‘ಸಾಹೋ’ ಸ್ಪೆಷಲ್ ಸಾಂಗ್ ಗೆ ಪ್ರಭಾಸ್ ಜೋಡಿಯಾಗಿ ಜಾಕ್ವೆಲಿನ್

Team Udayavani, Aug 19, 2019, 8:42 PM IST

ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರದಿಂದ ತಾರಾ ಮೌಲ್ಯಕ್ಕೇರಿದ ಟಾಲಿವುಡ್ ನ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಬಹುನಿರೀಕ್ಷಿತ ಮುಂದಿನ ಚಿತ್ರ ‘ಸಾಹೋ’ ಈಗಾಗಲೇ ತನ್ನ ಮೇಕಿಂಗ್ ಕಾರಣಕ್ಕಾಗಿ ಸಿನಿ ಪ್ರಿಯರ ಗಮನವನ್ನು ಸೆಳೆದಿದೆ. ಇನ್ನು ಪ್ರಭಾಸ್ ಅಭಿಮಾನಿಗಳಂತೂ ಈ ಚಿತ್ರ ಯಾವಾಗ ಬಿಡುಗಡೆಯಾಗುವುದೋ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಸಾಹೋ ಚಿತ್ರದ ಟ್ರೈಲರ್ ಸಹ ಇತ್ತೀಚೆಗೆ ಬಿಡುಗಡೆಗೊಂಡು ಪ್ರಭಾಸ್ ಅಭಿಮಾನಿಗಳಿಗೆ ಉಪ್ಪಿನಕಾಯಿ ರುಚಿ ನೀಡಿತ್ತು.

ಇದೀಗ ಇನ್ನೊಂದು ಹಾಟ್ ಸುದ್ದಿ ಸಾಹೋ ಚಿತ್ರದ ಕುರಿತಾಗಿ ಹೊರಬಿದ್ದಿದೆ. ಈ ಚಿತ್ರದಲ್ಲಿ ಬರುವ ಒಂದು ಬಿಸಿ ಬಿಸಿ ಹಾಡಿಗೆ ಪ್ರಭಾಸ್ ಮತ್ತು ಜಾಕ್ಚೆಲಿನ್ ಫೆರ್ನಾಂಡಿಸ್ ಅವರು ಸ್ಟೆಪ್ ಹಾಕಿದ್ದಾರೆ. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಈ ಹಾಡಿನ ಟ್ರ್ಯಾಕ್ ಅನ್ನು ಬಿಡುಗಡೆಗೊಳಿಸಲಾಯಿತು.

ಇನ್ನೊಂದೆಡೆ ಪ್ರಭಾಸ್ ಮತ್ತು ಜಾಕ್ವಲಿನ್ ಅವರ ಹಾಡಿನ ಸನ್ನಿವೇಶದ ಫೊಟೋ ಒಂದು ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು ಈ ಫೊಟೋದಲ್ಲಿ ಈ ಜೋಡಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದೆ.

ಸಾಹೋ ಚಿತ್ರದಲ್ಲಿ ಶ್ರದ್ಧಾ ಕಪೂರ್ ಅವರು ಪ್ರಭಾಸ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಸಾಹಸ ದೃಶ್ಯಗಳು ಚಿತ್ರರಸಿಕರಿಗೆ ರಸದೌತಣ ನೀಡುವಂತಿದ್ದರೆ ಜಾಕ್ವೆಲಿನ್ – ಪ್ರಭಾಸ್ ಜೋಡಿಯ ಈ ಹಾಡು ಚಿತ್ರದ ಪ್ರಮುಖ ಹೈ ಲೈಟ್ ಆಗುವದರಲ್ಲಿ ಅನುಮಾನವೇ ಇಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ