ಟೀಸರ್ ಬಂತು: ‘ಸೈ ರಾ ನರಸಿಂಹ ರೆಡ್ಡಿ’ ಯಲ್ಲಿ ಮೆಗಾ ಸ್ಟಾರ್ – ಬಿಗ್ ಬಿ ಕಮಾಲ್

ಧೂಳೆಬ್ಬಿಸಲು ಸಿದ್ಧರಾದ ಮೆಗಾಸ್ಟಾರ್ ಚಿರಂಜೀವಿ, ಅಮಿತಾಭ್ ಬಚ್ಚನ್

Team Udayavani, Aug 20, 2019, 10:43 PM IST

ಸ್ವಾತಂತ್ರ್ಯಪೂರ್ವದ ಹೋರಾಟದ ಕಥೆಯೊಂದು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಭಾರತೀಯ ಚಿತ್ರರಂಗದ ಇಬ್ಬರು ಧಿಗ್ಗಜ ಕಲಾವಿದರು ನಟಿಸುತ್ತಿರುವ ಚಿತ್ರವಾಗಿಯೂ ಇದು ದೇಶದ ಗಮನವನ್ನು ಸೆಳೆದಿದೆ. ಇದೇ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರ. ಇಲ್ಲಿ ಚಿರಂಜೀವಿ ನರಸಿಂಹ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಂಡರೆ ಬಿಗ್ ಬಿ ಅವರು ರೆಡ್ಡಿಯ ಗುರು ಗೋಸಾಯಿ ವೆಂಕಣ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.

ಪ್ರಥಮ ಸ್ಯಾತಂತ್ರ್ಯ ಸಂಗ್ರಾಮಕ್ಕಿಂತಲೂ ಹತ್ತು ವರ್ಷಗಳ ಮುಂಚೆ ಅಂದರೆ 1847ರಲ್ಲೇ ಬ್ರಿಟಿಷರ ವಿರುದ್ಧ ರಣ ಕಹಳೆ ಊದಿದ ಕ್ರಾಂತಿಕಾರಿ ದೇಶಭಕ್ತ ಯೋಧನೊಬ್ಬನ ಕಥೆಯನ್ನು ಹೊಂದಿರುವ ಚಿತ್ರವಿದು.

ಮೆಗಾ ಸ್ಟಾರ್ ಚಿರಂಜೀವಿ ಅವರು ನರಸಿಂಹ ರೆಡ್ಡಿಯಾಗಿ ಖಡಕ್ ಲುಕ್ ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನ ಹಿನ್ನಲೆಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸಮ್ಮೋಹಕ ಧ್ವನಿ ನಮ್ಮನ್ನು ಆ ಕಾಲಘಟ್ಟಕ್ಕೆ ಕರೆದೊಯ್ಯುತ್ತದೆ. ಇನ್ನು ಚಿತ್ರದ ಸ್ಟಂಟ್ ನೈಜತೆಯಿಂದ ಕೂಡಿದ್ದು ಯುದ್ಧ ಸನ್ನಿವೇಶದ ದೃಶ್ಯಗಳು ರೋಮಾಂಚಕವಾಗಿ ಮೂಡಿಬಂದಿರುವುದು ಟೀಸರ್ ನಲ್ಲಿ ಎದ್ದು ಕಾಣುತ್ತದೆ. ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರ ಅಕ್ಟೋಬರ್ 2ರ ಗಾಂಧಿ ಜಯಂತಿ ದಿನದಂದು ವಿಶ್ವಾದ್ಯಂತ ಬಿಡುಗಡೆಗೊಳ್ಳಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ