿಜಕ್ಕೂ ಪಡ್ಡೆಹುಲಿಯ ದಾಖಲೆ!

ಅಷ್ಟಕ್ಕೂ ಗುರು ದೇಶಪಾಂಡೆ ನಿರ್ದೇಶನ ಮಾಡಿರೋ ಈ ಚಿತ್ರದಲ್ಲಿ ಬರೋಬ್ಬರಿ ಹನ್ನೊಂದು ಹಾಡುಗಳಿವೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಮೂಲಕ ಹೊಸಾ ಲೋಕವೊಂದನ್ನು ಸೃಷ್ಟಿಸಿ ಬಿಟ್ಟಿದ್ದಾರೆ. ನಾಯಕ ಶ್ರೇಯಸ್ ಕೂಡಾ ಈ ಹಾಡುಗಳ ಮೂಲಕವೇ ಲಕಲಕಿಸಿದ್ದಾರೆ.

ಕಳಬೇಡ ಕೊಲಬೇಡ ಎಂಬ ಬಸವಣ್ಣನವರ ವಚನಕ್ಕೆ ಹೊಸಾ ಸ್ಪರ್ಶ ನೀಡಲಾಗಿದೆ. ಡಿವಿಜಿಯವರ ಸಾಲುಗಳಿಗೂ ಇಂಥಾದ್ದೇ ಮಾಂತ್ರಿಕ ಸಂಗೀತ ಸ್ಪರ್ಶ ನೀಡಲಾಗಿದೆ. ಇನ್ನುಳಿದಂತೆ ನಿನ್ನ ಪ್ರೇಮದ ಪರಿಯ, ಹೇಳಿ ಹೋಗು ಕಾರಣ ಸೇರಿದಂತೆ ಮೋಹಕ ಭಾವಗೀತೆಗಳನ್ನೂ ಹೊಸಾ ಥರದಲ್ಲಿಯೇ ಅನಾವರಣಗೊಳಿಸಲಾಗಿದೆ.

ಇದೇ ಸೇರಿದಂತೆ ಪಡ್ಡೆಹುಲಿ ಚಿತ್ರದಲ್ಲಿ ಹನ್ನೊಂದು ಹಾಡುಗಳಿವೆ. ಆ ಹನ್ನೊಂದೂ ಹಾಡುಗಳೂ ಜನರನ್ನು ಸೆಳೇದುಕೊಂಡು ಟ್ರೆಂಡಿಂಗ್ ನಲ್ಲಿವೆ. ಇಷ್ಟೊಂದು ಹಾಡುಗಳನ್ನು ನಿರ್ಮಾಪಕರು ಧಾರಾಳವಾಗಿಯೇ ಖರ್ಚು ಮಾಡೋ ಮೂಲಕ ನಿರ್ದೇಶಕರ ಕನಸಿಗೆ ಸಾಥ್ ಕೊಟ್ಟಿದ್ದಾರೆ. ನಾಯಕ ಶ್ರೇಯಸ್ ಕೂಡಾ ಈ ಹಾಡುಗಳ ಅಲೆಯಲ್ಲಿಯೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ