ಟ್ರೆಂಡಿಂಗ್: ಸಲ್ಮಾನ್ ಖಾನ್ ಪತ್ನಿ, ಮಗಳು ದುಬೈನಲ್ಲಿ ವಾಸವಾಗಿದ್ದಾರಾ? ಖಾನ್ ಹೇಳಿದ್ದೇನು
ನನ್ನ 9ನೇ ವಯಸ್ಸಿನಿಂದ ಅದೇ ಅಪಾರ್ಟ್ ಮೆಂಟ್ ನಲ್ಲಿದ್ದೇನೆ
Team Udayavani, Jul 22, 2021, 12:47 PM IST
ಮುಂಬಯಿ: ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮೂಲಕ ಮಾಡುವ ಆರೋಪ ಯಾವ ಹಂತಕ್ಕೆ ಬೇಕಾದರೂ ತಲುಪಬಹುದು. ಅದು ವ್ಯಕ್ತಿಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಆಲೋಚಿಸುವುದಿಲ್ಲ, ಕೊನೆಗೆ ಈ ಟ್ರೋಲ್ ಸೆಲೆಬ್ರಿಟಿಗೆ ಕೆಟ್ಟ ರೀತಿಯಲ್ಲಿ ತಲುಪಿರುತ್ತದೆ…ಇದಕ್ಕೆ ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಹೊಸ ಸೇರ್ಪಡೆಯಾಗಿದ್ದಾರೆ!
ಸಲ್ಮಾನ್ ಖಾನ್ ಪತ್ನಿ ಮಗಳು ದುಬೈಯಲ್ಲಿ ರಹಸ್ಯವಾಗಿ ವಾಸವಾಗಿದ್ದಾರಾ?
ನಟ ಸಲ್ಮಾನ್ ಖಾನ್ ಇತ್ತೀಚೆಗೆ ಸಹೋದರ ಅರ್ಬಾಝ್ ಖಾನ್ ಅವರ ಟಾಕ್ ಶೋ ಪಿಂಚ್-2ರಲ್ಲಿ ಪಾಲ್ಗೊಂಡಿದ್ದ ವೇಳೆ ಹಲವಾರು ಊಹಾಪೋಹಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ಶೋನ ಮುಖ್ಯ ಉದ್ದೇಶವೇ ಟ್ರೋಲ್ಸ್ ಗಳ ಬಗ್ಗೆ ಅಥಿತಿಗಳು ಪ್ರತಿಕ್ರಿಯೆಯನ್ನು ನೀಡುವುದಾಗಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರ ವಿವಾಹದ ಕುರಿತು ಊಹಾಪೋಹದ ಟ್ರೋಲ್ ಹರಿದಾಡಿತ್ತು. ಅದರಲ್ಲಿ ಒಂದು ಟ್ರೋಲ್ ಹೀಗಿದೆ…ಖಾನ್ ನೀವು ನಿಮ್ಮ ವೈಯಕ್ತಿಕ ಜೀವನ ಮುಚ್ಚಿಡುತ್ತಿದ್ದೀರಿ, ಭಾರತೀಯರಿಗೆ ಗೊತ್ತು ದುಬೈಯಲ್ಲಿ ನಿಮ್ಮ ಪತ್ನಿ ನೂರ್ ತನ್ನ 17 ವರ್ಷದ ಮಗಳ ಜತೆ ವಾಸವಾಗಿದ್ದಾರೆ. ನೀವು ಎಲ್ಲಿಯವರೆಗೆ ಭಾರತದ ಜನರನ್ನು ಮೂರ್ಖರನ್ನಾಗಿಸುತ್ತೀರಿ” ಎಂದು ಪ್ರಶ್ನಿಸಿದ್ದರು.
ಸಲ್ಮಾನ್ ಖಾನ್ ಹೇಳಿದ್ದೇನು?
“ಇಂತಹ ಜನಗಳಿಗೆ ತುಂಬಾ ಉತ್ತಮವಾದ ಮಾಹಿತಿ ಇರುತ್ತದೆ ಎಂದು ವ್ಯಂಗ್ಯವಾಡಿರುವ ಸಲ್ಮಾನ್ ಖಾನ್, ಇವೆಲ್ಲವೂ ಕೇವಲ ಊಹಾಪೋಹ. ಈ ಬಗ್ಗೆ ಮಾತನಾಡುವ ವ್ಯಕ್ತಿ ಯಾರೆಂಬುದು ನನಗೆ ಗೊತ್ತಿಲ್ಲ. ಆತ ಎಲ್ಲಿ ಪೋಸ್ಟ್ ಮಾಡಿದ್ದಾನೆ, ನಾನು ಈ ವ್ಯಕ್ತಿಗೆ ಪ್ರತಿಕ್ರಿಯೆ ನೀಡಬೇಕೆ? ಸಹೋದರ, ನನಗೆ ಪತ್ನಿ ಇಲ್ಲ, ನಾನು ಭಾರತದಲ್ಲಿಯೇ ಗ್ಯಾಲಕ್ಸಿ ಅಪಾರ್ಟ್ ಮೆಂಟ್ಸ್ ನಲ್ಲಿ ವಾಸವಾಗಿದ್ದೇನೆ. ನನ್ನ 9ನೇ ವಯಸ್ಸಿನಿಂದ ಅದೇ ಅಪಾರ್ಟ್ ಮೆಂಟ್ ನಲ್ಲಿದ್ದೇನೆ. ನಾನು ಎಲ್ಲಿ ವಾಸಿಸುತ್ತಿದ್ದೇನೆ ಎಂಬುದು ಎಲ್ಲಾ ಭಾರತೀಯರಿಗೂ ಗೊತ್ತು ಎಂದು ತಿಳಿಸಿದ್ದಾರೆ.
ಈ ಶೋನಲ್ಲಿ ಸಲ್ಮಾನ್ ಖಾನ್ ಅವರಲ್ಲಿ ಸಾಮಾಜಿಕ ಜಾಲತಾಣದ ಕನ್ಸಲ್ ಟಂಟ್ ಆಗಿ ಕತ್ರಿನಾ ಅಥವಾ ದಿಶಾ ಪಟಾನಿ ಅವರಲ್ಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ, ಕತ್ರಿನಾ ಎಂಬುದಾಗಿ ಖಾನ್ ಉತ್ತರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ತುಂಬಾ ಸೂಕ್ಷ್ಮತೆಯಿಂದ ಇದ್ದಾರೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅನುರಾಗ್ ಕಶ್ಯಪ್ ವಿರುದ್ಧ ವಿವೇಕ್ ರಂಜನ್ ಅಗ್ನಿಹೋತ್ರಿ ಕಿಡಿ
ಸೈಮಾ ಅವಾರ್ಡ್ಸ್ ಗೆ ಕನ್ನಡದ 3 ಚಿತ್ರಗಳು ನಾಮಿನೇಟ್: ಪ್ರಮುಖ ನಾಮಿನೇಟ್ ಪಟ್ಟಿ ಇಲ್ಲಿದೆ
ಇಡಿ ಬಲೆಯೊಳಗೆ ಸಿಲುಕಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಇನ್ನಷ್ಟು ಸಂಕಷ್ಟ
ತಾಪ್ಸಿಗಿಂತ ದೊಡ್ಡ …. ನನಗಿದೆ: ಅನುರಾಗ್ ಕಶ್ಯಪ್ ಸಂದರ್ಶನದ ಮಾತು ವೈರಲ್!
ಆಮಿರ್, ಹೃತಿಕ್ ಆಯ್ತು ಈಗ ಶಾರುಖ್ ಖಾನ್ ʼಪಠಾಣ್ʼಗೂ ತಟ್ಟಿತು boycott ಬಿಸಿ