ಸಲ್ಲು ನಂ.1, ಶಾರೂಖ್ ನಂ.2
Team Udayavani, Dec 23, 2017, 7:47 AM IST
ಮುಂಬಯಿ: ಸಲ್ಮಾನ್ ಖಾನ್ ಮತ್ತೂಮ್ಮೆ ಅತಿ ಹೆಚ್ಚು ಆದಾಯ ಹೊಂದಿರುವ ಸೆಲೆಬ್ರಿಟಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿ ದ್ದಾರೆ. ಪಟ್ಟಿಯ ಮೊದಲ 10ರಲ್ಲಿ ಸ್ಥಾನ ಉಳಿಸಿಕೊಂಡ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಮಾತ್ರ!
2017ರ ಸಾಲಿನ 100 ಮಂದಿ ಸೆಲೆಬ್ರಿಟಿಗಳ ಆದಾಯದ ಆಧಾರದ ಮೇಲೆ ಸಿದ್ಧಪಡಿಸಲಾದ ಪಟ್ಟಿ ಪ್ರಕಟಿಸಿದ್ದು, ಸಲ್ಮಾನ್ ಸತತ ಎರಡನೇ ವರ್ಷ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಫೋರ್ಬ್ಸ್ ಲೆಕ್ಕಾಚಾರದ ಪ್ರಕಾರ ಸಲ್ಮಾನ್ ಅವರ ವಾರ್ಷಿಕ ಆದಾಯ ಬರೋಬ್ಬರಿ 232.83 ಕೋಟಿ ರೂ. ಆಗಿದೆ. ಇದು 2016, ಅಕ್ಟೋಬರ್ 1ರಿಂದ 2017, ಸೆಪ್ಟೆಂಬರ್ 30ರ ವರೆಗಿನ ಅವಧಿಯ ಆದಾಯ ಎಂದು ಸಂಸ್ಥೆ ಹೇಳಿದೆ. ಬ್ರಾಂಡ್‌ಗಾಗಿ ಕಂಪೆನಿಗಳ ಜತೆ ಮಾಡಿಕೊಂಡಿರುವ ಒಪ್ಪಂದದ ಆದಾಯವೂ ಇದರಲ್ಲಿ ಸೇರಿದೆ.
ಇನ್ನು ಶಾರೂಖ್ ಖಾನ್ ಕೂಡ 2ನೇ ಸ್ಥಾನ ಉಳಿಸಿಕೊಂಡಿದ್ದು, ಅವರ ಆದಾಯ 170.5 ಕೋಟಿ ರೂ. ಆಗಿದ್ದು, 100.72 ಕೋಟಿ ರೂ. ಆದಾಯ ಹೊಂದಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂಬಾಲಿಸಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಪ್ರಸಕ್ತ ಸಾಲಿನ ಪಟ್ಟಿಯಲ್ಲಿ ದಕ್ಷಿಣ ಭಾರತದ 13 ಮಂದಿ ನಟರಿದ್ದು, ಕಳೆದ ವರ್ಷ 11 ಮಂದಿ ಇದ್ದರು.
ಉಳಿದಂತೆ ನಟಿ ಪ್ರಿಯಾಂಕಾ ಚೋಪ್ರಾ 68 ಕೋಟಿ ರೂ. ಗಳಿಕೆಯಿಂದ 7ನೇ ಸ್ಥಾನದಲ್ಲಿದ್ದರೆ, 57.25 ಕೋಟಿ ರೂ. ಆದಾಯ ಇರುವ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರನ್ನು ಹಿಂಬಾಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಾಕ್ವೆಲಿನ್ ಫರ್ನಾಂಡಿಸ್ ಗೆ ಅಬುಧಾಬಿಗೆ ತೆರಳಲು ಕೋರ್ಟ್ ಅನುಮತಿ
‘ಸ್ವತಂತ್ರ ವೀರ್ ಸಾವರ್ಕರ್’ ಫಸ್ಟ್ ಲುಕ್ ಹಂಚಿಕೊಂಡ ರಣದೀಪ್ ಹೂಡಾ
ಕಂಗನಾ ರಣಾವತ್ ‘ಧಾಕಡ್’ 8 ದಿನದಲ್ಲಿ ಗಳಿಸಿದ್ದು ಕೇವಲ 4,420 ರೂ..!?
10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ
ಕರಣ್ ಜೋಹರ್ ಪಾರ್ಟಿಯಲ್ಲಿ ತನ್ನ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಹೃತಿಕ್ ರೋಶನ್