ಶೋಲೆ ಸಿನಿಮಾದ “ಕಾಲಿಯಾ” ಖ್ಯಾತಿಯ ಪಾತ್ರಧಾರಿ, ನಟ ವಿಜು ಖೋಟೆ ವಿಧಿವಶ

Team Udayavani, Sep 30, 2019, 10:49 AM IST

ಮುಂಬೈ:ಬಾಲಿವುಡ್ ಹಿರಿಯ ನಟ, ಹಿಂದಿ ಚಿತ್ರರಂಗದಲ್ಲಿ ದಾಖಲೆ ಬರೆದಿದ್ದ “ಶೋಲೆ” ಸಿನಿಮಾದ ಕಾಲಿಯಾ ಪಾತ್ರಧಾರಿ ವಿಜು ಖೋಟೆ(78ವರ್ಷ) ಸೋಮವಾರ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ದೀರ್ಘಾವಧಿಯಿಂದ ಅನಾರೋಗ್ಯಕ್ಕೊಳಗಾಗಿದ್ದ ವಿಜು ಖೋಟೆ ಅವರು ಇಂದು ಮುಂಬೈಯಲ್ಲಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.

ಅಂದಾಝ್ ಅಪ್ನಾ, ಅಪ್ನಾ ಸಿನಿಮಾದಲ್ಲಿ ಐತಿಹಾಸಿಕ(ರಾಬರ್ಟ್) ನಟನೆಯ ಮೂಲಕ ಖ್ಯಾತಿ ಗಳಿಸಿದ್ದ ವಿಜು ಖೋಟೆ ನಂತರ ಅಭಿತಾಬ್ ನಟನೆಯ ಶೋಲೆ ಸಿನಿಮಾದಲ್ಲಿಯೂ ಕಾಲಿಯಾ ಪಾತ್ರಧಾರಿಯಾಗಿ ಜನಪ್ರಿಯತೆ ಪಡೆದಿದ್ದರು.

ಭಾರತೀಯ ಸಿನಿಮಾರಂಗದ ಕ್ಯಾರೆಕ್ಟರ್ ಗಳಲ್ಲಿ ಅತ್ಯಂತ ಹೆಚ್ಚು ಸ್ಮರಣೀಯವಾದ ಪಾತ್ರಗಳಲ್ಲಿ ವಿಜು ಖೋಟೆಯ ಕಾಲಿಯಾ ಪಾತ್ರ! ರಮೇಶ್ ಸಿಪ್ಪಿ ನಿರ್ದೇಶನದ ಶೋಲೆ ಸಿನಿಮಾದಲ್ಲಿ 2 ಸೀನ್ಸ್ ಗಳಲ್ಲಿ “ಕಾಲಿಯಾ” ನಟಿಸಿದ್ದರು. ಶೋಲೆಯಲ್ಲಿ ಅಮ್ಜದ್ ಖಾನ್ ಗಬ್ಬರ್ ಸಿಂಗ್ ಆಗಿ ಮೆರೆದಿದ್ದರೆ, ವಿಜು ಖೋಟೆ ಕಾಲಿಯಾ ಆಗಿ ಜನಾನುರಾಗಿಯಾಗಿರುವುದು ದಾಖಲೆಯಾಗಿದೆ.

ಮರಾಠಿ, ಬಾಲಿವುಡ್ ಸೇರಿದಂತೆ 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ವಿಜು ಖೋಟೆ ಅವರು, ಟಿವಿ ಶೋಗಳಲ್ಲಿಯೂ ನಟಿಸಿದ್ದರು. ಸೋಮವಾರ 11ಗಂಟೆಗೆ ಖೋಟೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವರದಿ ವಿವರಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ