ಕ್ಯಾನ್ಸರ್‌ ಪೀಡಿತ, ಪೀಪ್ಲಿ ಲೈವ್‌ ನಟ ಸೀತಾರಾಮ್‌ ಪಾಂಚಾಲ್‌ ವಿಧಿವಶ

Team Udayavani, Aug 10, 2017, 12:20 PM IST

ಹೊಸದಿಲ್ಲಿ : ಕಳೆದ ಮೂರು ವರ್ಷಗಳಿಂದ ಶ್ವಾಸಕೋಶ ಮತ್ತು ಮೂತ್ರಪಿಂಡದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದ “ಪೀಪ್ಲಿ ಲೈವ್‌’ ಚಿತ್ರದ ಮೂಲಕ ಪ್ರಸಿದ್ದಿಗೆ ಬಂದಿದ್ದ ನಟ, ಸೀತಾರಾಮ ಪಾಂಚಾಲ್‌ ಅವರು ಇಂದು ಗುರುವಾರ ಬೆಳಗ್ಗೆ ತಮ್ಮ 54ರ ಹರೆಯದಲ್ಲಿ ನಿಧನ ಹೊಂದಿದ್ದಾರೆ. 

ಪಾಂಚಾಲ್‌ ನಿಧನ ಹೊಂದಿರುವುದನ್ನು ಅವರ ನಿಕಟ ಸಂಬಂಧಿಯೋರ್ವರು ದೃಢೀಕರಿಸಿದ್ದಾರೆ. 

ಮೊನ್ನೆ ಸೋಮವಾರವಷ್ಟೇ ಪಾಂಚಾಲ್‌ ಅವರು ಫೇಸ್‌ ಬುಕ್‌ನಲ್ಲಿ “ಕ್ಯಾನ್ಸರ್‌ ಉಲ್ಬಣಿಸುತ್ತಿದೆ; ಸ್ನೇಹಿತರೇ ನೆರವಾಗಿ, ನಿಮ್ಮ ಕಲಾಕಾರ್‌ ಭಾಯಿ ಸೀತಾರಾಮ್‌ ಪಾಂಚಾಲ್‌’ ಎಂಬ ಬರಹವನ್ನು ಪೋಸ್ಟ್‌ ಮಾಡಿದ್ದರು. 

ಸೀತಾರಾಮ್‌ ಪಾಂಚಾಲ್‌ ಅವರ ಮೊತ್ತ ಮೊದಲ ನಟನೆಯ ಚಿತ್ರ 1994ರಲ್ಲಿ ತೆರೆಕಂಡಿದ್ದ ಬ್ಯಾಂಡಿಟ್‌ ಕ್ವೀನ್‌. ಅನಂತರದಲ್ಲಿ ಅವರು ಹಲವು ಚಿತ್ರಗಳಲ್ಲಿ ನಟಿಸಿದ್ದು ಅವುಗಳಲ್ಲಿ ಪಾನ್‌ ಸಿಂಗ್‌ ತೋಮರ್‌, ದ ಲೆಜೆಂಡ್‌ ಆಫ್ ಭಗತ್‌ ಸಿಂಗ್‌, ಸ್ಲಂ ಡಾಗ್‌ ಮಿಲಿಯನೇರ್‌ ಮುಖ್ಯವಾಗಿವೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ