ಸಿನಿಮಾದಲ್ಲಿ ಫೋನ್ ನಂಬರ್ ಬಳಕೆ, ಅಭಿಮಾನಿ ಹೈರಾಣ; ಕ್ಷಮೆಯಾಚಿಸಿದ ಸನ್ನಿ ಲಿಯೋನ್

Team Udayavani, Aug 3, 2019, 3:30 PM IST

ಮುಂಬೈ: ಇತ್ತೀಚೆಗೆ ಬಿಡುಗಡೆಯಾಗಿದ್ದ ಬಾಲಿವುಡ್ ನ “ದಿಲ್ಜಿತ್ ದೋಸಾಂಜ್” ಅಭಿನಯದ ಅರ್ಜುನ್ ಪಾಟಿಯಾಲಾ ಸಿನಿಮಾದಲ್ಲಿ ಆಕಸ್ಮಿಕವಾಗಿ ಮೊಬೈಲ್ ನಂಬರ್ ಅನ್ನು ಸಿನಿಮಾದಲ್ಲಿ ಬಹಿರಂಗಗೊಳಿಸಿದ್ದರಿಂದ ತೊಂದರೆಗೊಳಗಾಗಿದ್ದ ದೆಹಲಿ ಮೂಲದ ಅಭಿಮಾನಿ ಬಳಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಕ್ಷಮೆಯಾಚಿಸಿದ್ದಾರೆ.

ಝೂಮ್ ಟಿವಿಗೆ ನೀಡಿದ್ದ ಸಂದರ್ಶನದ ವೇಳೆ ಮಾತನಾಡಿದ ಸನ್ನಿ, ಚಿತ್ರದ ಸನ್ನಿವೇಶವೊಂದರಲ್ಲಿ ನಾನು ನಿಮ್ಮ ಮೊಬೈಲ್ ನಂಬರ್ ಅನ್ನು ಬಳಸಿಕೊಂಡಿದ್ದೆ..ದಯವಿಟ್ಟು ಕ್ಷಮಿಸಿ..ನಾನು ನಿಮಗೆ ತೊಂದರೆ ಕೊಡಬೇಕು ಎಂಬ ಉದ್ದೇಶದಿಂದ ಹಾಗೆ ಮಾಡಿಲ್ಲ ಎಂದು ಮನವಿ ಮಾಡಿಕೊಂಡಿದ್ದರು.

ಅರ್ಜುನ್ ಪಾಟಿಯಾಲಾ ಸಿನಿಮಾದ ದೃಶ್ಯವೊಂದರಲ್ಲಿ ಸನ್ನಿ ಲಿಯೋನ್ ತಮ್ಮ ಮೊಬೈಲ್ ನಂಬರ್ ಅನ್ನು ಹೇಳುವ ಡೈಲಾಗ್ ಇತ್ತು. ಏತನ್ಮಧ್ಯೆ ಸನ್ನಿ ಲಿಯೋನ್ ಅಭಿಮಾನಿಗಳು ಮುಗಿಬಿದ್ದು ಕರೆ ಮಾಡಿದ್ದರು..ಆದರೆ ಅದು ನಿಜಕ್ಕೂ ಸನ್ನಿ ಲಿಯೋನ್ ನಂಬರ್ ಆಗಿರಲಿಲ್ಲವಾಗಿತ್ತು. ಅದು ದೆಹಲಿ ಮೂಲದ ವ್ಯಕ್ತಿಯೊಬ್ಬರದ್ದಾಗಿತ್ತು. ಆ ವ್ಯಕ್ತಿ ಸಿನಿಮಾ ಬಿಡುಗಡೆಯಾದ ದಿನ ಸಾವಿರಾರು ಕರೆಗಳಿಗೆ ಉತ್ತರಿಸಿ ಹೈರಾಣಾಗಿದ್ದರು ಎಂದು ವರದಿ ತಿಳಿಸಿದೆ.

ಅರ್ಜುನ್ ಪಾಟಿಯಾಲಾ ಹಿಂದಿ ಸಿನಿಮಾದಲ್ಲಿ ಬಹಿರಂಗಗೊಂಡ ಮೊಬೈಲ್ ನಂಬರ್ ದೆಹಲಿ ಪೀತಂಪುರ್ ನಿವಾಸಿ ಪುನೀತ್ ಅಗರ್ವಾಲ್(27ವರ್ಷ) ಎಂಬ ಯುವಕನದ್ದು. ಸನ್ನಿ ಲಿಯೋನ್ ಳ ಸಾವಿರಾರು ಅಭಿಮಾನಿಗಳು ಕರೆ ಮಾಡಿದ್ದರಿಂದ ರೋಸಿ ಹೋದ ಅಗರ್ವಾಲ್ ಪೊಲೀಸರಿಗೆ ದೂರು ನೀಡಿದ್ದರು.

ಇದು ಸನ್ನಿ ಲಿಯೋನ್ ನಂಬರ್ ಅಲ್ಲ, ತನ್ನ ನಂಬರ್ ಎಂದು ಸಮಜಾಯಿಷಿ ನೀಡಲು ಹೋದರೂ ಅದನ್ನು ಕೇಳಿಸಿಕೊಳ್ಳದೆ ಅವಾಚ್ಯ ಶಬ್ದಗಳಿಂದ ಸನ್ನಿ ಅಭಿಮಾನಿಗಳು ಬೈದಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ