ಬಾಲ್ಯದಲ್ಲಿ ನಾನು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ: ಅರ್ಜುನ್ ರೆಡ್ಡಿ ಚಿತ್ರದ ನಟನ ಅಳಲು

Team Udayavani, Jan 22, 2020, 10:56 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use

ಹೈದ್ರಾಬಾದ್: ತೆಲುಗಿನ ಸೂಪರ್ ಹಿಟ್ ಚಲನಚಿತ್ರ ಅರ್ಜುನ್ ರೆಡ್ಡಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ರಾಹುಲ್ ರಾಮಕೃಷ್ಣ ಅವರು ಬಾಲ್ಯದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು ಎಂಬ ಕರಾಳ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

ಜನವರಿ 20ರಂದು ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಈ ಸೂಪರ್ ಸ್ಟಾರ್ ತೆಲುಗು ನಟ ಬಾಲ್ಯದಲ್ಲಿ ತನ್ನ ಮೇಲಾಗಿದ್ದ ಲೈಂಗಿಕ ದೌರ್ಜನ್ಯದ ಕುರಿತಾಗಿ ಎಳೆ ಎಳೆಯಾಗಿ ಮಾಹಿತಿ ನೀಡಿದ್ದಾರೆ.

ರಾಹುಲ್ ರಾಮಕೃಷ್ಣ ಅವರು ತನ್ನ ಕುರಿತಾದ ಈ ಶಾಕಿಂಗ್ ಸುದ್ದಿಯನ್ನು ಬಹಿರಂಗಪಡಿಸುತ್ತಿದ್ದಂತೆ ಸಾಕಷ್ಟು ಜನ ಅಭಿಮಾನಿಗಳು ಹಾಗೂ ಹಿತೈಷಿಗಳು ಅವರಿಗೆ ಬೆಂಬಲವಾಗಿ ನಿಲ್ಲುವ ಮಾತುಗಳನ್ನಾಡಿದ್ದಾರೆ.


‘ಎಳವೆಯಲ್ಲಿ ನಾನು ಅತ್ಯಾಚಾರಕ್ಕೊಳಗಾಗಿದ್ದೆ, ಇಷ್ಟರ ಹೊರತಾಗಿ ನಾನು ಅನುಭವಿಸಿದ ದುಃಖದ ಕುರಿತಾಗಿ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ, ಇದಿಷ್ಟು ನನ್ನ ಕುರಿತಾಗಿ ನಾನು ತಿಳಿದುಕೊಂಡಿರುವ ವಿಚಾರ, ಇದೆಲ್ಲ ಬಹಳಷ್ಟು ನೋವು ಕೊಡುತ್ತದೆ’ ಎಂದು ನಟ ರಾಹುಲ್ ರಾಮಕೃಷ್ಣ ಅವರು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಆದರೆ ಬಾಲ್ಯದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವ್ಯಕ್ತಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ. ‘ಇಂತಹ ಘಟನೆಗಳಿಗೆ ಯಾವತ್ತೂ ನ್ಯಾಯ ಸಿಗುವುದಿಲ್ಲ, ಸಿಕ್ಕಿದರೂ ಕ್ಷಣಿಕವಾದ ನೆಮ್ಮದಿ ಸಿಗಬಹುದಷ್ಟೇ’ ಎಂದೂ ಅವರು ಹೇಳಿಕೊಂಡಿದ್ದಾರೆ.

ತೆಲುಗು ನಟ ರಾಹುಲ್ ರಾಮಕೃಷ್ಣ ಅವರು ‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ನಾಯಕ ವಿಜಯ್ ದೇವರಕೊಂಡ ಅವರ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅರ್ಜುನ್ ರೆಡ್ಡಿ ಚಿತ್ರದ ಭರ್ಜರಿ ಯಶಸ್ಸು ರಾಹುಲ್ ಅವರಿಗೂ ಚಿತ್ರರಂಗದಲ್ಲಿ ಅದೃಷ್ಟದ ಬಾಗಿಲನ್ನು ತೆರೆದುಕೊಟ್ಟಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಯಾವುದೇ ಸಾಧಕರನ್ನು ಯಶಸ್ಸನ್ನು ಗಮನಿಸಿ ನೋಡಿ. ಪರಿಶ್ರಮ, ಏಕಾಗ್ರತೆ ಜತೆಗೆ ಅವರು ಸಮಯವನ್ನು ಸದುಪಯೋಗಿಸಿಕೊಂಡಿರುವುದು ಸಾಧನೆಗೆ ಮುಖ್ಯ ಕಾರಣವಾಗಿರುತ್ತದೆ....

  • ದಾರಿಯಲ್ಲಿ ಹೋಗುವಾಗ ಒಂದು ಮಗು ಅಮ್ಮ ಕೊಟ್ಟಿದ್ದ ಒಂದು ರೂಪಾಯಿಯನ್ನು ಎಲ್ಲೋ ಕಳೆದುಕೊಂಡುಬಿಡುತ್ತದೆ. ಅಮ್ಮನ ಭಯಕ್ಕೋ, ಅಮ್ಮ ಕೊಟ್ಟಿದ್ದು ಎಂಬ ಪ್ರೀತಿಗೋ...

  • ವರ್ಷಗಳ ಹಿಂದೆ ಪ್ರಮುಖ ಬ್ಯಾಂಕ್‌ಗಳ ಹಲವಾರು ಗ್ರಾಹಕರು ಎಟಿಎಂನಲ್ಲಿ ವಂಚನೆಗೊಳಗಾಗಿ ಲಕ್ಷಾಂತರ ಹಣ ಕಳೆದುಕೊಂಡ ಕುರಿತು ವರದಿಯಾಗಿತ್ತು. ತನಿಖೆ ನಡೆಸಿದಾಗ...

  • ಕಂಬದ ಮೇಲೆ ತೊಲೆಗಳು ಬರುವುದು ಎಲ್ಲೆಡೆ ಕಂಡುಬರುವ ಸಾಮಾನ್ಯ ಸಂಗತಿ. ಆದರೆ, ತೊಲೆಗಳ ಮೇಲೆ ಕಂಬಗಳನ್ನು ಹೊರಿಸಬೇಕು ಎಂದರೆ ಸ್ವಲ್ಪ ಹುಷಾರಾಗಿ ಮುಂದುವರಿಯಬೇಕಾಗುತ್ತದೆ....

  • 26 ಡಿಸೆಂಬರ್‌ 2019ರಂದು ರಾಜಸ್ಥಾನದ ಬಾರ್ಮೆರಿನ ರೈತ ಜುಗ್ತಾ ರಾಮ್‌ ಆಕಾಶದಲ್ಲಿ ಮಿಡತೆಗಳ ಬೃಹತ್‌ ಸೈನ್ಯ ಕಂಡು ಬೆಕ್ಕಸ ಬೆರಗಾದ. ಅದು ಲಕ್ಷಾಂತರ ಮಿಡತೆಗಳ ಹಿಂಡು....