
ಸಿದ್ಧಾರ್ಥ್ ವೆಡ್ಸ್ ಕಿಯಾರಾ: ದಾಂಪತ್ಯಕ್ಕೆ ಕಾಲಿಟ್ಟ ʼಶೇರ್ ಷಾʼ ಜೋಡಿ
Team Udayavani, Feb 8, 2023, 8:35 AM IST

ಜೈಪುರ: ಬಾಲಿವುಡ್ ನ ಕ್ಯೂಟ್ ಲವ್ ಬರ್ಡ್ಸ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅದ್ಧೂರಿ ವಿವಾಹ ಸಮಾರಂಭದಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ಪ್ಯಾಲೇಸ್ ನಲ್ಲಿ ಫೆ.7 ರಂದು ( ಮಂಗಳವಾರ) ʼಶೇರ್ ಷಾʼ ಜೋಡಿಯ ವಿವಾಹ ನೆರವೇರಿದ್ದು, ವಿವಾಹಕ್ಕೆ ಬಾಲಿವುಡ್ ಕಲಾವಿದರು, ಗಣ್ಯರು ಸಾಕ್ಷಿಯಾಗಿ, ನವ ಜೋಡಿಗೆ ಶುಭ ಹಾರೈಸಿದೆ.
ಮಂಗಳವಾರ ರಾತ್ರಿ ನವಜೋಡಿ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡು, ಕಿಯಾರಾ, ಸಿದ್ದಾರ್ಥ್ “ನಮ್ಮದು ಶಾಶ್ವತವಾಗಿ ಬುಕಿಂಗ್ ಆಯಿತೆಂದು” ಕ್ಯಾಪ್ಷನ್ ಬರೆದುಕೊಂಡಿದೆ. ಪತ್ನಿ ಕಿಯಾರಾ ತನ್ನ ಹ್ಯಾಂಡ್ಸಮ್ ಪತಿಗೆ ಮುತ್ತು ಕೊಟ್ಟು, ಕೈ,ಕೈ ಹಿಡಿದುಕೊಂಡು ಕೂತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾವಿರಾರು ಮಂದಿ ಫ್ಯಾನ್ಸ್, ಹತ್ತಾರು ಸ್ಟಾರ್ಸ್, ಗಣ್ಯರು ನವ ಜೋಡಿಗೆ ಶುಭ ಹಾರೈಸಿದೆ.
ಶಾಹಿದ್ ಕಪೂರ್ ದಂಪತಿ, ನಿರ್ಮಾಪಕ ಕರಣ್ ಜೋಹರ್, ನಟಿ ಮಲೈಕಾ, ಇಶಾ ಅಂಬಾನಿ ಸೇರಿದಂತೆ ಹಲವರು ಮಂದಿ ವಿವಾಹದಲ್ಲಿ ಭಾಗಿಯಾಗಿದ್ದರು.
ಕೆಲ ವರ್ಷಗಳಿಂದ ಕಿಯಾರಾ- ಸಿದ್ದಾರ್ಥ್ ಜೊತೆಯಾಗಿಯೇ ಕಾಣಿಸಿಕೊಂಡರೂ ಎಲ್ಲೂ ಕೂಡ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿರಲಿಲ್ಲ.
View this post on Instagram
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್ ವಿರುದ್ದ ನೆಟ್ಟಿಗರು ಗರಂ

ನಟ ನವಾಜುದ್ದೀನ್,ಮಾಜಿ ಪತ್ನಿಗೆ ಮಕ್ಕಳ ಸಲುವಾಗಿ ಹಾಜರಾಗಲು ಹೇಳಿದ ಹೈಕೋರ್ಟ್

ಐಟಂ ಡ್ಯಾನ್ಸ್ ಮಾಡ್ಬೇಡ… ʼಊ ಅಂಟವಾʼ ಹಾಡಿಗೆ ಸಮಂತಾ ಆಪ್ತರಿಂದಲೇ ವ್ಯಕ್ತವಾಗಿತ್ತು ವಿರೋಧ

“ಜೈ ಶ್ರೀರಾಮ್” ಎಂದು ಹೇಳಿ ರಾಮನವಮಿ ದಿನ ʼಆದಿಪುರುಷ್ʼ ಹೊಸ ಪೋಸ್ಟರ್ ಹಂಚಿಕೊಂಡ ಪ್ರಭಾಸ್

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು