ರಿಲೀಸ್ ಮುನ್ನವೆ RRR ಬ್ಯುಝಿನೆಸ್:ಸೆಟ್ಲೈಟ್-ಡಿಜಿಟಲ್ ರೈಟ್ಸ್ ಸೇಲಾಗಿದ್ದು ಎಷ್ಟು ಕೋಟಿಗೆ ?
Team Udayavani, May 22, 2021, 5:28 PM IST
ಖ್ಯಾತ ನಿರ್ದೇಶಕ ಎಸ್. ಎಸ್ .ರಾಜಮೌಳಿ ಸಿನಿಮಾಗಳಂದ್ರೆನೆ ಹಾಗೆ. ಸೆಟ್ಟೇರಿದಾಗಿನಿಂದಲೆ ಸಖತ್ ಹೈಪ್ ಕ್ರಿಯೆಟ್ ಮಾಡುತ್ತವೆ. ಬಿಡುಗಡೆಯ ಮುನ್ನವೆ ಒಳ್ಳೆಯ ಬ್ಯಝಿನೆಸ್ ಶುರು ಮಾಡಿ ಬಿಡುತ್ತವೆ. ಇದೀಗ ಬಹುನಿರೀಕ್ಷಿತ RRR ಸಿನಿಮಾ ಕೂಡ ಅದೇ ಹಾದಿಯಲ್ಲಿ ಸಾಗಿದೆ.
ಹೌದು, ಬ್ಲಾಕ್ ಬಸ್ಟರ್ ಸಿನಿಮಾ ‘ಬಾಹುಬಲಿ’ ಖ್ಯಾತಿಯ ನಿರ್ದೇಶಕ ಎಸ್.ಎಸ್. ರಾಜಮೌಳಿ RRR ಸಿನಿಮಾ ಕೈಗೆತ್ತಿಕೊಂಡಿರುವುದು ಎಲ್ಲರಿಗೂ ಗೊತ್ತೆ ಇದೆ. ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ ಅವರು ಮುಖ್ಯ ಭೂಮಿಕೆಯಲ್ಲಿರುವ ಈ ಮಲ್ಟಿ ಸ್ಟಾರ್ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಬಹು ಬಜೆಟ್ ನ ಈ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದು ಪಕ್ಕಾ ಎನ್ನುವ ಮಾತುಗಳು ಕೇಳಿ ಬರುತ್ತವೆ. ಸಿನಿ ಪ್ರೇಮಿಗಳ ತುಟಿಗಳಿಂದ ಹೊರ ಹೊಮ್ಮುತ್ತಿರುವ ಈ ಮಾತುಗಳು ನಿಜವಾಗಬಹುದು ಎನ್ನುವ ನಿರೀಕ್ಷೆ ಇದೀಗ ದಟ್ಟವಾಗಿವೆ. ಇದಕ್ಕೆ ಕಾರಣ ಈ ಚಿತ್ರದ ಸೆಟ್ ಲೈಟ್ ಹಾಗೂ ಡಿಜಿಟಿಲ್ ರೈಟ್ಸ್ ಬಹುಕೋಟಿಗೆ ಮಾರಾಟವಾಗಿರುವುದು.
ಬಿಡುಗಡೆಯ ಮುನ್ನವೆ RRR ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರವಸೆ ಮೂಡಿಸಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ತೆರೆಗೆ ಬಂದ ನಂತರ ನೂರಾರು ಕೋಟಿ ಹಣ ಬಾಚಿಕೊಳ್ಳುತ್ತದೆ ಎನ್ನುವ ನಿರೀಕ್ಷೆ ಮೂಡಿಸಿದೆ. ಇದರ ಶುಭಾರಂಭ ಎನ್ನುವಂತೆ ಇದೀಗ ಸೆಟ್ ಲೈಟ್ ಹಾಗೂ ಡಿಜಿಟಪ್ ರೈಟ್ಸ್ ಜೀ ಗ್ರೂಪ್ ಒಡೆತನದ ಜೀ5 ವಾಹಿನಿ 325 ಕೋಟಿ ರೂಪಾಯಿಗೆ ಖರೀದಿಸಿದೆ ಎನ್ನುವ ಸುದ್ದಿ ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?