
Jawan: ಓಟಿಟಿ ರಿಲೀಸ್ ಗೆ ರೆಡಿಯಾದ ʼಜವಾನ್ʼ; ಯಾವುದರಲ್ಲಿ ಸ್ಟ್ರೀಮ್?
Team Udayavani, Sep 19, 2023, 4:13 PM IST

ಮುಂಬಯಿ: ಶಾರುಖ್ ಖಾನ್ ಅವರ ʼಜವಾನ್ʼ ಸಿನಿಮಾ ಬಿಟೌನ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಸಿನಿಮಾ ಥಿಯೇಟರ್ ನಲ್ಲಿ ಇನ್ನು ಕೂಡ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಕಾಲಿವುಡ್ ನಿರ್ದೇಶಕ ಅಟ್ಲಿ ಕುಮಾರ್ ಮೊದಲ ಬಾರಿ ಬಿಟೌನ್ ಗೆ ಎಂಟ್ರಿ ಕೊಟ್ಟಿದ್ದು, ʼಜವಾನ್ʼ ಮೂಲಕ ಇಲ್ಲಿನ ಪ್ರೇಕ್ಷಕರ ಮನಗೆದ್ದಿದ್ದಾರೆ. ಬಾಲಿವುಡ್ ಸೇರಿದಂತೆ ಟಾಲಿವುಡ್, ಕಾಲಿವುಡ್ ನಲ್ಲಿ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಶೀಘ್ರದಲ್ಲಿ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ.
ʼಪಠಾಣ್ʼ ಬಳಿಕ ಶಾರುಖ್ ಖಾನ್ ಮತ್ತೊಂದು ಮೆಗಾ ಹಿಟ್ ಕೊಟ್ಟಿದ್ದಾರೆ. ಇದರ ಜೊತೆ ಅಟ್ಲಿ ಮತ್ತೆ ಶಾರುಖ್ ಅವರೊಂದಿಗೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಈ ನಡುವೆ ಸಿನಿಮಾದ ಓಟಿಟಿ ರಿಲೀಸ್ ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ.
ಇದನ್ನೂ ಓದಿ: ಅಂದು Chandrayaan-3 ಯಶಸ್ಸಿಗೆ ಶ್ರಮಿಸಿದಾತ ಇಂದು ರಸ್ತೆಬದಿಯಲ್ಲಿ ಇಡ್ಲಿ ಮಾರುವ ಸ್ಥಿತಿಗೆ
ನೆಟ್‌ಫ್ಲಿಕ್ಸ್ ನಲ್ಲಿʼಜವಾನ್ʼ ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾದಲ್ಲಿ ಡಿಲೀಟ್ ಆಗಿರುವ ದೃಶ್ಯಗಳನ್ನು ಓಟಿಟಿಯಲ್ಲಿ ಸೇರಿಸಿ ರಿಲೀಸ್ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ.
ಥಿಯೇಟರ್ ಬಿಡುಗಡೆಯಲ್ಲಿ ರಿಲೀಸ್ ಆಗುವ ವೇಳೆ ಕಟ್ ಮಾಡಿರುವ ದೃಶ್ಯಗಳನ್ನು ಓಟಿಟಿ ರಿಲೀಸ್ ನಲ್ಲಿ ಸೇರಿಸಿದಾಗ ಸಿನಿಮಾದ ಅವಧಿ 3:15 ಗಂಟೆಯಷ್ಟು ಆಗುತ್ತದೆ. ಈ ಕುರಿತು ನಿರ್ದೇಶಕ ಅಟ್ಲಿ ಕೆಲಸ ಮಾಡುತ್ತಿದ್ದಾರೆ.
ʼಜವಾನ್ʼ ನಲ್ಲಿ ನಯನತಾರಾ, ದೀಪಿಕಾ ಪಡುಕೋಣೆ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಜೊತೆಗೆ ಇತರ ನಟರಾದ ಎಜಾಜ್ ಖಾನ್, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ಇದ್ದಾರೆ.
ಮುಂದೆ ಶಾರುಖ್ ಖಾನ್ ಅವರು ರಾಜ್‌ಕುಮಾರ್ ಹಿರಾನಿ ಅವರ ‘ಡುಂಕಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಡಿಸೆಂಬರ್ 22 ರಂದು ರಿಲೀಸ್ ಆಗಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೀತಿ, ಗೀತಿ ಇತ್ಯಾದಿ…: ನೆಚ್ಚಿನವಾಡು ತೆಲುಗು ಸಿನಿಮಾ

Malayalam filmmaker: ಮಲಯಾಳಂ ಚಿತ್ರರಂಗದ ದಿಗ್ಗಜ ನಿರ್ದೇಶಕ ಕೆಜಿ ಜಾರ್ಜ್ ನಿಧನ

Tollywood: 16 ವರ್ಷದ ಬಳಿಕ ಒಂದೇ ಚಿತ್ರದಲ್ಲಿ ಪ್ರಭಾಸ್ – ನಯನತಾರಾ ನಟನೆ; ಯಾವ ಸಿನಿಮಾ?

Kashmir Files, ಕೇರಳ ಸ್ಟೋರಿಯಂತಹ ಸಿನಿಮಾಗಳನ್ನು ನಾನು ನೋಡಲ್ಲ: ಖ್ಯಾತ ನಿರ್ದೇಶಕ ವಿಶಾಲ್

Sanatana: ಸನಾತನ ಧರ್ಮದ ನಿರ್ಮೂಲನೆ.. ಪರೋಕ್ಷವಾಗಿ ಉದಯನಿಧಿ ಬೆಂಬಲಿಸಿದ ಕಮಲ್ ಹಾಸನ್
MUST WATCH
ಹೊಸ ಸೇರ್ಪಡೆ

Sandalwood; ಡಬ್ಬಿಂಗ್ ಮುಗಿಸಿದ ‘ಜಲಂಧರ’

INDvsAUS: ಹೋಳ್ಕರ್ ಮೈದಾನದಲ್ಲಿ ರನ್ ರಾಶಿ ಪೇರಿಸಿದ ಟೀಂ ಇಂಡಿಯಾ; ಆಸೀಸ್ ಗೆ 400 ರನ್ ಗುರಿ

World Cup 2023; ರೋಹಿತ್- ವಿರಾಟ್ ಗಿಂತ ಬಾಬರ್ ಅಜಂ ಉತ್ತಮ ಪ್ರದರ್ಶನ ನೀಡಬಹುದು: ಗಂಭೀರ್

Kumta ; ಮಸೀದಿಯಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮೌಲ್ವಿಯ ಬಂಧನ

Doddaballapur:15 ಟನ್ ಗೋ ಮಾಂಸ ಸಾಗಿಸುತ್ತಿದ್ದ ಏಳು ಮಂದಿಯ ಬಂಧನ