
ʼಆರ್ ಆರ್ ಆರ್ʼಗೆ ʼಆಸ್ಕರ್ʼ ಬಂದದ್ದು ನನ್ನಿಂದಲೇ.. ಅಜಯ್ ದೇವಗನ್ ಮಾತು ವೈರಲ್
Team Udayavani, Mar 25, 2023, 10:20 AM IST

ಮುಂಬಯಿ: ಎಸ್ ಎಸ್ ರಾಜಮೌಳಿ ಅವರ ʼಆರ್ ಆರ್ ಆರ್ʼ ಆಸ್ಕರ್ ಗೆದ್ದು ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದೆ. ಬೆಸ್ಟ್ ಒರಿಜಿನಲ್ ಹಾಡು ವಿಭಾಗದಲ್ಲಿ ʼನಾಟು ನಾಟುʼ ಆಸ್ಕರ್ ಪಡೆದುಕೊಂಡಿದ್ದು ಗೊತ್ತೇ ಇದೆ.
95ನೇ ಅಕಾಡೆಮಿ ವೇದಿಕೆಯಲ್ಲಿ ʼನಾಟು ನಾಟುʼ ಪ್ರದರ್ಶನಗೊಂಡಿತ್ತು. ʼಆರ್ ಆರ್ ಆರ್ʼ ಹತ್ತಾರು ದಾಖಲೆಗಳನ್ನು ಬರೆದಿದೆ. ದೇಶ-ವಿದೇಶದಲ್ಲಿ ʼನಾಟು ನಾಟುʼ ಹಾಡು ಮೋಡಿ ಮಾಡಿದೆ. ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನದ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದಾರೆ.
ʼನಾಟು ನಾಟುʼ ಹಾಡಿಗೆ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಕೂಡ ಲಭಿಸಿದೆ.
ಇದನ್ನೂ ಓದಿ: ಕರಾವಳಿ ಪಡೆಯಲು ಕೈ ಕಸರತ್ತು; ಹಲವು ಹೊಸಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್
ʼಆರ್ ಆರ್ ಆರ್ʼ ಸಿನಿಮಾದಲ್ಲಿ ನಟಿಸಿರುವ ಅಜಯ್ ದೇವಗನ್ ʼನಾಟು ನಾಟುʼ ಹಾಡಿಗೆ ಆಸ್ಕರ್ ಬಂದ ಬಗ್ಗೆ ಮಾತನಾಡಿದ್ದೀಗ ವೈರಲ್ ಆಗಿದೆ. ಹಿಂದಿಯ ಜನಪ್ರಿಯ ಕಾರ್ಯಕ್ರಮ ʼ ಕಪಿಲ್ ಶರ್ಮಾ ಶೋʼ ನಲ್ಲಿ ʼಭೋಲಾ’ ಸಿನಿಮಾದ ಪ್ರಮೋಷನ್ ವೇಳೆ ʼಆರ್ ಆರ್ ಆರ್ʼ ತಂಡಕ್ಕೆ ಆಸ್ಕರ್ ಬಂದಿದೆ ಏನು ಹೇಳುತ್ತೀರಿ ಎಂದು ಕಪಿಲ್ ಕೇಳಿದ್ದಾರೆ.
ಇದಕ್ಕೆ ಅಜಯ್ ದೇವಗನ್ ಹಾಸ್ಯವಾಗಿಯೇ ʼʼನಾಟು ನಾಟು ಹಾಡಿಗೆ ಆಸ್ಕರ್ ಬಂದದ್ದು ನನ್ನಿಂದ, ನಾನು ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದರೆ ಏನಾಗುತ್ತಿತ್ತು” ಎಂದಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ನಕ್ಕಿದ್ದಾರೆ. ಸದ್ಯ ಈ ಕಾರ್ಯಕ್ರಮದ ಪ್ರೋಮೋ ಮಾತ್ರ ರಿಲೀಸ್ ಆಗಿದೆ.
ಅಜಯ್ ದೇವಗನ್, ಆಲಿಯಾ ಭಟ್ ಕೂಡ ʼಆರ್ ಆರ್ ಆರ್ʼ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
To ye Raaz hai #NaatuNaatuSong ko Oscar milne ka 😯 pic.twitter.com/P9GXv4sy7K
— Pooran Marwadi (@Pooran_marwadi) March 24, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam actor: ಮಲಯಾಳಂನ ಖ್ಯಾತ ಪೋಷಕ ನಟ ಹರೀಶ್ ಪೆಂಗನ್ ನಿಧನ

83ರ ದಿಗ್ಗಜ ನಟನ 29ರ ಪ್ರೇಯಸಿ ಗರ್ಭಿಣಿ: 4ನೇ ಬಾರಿ ತಂದೆಯಾಗಲಿದ್ದಾರೆ Al Pacino

ಮೊದಲ ಪತ್ನಿಯಿಂದ ವಿಚ್ಛೇದನ, 2ನೇ ಪತ್ನಿಯ ಭೇಟಿ.. ಮುಕ್ತವಾಗಿ ಮಾತನಾಡಿದ Ashish Vidyarthi

ನಟಿ Akanksha Dubey Case: ನಟಿಯ ಒಳ ಉಡುಪಿನಲ್ಲಿ ವೀರ್ಯ ಪತ್ತೆ; ತನಿಖೆ ಚುರುಕು

Ira Khan: ದುಬಾರಿ ಕಾರು ಬಿಟ್ಟು ಆಟೋದಲ್ಲಿ ಪ್ರಯಾಣಿಸಿದ ಆಮಿರ್ ಪುತ್ರಿ; ಫ್ಯಾನ್ಸ್ ಖುಷ್