ಆತ್ಮಹತ್ಯೆ ಸುದ್ದಿ ಕೇಳಿ ಬಿಹಾರದಲ್ಲಿ ನಟ ಸುಶಾಂತ್ ಸಿಂಗ್ ಅತ್ತಿಗೆ ನಿಧನ
Team Udayavani, Jun 16, 2020, 9:08 AM IST
ಪಾಟ್ನಾ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯಿಂದ ಆಘಾತಗೊಂಡ ಸುಶಾಂತ್ ಅತ್ತಿಗೆ ನಿಧನರಾದ ಘಟನೆ ನಡೆದಿದೆ.
ನಟ ಸುಶಾಂತ್ ಸಿಂಗ್ ಸೋದರ ಸಂಬಂಧಿಯ ಪತ್ನಿ ಬಿಹಾರದ ಪೂರ್ನಿಯಾ ಎಂಬಲ್ಲಿ ನಿಧನರಾಗಿದ್ದಾರೆ. ಮುಂಬೈನಲ್ಲಿ ಸುಶಾಂತ್ ಸಿಂಗ್ ಅಂತ್ಯಕ್ರಿಯೆ ನಡೆಯುತ್ತಿರ ಬೇಕಾದರೆ ಆತನ ಅತ್ತಿಗೆ ಬಿಹಾರದಲ್ಲಿ ಕೊನೆಯುಸಿರೆಳಿದಿದ್ದಾರೆ ಎಂದು ವರದಿಯಾಗಿದೆ. ಸುಶಾಂತ್ ಆತ್ಮಹತ್ಯೆಯ ಸುದ್ದಿ ಕೇಳಿದ ನಂತರ ಆಕೆ ಅನ್ನ- ಆಹಾರ ತ್ಯಜಿಸಿದ್ದರು ಎಂದು ಹೇಳಲಾಗಿದೆ.
ಬಾಲಿವುಡ್ ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈ ಬಾಂದ್ರಾದ ತನ್ನ ನಿವಾಸದಲ್ಲಿ ರವಿವಾರ ಬೆಳಿಗ್ಗೆ ಆತ್ಮಹತ್ಯೆಗೆ ಶರಣಾಗಿದ್ದರು. ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು.
ಡ್ಯಾನ್ಸ್ ಶೋ, ಧಾರವಾಹಿಗಳ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಸುಶಾಂತ್, ಕೈಪೋಚೆ, ಶುದ್ಧ್ ದೇಸಿ ರೊಮ್ಯಾನ್ಸ್, ಎಂ ಎಸ್ ಧೋನಿ, ಚಿಚೋರಿ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದ. ತನ್ನ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ.
ಮಾನಸಿಕ ಖಿನ್ನತೆ ಯ ಕಾರಣದಿಂದ ನಟ ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗಿದೆ. ಮುಂಬೈನ ಪವನ್ ಹಾನ್ಸ್ ಚಿತಾಗಾರದಲ್ಲಿ ಸೋಮವಾರ ನಟನ ಅಂತ್ಯಕ್ರಿಯೆ ನಡೆಸಿದ್ದು, ಕುಟುಂಬಿಕರು, ಚಿತ್ರರಂಗದ ಆತ್ಮೀಯರು ಸೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ
ಹಿಂದಿ ಕಿಚ್ಚಿಗೆ ಅರ್ಜುನ್ ರಾಮ್ಪಾಲ್ ತುಪ್ಪ
ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ