ತನಗಿಂತ 24 ವರ್ಷ ಕಿರಿಯ ಕನ್ನಡ ಮೂಲದ ನಟಿ ಜೊತೆ ಸಲ್ಮಾನ್ ಖಾನ್ ಡೇಟಿಂಗ್? ಟ್ವೀಟ್ ನಲ್ಲೇನಿದೆ…
Team Udayavani, Dec 9, 2022, 6:39 PM IST
ಮುಂಬೈ: ಭಾರತೀಯ ಸಿನಿಮಾ ರಂಗದ ಸ್ಟಾರ್ ಹೀರೋಯಿನ್ ಗಳಲ್ಲಿ ಪೂಜಾ ಹೆಗ್ಡೆ ಅಗ್ರ ಸ್ಥಾನದಲ್ಲಿದ್ದಾರೆ, ದಕ್ಷಿಣ ಭಾರತ ಸಿನಿಮಾದಲ್ಲೂ ಪೂಜಾ ದೊಡ್ಡ ಖ್ಯಾತಿ ಗಳಿಸಿದ್ದಾರೆ. ಇದೀಗ ಹಿಂದಿ ಮತ್ತು ತೆಲುಗು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಏತನ್ಮಧ್ಯೆ ಪೂಜಾ ಹೆಗ್ಡೆ ಲವ್ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬ ಸಮೇತ ನಟ ಶಿವರಾಜ್ ಕುಮಾರ್ ಭೇಟಿ
ಸದ್ಯ ಬಾಲಿವುಡ್ ನ ಸಲ್ಮಾನ್ ಖಾನ್ ಜತೆ ಸಿನಿಮಾ ಚಿತ್ರೀಕರಣದಲ್ಲಿರುವ ಪೂಜಾ ಹೆಗ್ಡೆ ಸುತ್ತ ಗಾಸಿಪ್ ಗಳೇ ತುಂಬಿಕೊಂಡಿದೆ. ತನ್ನನ್ನು ತಾನೇ ಸಿನಿಮಾ ವಿಮರ್ಶಕ ಎಂದೇ ಹೇಳಿಕೊಂಡಿರುವ ಉಮೈರ್ ಸಾಂಧು ಸಾಮಾನ್ಯವಾಗಿ ಸೆನ್ಸಾರ್ ಮತ್ತು ಪ್ರೀಮಿಯರ್ ಮಾಹಿತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.
ಆದರೆ ಅವರು ಇತ್ತೀಚೆಗೆ ಟ್ವೀಟರ್ ನಲ್ಲಿ, ಪೂಜಾ ಹೆಗ್ಡೆ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಬರೆದುಕೊಂಡಿರುವುದಾಗಿ ವರದಿ ವಿವರಿಸಿದೆ. “ಸಲ್ಮಾನ್ ಖಾನ್ ಪೂಜಾ ಹೆಗ್ಡೆಯ ಪ್ರೇಮಪಾಶದಲ್ಲಿ ಬಿದ್ದಿದ್ದು, ಇಬ್ಬರೂ ಒಟ್ಟಾಗಿಯೇ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಈ ಮಾಹಿತಿಯನ್ನು ಸಲ್ಮಾನ್ ಆಪ್ತ ಮೂಲಗಳು ಖಚಿತಪಡಿಸಿವೆ” ಎಂದು ಟ್ವೀಟ್ ಮಾಡಿರುವುದು ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ.
ಪೂಜಾ ಹೆಗ್ಡೆ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದ ಮುಂಬೈನಲ್ಲಿ, ಆಕೆಯ ಪೋಷಕರಾದ ಮಂಜುನಾಥ್ ಹೆಗ್ಡೆ ಮತ್ತು ಲತಾ ಹೆಗ್ಡೆ ಕಾರ್ಕಳ ಮೂಲದವರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಳಪತಿ ವಿಜಯ್ ʼಲಿಯೋʼ ಚಿತ್ರದಿಂದ ಹೊರಬಂದ ತ್ರಿಷಾ?: ವೈರಲ್ ಸುದ್ದಿಗೆ ನಟಿ ತಾಯಿ ಸ್ಪಷ್ಟನೆ
ಸಿದ್ಧಾರ್ಥ್ ವೆಡ್ಸ್ ಕಿಯಾರಾ: ದಾಂಪತ್ಯಕ್ಕೆ ಕಾಲಿಟ್ಟ ʼಶೇರ್ ಷಾʼ ಜೋಡಿ
ಮದುವೆ,ಅಕ್ರಮ ಸಂಬಂಧ,ಮೋಸ..ರಾಖಿ ಸಾವಂತ್ ದಾಂಪತ್ಯ ಬೀದಿಗೆ; ವಿಚ್ಛೇದನಕ್ಕೆ ಮುಂದಾದ ನಟಿ
ದಳಪತಿ ಕೆರಿಯರ್ ನಲ್ಲಿ ಹೊಸ ದಾಖಲೆ ಬರೆದ ʼವಾರಿಸುʼ: ಟೋಟಲ್ ಕಲೆಕ್ಷನ್ ಎಷ್ಟು?
ಹೊಸ ಸಿನೆಮಾದ ಬಗ್ಗೆ ಪದೇ ಪದೇ ವಿಚಾರಿಸಬೇಡಿ:ಫ್ಯಾನ್ಸ್ ಬಳಿ ಜ್ಯೂ.ಎನ್ಟಿಆರ್ ಮನವಿ