ಕೋವಿಡ್ ಭೀತಿ: ಚಿತ್ರ ಬಿಡುಗಡೆಯನ್ನು ಮುಂದೂಡಿದ ಶಾಹಿದ್ ಕಪೂರ್
Team Udayavani, Dec 28, 2021, 4:09 PM IST
ದೇಶಾದ್ಯಂತ ಮತ್ತೆ ಕೋವಿಡ್ ಭೀತಿ ಹೆಚ್ಚುತ್ತಿದೆ. ಹಲವೆಡೆ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದೆ. ಇದೇ ವೇಳೆ ಹಲವು ರಾಜ್ಯಗಳು ಹೊಸ ವರ್ಷದ ಸಮಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದೇ ಕಾರಣಕ್ಕಾಗಿ ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಮ್ಮ ಮುಂದಿನ ಚಿತ್ರ ಜೆರ್ಸಿ ಬಿಡುಗಡೆಯನ್ನು ಮುಂದೂಡಿದ್ದಾರೆ.
ಶಾಹಿದ್ ಕಪೂರ್ ಅವರ ‘ಜೆರ್ಸಿ’ ಚಿತ್ರವು ಡಿಸೆಂಬರ್ 31ರಂದು ತೆರೆಕಾಣಲು ಸಜ್ಜಾಗಿತ್ತು. ಆದರೆ ಇದೀಗ ಚಿತ್ರವನ್ನು ವರ್ಷದ ಕೊನೆಯ ದಿನದಂದು ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ. ಮುಂದಿನ ಬಿಡುಗಡೆ ದಿನಾಂಕವನ್ನು ಪ್ರಕಟಿಸಲಾಗಿಲ್ಲ. ಆದರೆ ಚಿತ್ರವು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬ ವದಂತಿಗಳು ಸುಳ್ಳು ಎಂದು ಬಾಲಿವುಡ್ ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಹೇಳಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿಗೆ ಅತ್ಯಾಧುನಿಕ ದುಬಾರಿ ಬೆಲೆಯ ಮರ್ಸಿಡಿಸ್ ಮೇಬ್ಯಾಕ್ ಕಾರು; ಏನಿದರ ವಿಶೇಷತೆ?
ಕ್ರಿಕೆಟ್ ಕುರಿತಾದ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ಮೃನಾಲ್ ಥಾಕೂರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
#Xclusiv… #BreakingNews… #Jersey POSTPONED… WON’T RELEASE ON 31 DEC… New date will be announced shortly… Industry talk that #Jersey will be Direct-to-OTT release is FALSE. pic.twitter.com/1MBwsSdWCC
— taran adarsh (@taran_adarsh) December 28, 2021
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಿತ್ರಮಂದಿರುಗಳು, ಶಾಲಾ ಕಾಲೇಜು, ಹೋಟಲ್ ಗಳು, ಜಿಮ್ ಗಳ ಮೇಲೆ ನಿರ್ಬಂಧ ಹೇರಲಾಗಿದೆ.