‘ತು ತು ಮೈ ಮೈ’ಖ್ಯಾತಿಯ ‌ಹಿರಿಯ ಪೋಷಕ ನಟಿ ರೀಮಾ ಲಾಗೂ ಇನ್ನಿಲ್ಲ

Team Udayavani, May 18, 2017, 9:36 AM IST

ಮುಂಬಯಿ: ಬಾಲಿವುಡ್‌ ಮತ್ತು ಹಿಂದಿ ಧಾರಾವಾಹಿಗಳಲ್ಲಿ  ಪೋಷಕ ಪಾತ್ರಗಳ ಮೂಲಕ ರಂಜಿಸಿದ್ದ ಹಿರಿಯ ನಟಿ ರೀಮಾ ಲಾಗೂ ಅವರು ಗುರುವಾರ ಬೆಳಗ್ಗೆ  ಕೋಕಿಲಾ ಬೆನ್‌ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬುಧವಾರ ರಾತ್ರಿ ಎದೆನೋವು ಕಾಣಿಸಿಕೊಂಡ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಅವರಿಗೆ 59 ವರ್ಷ ಪ್ರಾಯವಾಗಿತ್ತು. 

ಹೈಸ್ಕೂಲ್‌ ಮುಗಿದ ಕೂಡಲೆ ಬಣ್ಣದ ಬದುಕಿಗೆ ಕಾಲಿರಿಸಿದ್ದ ಲಾಗೂ ಅವರು ನೆನಪಿನಲ್ಲುಳಿಯುವ ಕೆಲ ಸಿನಿಮಾಗಳು ಮತ್ತು ಟಿವಿ ಧಾರಾವಾಹಿಗಳನ್ನು ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಲಾಗೂ ಅವರ ತಾಯಿ ಮಂದಾಕಿನಿ ಬಡ್‌ಬಡೆ ಅವರೂ ನಟಿಯಾಗಿದ್ದರು.ರೀಮಾ ಅವರು ನಟ ವಿವೇಕ್‌ ಲಾಗೂ ಅವರನ್ನು ವಿವಾಹವಾಗಿದ್ದರು. 

ಲಾಗೂ ಅವರು ಸಲ್ಮಾನ್‌ ಖಾನ್‌ ಅವರ ತಾಯಿಯಾಗಿ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ತು ತು ಮೈ ಮೈ ಟಿವಿ ಶೋ ನಲ್ಲಿ ಅವರ ಪಾತ್ರ ಎಲ್ಲರ ಮನದಲ್ಲಿ ಅಚ್ಚೊತ್ತಿದೆ. 

ಮೈನೇ ಪ್ಯಾರ್‌ ಕೀಯಾ , ಆಶಿಖೀ ,ಸಾಜನ್‌,ಹಮ್‌ ಆಪ್‌ ಕೇ ಹೇ ಕೌನ್‌, ವಾಸ್ತವ್‌, ಕುಚ್‌ ಕುಚ್‌ ಹೋತಾ ಹೇ, ಹಮ್‌ ಸಾಥ್‌ ಸಾಥ್‌ ಹೇ ಅವರು ನಟಿಸಿದ ಪ್ರಮುಖ ಚಿತ್ರಗಳಾಗಿವೆ. 

ಓಶಿವಾರ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 

ಪುತ್ರಿ ಮೃಣ್ಮಯಿ ಮತ್ತು ಅಳಿಯ ವಿನಯ್‌ ವಾಯ್‌ಕುಲ್‌ ಅವರನ್ನು ಅಲಿದ್ದಾರೆ. 

ಲಾಗೂ ನಿಧನಕ್ಕೆ ಬಾಲಿವುಡ್‌ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ