ಟಾಲಿವುಡ್ ಗೆ ಹಾರಿದ ಕಣ್ಸನ್ನೆ ಬೆಡಗಿ

Team Udayavani, Jun 23, 2019, 3:39 PM IST

ತನ್ನ ಕಣ್ಣೋಟದಿಂದಲೇ ಎಲ್ಲರ ಗಮನ ಸೆಳೆದ ಕಣ್ಸನ್ನೆ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣು ಈಗ ಟಾಲಿವುಡ್ ನತ್ತ ಬಿದ್ದಿದೆ. ಇನ್ನೂ ಹೆಸರಿಡದ ಚಿತ್ರದಲ್ಲಿ ತೆಲುಗು ಸ್ಟಾರ್ ನಿತಿನ್ ಜೊತೆ ಪ್ರಿಯಾ ವಾರಿಯರ್ ತೆರೆ ಹಂಚಿಕೊಳ್ಳಲಿದ್ದಾರೆ.

ಅಂದಹಾಗೆ ಈ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್ ಕೂಡಾ ನಾಯಕಿಯಾಗಿದ್ದಾರೆ. ರಾಕುಲ್ ಇದೇ ಮೊದಲ ಬಾರಿಗೆ ನಿತಿನ್ ಜೊತೆ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮೊದಲ ದಿನದ ಶೂಟ್ ನಲ್ಲಿ ನಿತಿನ್ ಜೊತೆ ಪ್ರಿಯಾ ಕಾಣಿಸಿಕೊಂಡಿದ್ದಾರೆ.

ಈ ಹೊಸ ಚಿತ್ರಕ್ಕೆ ಕೀರವಾಣಿ ಅವರ ಸಂಗೀತವಿದೆ. ಚಂದ್ರಶೇಖರ್ ಯೆಲಟಿ ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದು, ಭವ್ಯ ಕ್ರಿಯೇಶನ್ ನ ಆನಂದ್ ಪ್ರಸಾದ್ ನಿರ್ಮಾಣ ಮಾಡುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ