ಮೊದಲ ಮಗುವಿನ ಸಂತಸದಲ್ಲಿ ಪ್ರಿಯಾಂಕಾ ಚೋಪ್ರಾ- ನಿಕ್ ಜೋನಸ್
Team Udayavani, Jan 22, 2022, 8:35 AM IST
ಮುಂಬೈ: ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು ಮೊದಲ ಮಗುವಿನ ಸಂತಸದಲ್ಲಿದ್ದಾರೆ. ಸರೋಗಸಿ ( ಬಾಡಿಗೆ ತಾಯ್ತನ) ಮೂಲಕ ತಾವು ಪಾಲಕರಾಗಿ ಭಡ್ತಿ ಪಡೆದಿರುವುದಾಗಿ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
“ಸರೋಗಸಿ ಮೂಲಕ ನಾವು ಮಗುವನ್ನು ಸ್ವಾಗತಿಸಿದ್ದೇವೆ. ನಾವು ಕುಟುಂಬದ ಕಡೆಗೆ ಈ ವಿಶೇಷ ಸಮಯದಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿರೋದರಿಂದ ನಮಗೆ ಖಾಸಗಿತನ ಬೇಕಿದೆ. ಧನ್ಯವಾದಗಳು” ಎಂದು ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ 2018ರಲ್ಲಿ ವಿವಾಹವಾಗಿದ್ದರು. 39 ವರ್ಷದ ಪ್ರಿಯಾಂಕಾ ಚೋಪ್ರಾಗಿಂತ ನಿಕ್ 10 ವರ್ಷ ಕಿರಿಯ.
ಕಳೆದ ವರ್ಷದ ನವೆಂಬರ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ನಡುವಿನ ಸಂಬಂಧ ಹಳಸಿದೆ, ವಿಚ್ಛೇದನ ಪಡೆದಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದಕ್ಕೆ ಉತ್ತರ ನೀಡುವಂತೆ ಪ್ರಿಯಾಂಕಾ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡು ಗಂಡನ ಜೊತೆಗಿನ ಸಂಬಂಧ ಚೆನ್ನಾಗಿದೆ ಎಂದಿದ್ದರು.