ನನ್ನ ಪಾತ್ರದ ನಡೆ ನಿಗೂಢ : ಕೆಜಿಎಫ್ 2 ಬಗ್ಗೆ ರವೀನಾ ಮಾತು
Team Udayavani, Jan 6, 2021, 11:53 AM IST
ಬಾಲಿವುಡ್ ನಟಿ ರವೀನಾ ಟಂಡನ್, ಈ ಬಾರಿ “ಕೆಜಿಎಫ್-2′ ಚಿತ್ರದ ಮೂಲಕ ಮತ್ತೆ ಕನ್ನಡ ಸಿನಿ ಪ್ರಿಯರ ಮುಂದೆ ಬರುವ ಖುಷಿಯಲ್ಲಿದ್ದಾರೆ. ಇದೇ ವೇಳೆ “ಕೆಜಿಎಫ್ -2′ ಚಿತ್ರದ ಬಗ್ಗೆ ಮತ್ತು ಪಾತ್ರದ ಬಗ್ಗೆ ಮಾತನಾಡಿರುವ ರವೀನಾ ಒಂದಷ್ಟು ಅನುಭವಗಳನ್ನು ಹಂಚಿಕೊಂಡಿದ್ದಾರೆ.
“ನನ್ನ ಪಾತ್ರದ ಬಗ್ಗೆ ಈಗಲೇ ಹೆಚ್ಚೇನು ಹೇಳಲಾರೆ. ಏಕೆಂದರೆ, ಇದು ತುಂಬ ಕುತೂಹಲವಿಟ್ಟುಕೊಂಡಿರುವ ಮತ್ತು ಅಷ್ಟೇ ವಿಭಿನ್ನವಾಗಿರುವಂಥ ಪಾತ್ರ. ರಮಿಕಾ ಸೇನ್ ಎನ್ನುವಹೆಸರಿನ ಈ ಪಾತ್ರ ತುಂಬ ಸಂಕೀರ್ಣ ಮತ್ತು ಅಷ್ಟೇ ಪವರ್ಫುಲ್ ಆಗಿದೆ. ಪಾತ್ರದಲ್ಲೆ ಒಂಥರಾ ಗ್ರೇ ಶೇಡ್ ಇರುವುದರಿಂದ, ಯಾರೂ ಕೂಡ ನನ್ನ ಈ ಪಾತ್ರದಮುಂದಿನ ನಡೆಯನ್ನು ನಿರೀಕ್ಷಿಸ ಲಾಗದು’ ಎನ್ನುತ್ತಾರೆ ರವೀನಾ.
ಇದನ್ನೂ ಓದಿ : ಏಪ್ರಿಲ್ನಿಂದ ಸ್ಟಾರ್ಸ್ ದರ್ಬಾರ್
“ಈ ಸಿನಿಮಾದ ಸ್ಟೋರಿ ಲೈನ್ ಕೇಳಿದಾಗಲೇ, ತುಂಬಾ ಇಷ್ಟವಾಯ್ತು. ನಾನು “ಕೆಜಿಎಫ್’ ಮೊದಲ ಭಾಗ ನೋಡುವ ಮೊದಲೇ ನಿರ್ದೇಶಕ ಪ್ರಶಾಂತ್ ನೀಲ್ ಈ ಕಥೆಯ ಎಳೆಯನ್ನ ವಿವರಿಸಿದ್ದರು. ಆನಂತರ ಸಿನಿಮಾ ನೋಡಿದ ಮೇಲಂತೂ ಅದ್ಭುತ ಎನಿಸಿತು. ಹೊಸತರದ ಸಿನಿಮಾಕ್ಕೆ ತೆರೆದುಕೊಳ್ಳಲು ಬಯಸುತ್ತಿದ್ದ ನನಗೆ ಈ ಥರದ ಪಾತ್ರ ತುಂಬಇಷ್ಟವಾಯ್ತು. ಸ್ಟೋರಿ ಲೈನ್ ಮತ್ತು ಅದರ ನಿರೂಪಣೆ ಎರಡೂ ಹೊಸತರವಾಗಿರುವುದುದರಿಂದ, ಪಾತ್ರದ ಮೇಲೆ ಸಾಕಷ್ಟು ಕುತೂಹಲವಿದೆ’ ಎನ್ನುವುದು ರವೀನಾ ಮಾತು.
ಇನ್ನು ನಟ ಯಶ್ ಜೊತೆ ನಟಿಸಿರೋದು ಕೂಡಾ ಖುಷಿ ಕೊಟ್ಟಿದೆ ಎಂದಿರುವ ರವೀನಾ, ಯಶ್ ತುಂಬಾ ಪ್ರತಿಭಾವಂತ ನಟ. ಅವರೊಂದಿಗೆ ಕೆಲಸ ಮಾಡಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
MUST WATCH
ಹೊಸ ಸೇರ್ಪಡೆ
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ