ಶಂಕರಾಭರಣಂ ನಿರ್ದೇಶಕ ವಿಶ್ವನಾಥ್‌ಗೆ ಫಾಲ್ಕೆ ಗೌರವ
Team Udayavani, Apr 25, 2017, 3:45 AM IST
ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟ ಹಾಗೂ ನಿರ್ದೇಶಕ ಕಾಶಿನಾಧುನಿ ವಿಶ್ವನಾಥ್ ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಲ್ಲಿಸಿದ ಶ್ರೇಷ್ಠ ಸೇವೆಗಾಗಿ ಅವರಿಗೆ ಈ ಗೌರವ ಸಂದಿದೆ.
ದೇಶದ ಸಿನಿಮಾ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಗೌರವವಾಗಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ 48ನೇ ಸಾಧಕ ಎಂಬ ಹೆಗ್ಗಳಿಕೆಗೆ ವಿಶ್ವನಾಥ್ ಪಾತ್ರರಾಗಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಮೇ 3ರಂದು ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು ಒಂದು ಸ್ವರ್ಣ ಕಮಲ, 10 ಲಕ್ಷ ರೂ. ನಗದು ಪುರಸ್ಕಾರವನ್ನು ಒಳಗೊಂಡಿದೆ.
ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ವಿಶ್ವನಾಥ್ ಅವರು “ಶಂಕರಾಭರಣಂ’, “ಸಾಗರ ಸಂಗಮಂ’, “ಸ್ವಾತಿ ಮುತ್ಯಂ’, “ಜಾಗ್ ಉಟಾ ಇನ್ಸಾನ್’ ಸೇರಿದಂತೆ ಹಲವು ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ
ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ
ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ
ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?
ಹೊಸ ಸೇರ್ಪಡೆ
ಐಪಿಎಲ್ 2022: ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗೆ 17 ರನ್ ಗೆಲುವು
ಪಿಎಸ್ಐ ಪರೀಕ್ಷಾ ಅಕ್ರಮ: ಆರೋಪಿ ಕಾರು, ಚಿನ್ನ, ದಾಖಲೆ ವಶ
ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ: ಗುಣಮಟ್ಟ ಶಿಕ್ಷಣಕ್ಕೆ ಕಲಿಕಾ ಚೇತರಿಕೆ: ಸಿಎಂ
ಮಳಲಿ ದರ್ಗಾದಲ್ಲಿ ದೇಗುಲ ಕುರುಹು : ಅಷ್ಟಮಂಗಲ ಪ್ರಶ್ನೆಗೆ ವಿಎಚ್ಪಿ ನಿರ್ಧಾರ
ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ : ಸಚಿವ ಅಂಗಾರ