‘ಸಾಹೋ’ : ಆಗಸ್ಟ್ 15ಕ್ಕಲ್ಲ ; 30ಕ್ಕೆ ಬಿಡುಗಡೆ

ಬಾಹುಬಲಿಯ ಪ್ರಭಾಸ್‌ ರ ಹೊಸ ಥ್ರಿಲ್ಲರ್ ಚಿತ್ರ ಸಾಹೋ ಮೇಲೆ ಹೆಚ್ಚಿದ ನಿರೀಕ್ಷೆ

Team Udayavani, Aug 11, 2019, 8:20 PM IST

ಇಂಥದೊಂದು ಕುತೂಹಲ ಸಿನಿಮಾ ವೀಕ್ಷಕರಲ್ಲಿ ಹುಟ್ಟು ಹಾಕಿರುವುದಂತೂ ಸತ್ಯ. ಅದರಲ್ಲೂ ಪ್ರಭಾಸ್‌ ನ ಅಭಿಮಾನಿಗಳಲ್ಲಂತೂ ತವಕ ಹೆಚ್ಚಾಗತೊಡಗಿದೆ. ಶನಿವಾರವಷ್ಟೇ ಈ ಬಹುಭಾಷೆಯ ಚಿತ್ರದ ಟ್ರೇಲರ್‌ ಗಳನ್ನು ಮುಂಬಯಿಯಲ್ಲಿ ಬಿಡುಗಡೆ ಮಾಡಲಾಯಿತು. ಬಿಡುಗಡೆಗೊಂಡ ಒಂದೇ ದಿನದಲ್ಲಿ ‘ಸಾಹೋ’ ಟ್ರೇಲರನ್ನು ಮೂರೂ ಕಾಲು ಲಕ್ಷ ಜನ ವೀಕ್ಷಿಸಿದ್ದಾರೆ.

ಸುಜಿತ್‌ ನಿರ್ದೇಶಿಸಿರುವ ಈ ಚಿತ್ರ ಬಾಹುಬಲಿಗಿಂತ ಭಿನ್ನ. ಅದನ್ನು ಸ್ವತಃ ಪ್ರಭಾಸ್ ಅವರೇ ಟ್ರೇಲರ್‌ ಬಿಡುಗಡೆ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಬಾಹುಬಲಿಯ ಬಳಿಕ ಪ್ರಭಾಸ್ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಮುಗಿಲು ಮುಟ್ಟಿದೆ. ಇಷ್ಟು ಮಾತ್ರವಲ್ಲದೇ ಈ ಚಿತ್ರ ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆಗೊಳ್ಳುತ್ತಿದೆ. ಒಟ್ಟೂ ಬಜೆಟ್‌ ಲೆಕ್ಕಾಚಾರ ಮಾಡಿದರೆ 300 ಕೋಟಿಯ ಆಸುಪಾಸು.

ನನಗೂ ಕುತೂಹಲ
‘ಬಾಹುಬಲಿಯಿಂದ ಹೊರಬರುವುದೆಂದರೆ ಬಹಳ ಕಷ್ಟ. ಅಂದುಕೊಂಡಷ್ಟು ಸುಲಭವಲ್ಲ. ಆದರೂ ಪ್ರಯತ್ನಿಸಿದ್ದೇನೆ. ಸುಜಿತ್‌ ಈ ಸಿನಿಮಾವನ್ನು ತಮ್ಮ ಚಿತ್ರಕಥೆಯಿಂದಲೇ ಕಟ್ಟಿಕೊಡುತ್ತಿದ್ದಾರೆ. ನಿಜಕ್ಕೂ ಇದು ಚಿತ್ರಕಥೆಯ ಮೇಲೆಯೇ ನಿಂತ ಸಿನಿಮಾ. ಹಲವು ತಿರುವುಗಳನ್ನು ಒಳಗೊಂಡಿರುವ ಕಥೆಯಿದು. ನನ್ನ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲ ನನ್ನಲ್ಲೂ ಇದೆ. ಸಾಹೋ ಚಿತ್ರದಲ್ಲಿ ನನ್ನ ಪಾತ್ರವನ್ನು ಪ್ರೇಕ್ಷಕರು ಸ್ವೀಕರಿಸಬಹುದು ಎಂಬ ನಂಬಿಕೆಯಿದೆ’ ಎಂದವರು ಪ್ರಭಾಸ್‌.

ಬಾಹುಬಲಿಯೇ ಬೇರೆ, ಸಾಹೋವೇ ಬೇರೆ ಎರಡನ್ನೂ ಒಟ್ಟಿಗೆ ಇಟ್ಟು ಹೋಲಿಸಬೇಡಿ. ಬಾಹುಬಲಿ ಇತಿಹಾಸ ನಿರ್ಮಿಸಲೆಂದು ಮಾಡಿದ್ದು. ಸಾಹೋ ಸಂಪೂರ್ಣವಾಗಿ ಸಿನಿ ಪ್ರೇಕ್ಷಕರನ್ನು ಮತ್ತು ಅಭಿಮಾನಿಗಳನ್ನು ರಂಜಿಸಲು, ಖುಷಿಕೊಡಲು ಮಾಡಿದ್ದು ಎಂದು ಹೇಳಿದರು ಪ್ರಭಾಸ್.

ಸುಮಾರು ಎರಡು ವರ್ಷ ಈ ಚಿತ್ರದಲ್ಲಿ ಪ್ರಭಾಸ್ ತೊಡಗಿಸಿಕೊಂಡಿದ್ದಾರೆ. ಆಸ್ಟ್ರಿಯಾ, ದುಬಾಯಿ, ಹೈದರಾಬಾದ್‌, ಮುಂಬಯಿ, ಅಬುಧಾಬಿ ಮತ್ತಿತರ ಕಡೆ ಚಿತ್ರೀಕರಣ ನಡೆದಿದೆ. ಪ್ರಭಾಸ್ ಜತೆ ಶ್ರದ್ಧಾ ಕಪೂರ್‌, ಜಾಕಿಶ್ರಾಫ್, ನೀಲ್‌ ನಿತಿನ್ ಮುಕೇಶ್, ಚುಂಕಿಪಾಂಡೆ, ಪ್ರಕಾಶ್‌ ಬೆಳವಾಡಿ, ಅರುಣ್‌ ವಿಜಯ್‌, ಜಾಕ್ವೆಲಿನ್‌ ಫೆರ್ನಾಂಡಿಸ್‌ ಎಲ್ಲರೂ ನಟಿಸಿದ್ದಾರೆ.

ಆಗಸ್ಟ್‌ 30 ಕ್ಕೆ ಬಿಡುಗಡೆ
ಮೊದಲ ಲೆಕ್ಕಾಚಾರದಂತೆ ಆಗಸ್ಟ್‌ 15 ರಂದು ಈ ಚಿತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಅದೇ ದಿನ ಅಕ್ಷಯ್‌ ಕುಮಾರ್‌ ರ ‘ಮಿಶನ್‌ ಮಂಗಲ್’ ಹಾಗೂ ಜಾನ್‌ ಅಬ್ರಹಾಂರ ‘ಬಾಟ್ಲಾ ಹೌಸ್‌’ ಬಿಡುಗಡೆಯಾಗುತ್ತಿದೆ. ಇದರ ಮಧ್ಯೆ ತಮ್ಮ ಚಿತ್ರ ಬೇಡ ಎಂದು ‘ಸಾಹೋ’ ನಿರ್ಮಾಪಕರು ಆಗಸ್ಟ್‌ 30 ಕ್ಕೆ ದಿನಾಂಕ ನಿಗದಿಪಡಿಸಿದ್ದಾರೆ.

ಪ್ರಭಾಸ್‌ ಅಭಿಮಾನಿಗಳು ಬಾಹುಬಲಿ ಗುಂಗಿನಿಂದ ಹೊರಬಂದು ಈ ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲ ಎಲ್ಲೆಡೆ ಇದೆ. ಹಾಗೆಯೇ ಪ್ರಭಾಸ್‌ ಮೇಲೆ ನಿರೀಕ್ಷೆಯೂ ಹೆಚ್ಚಾಗಿದೆ.

– ಅಮೃತಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ