ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ಬಾಲಿವುಡ್ ನಟಿ ಸುರೇಖಾ ಸಿಕ್ರಿ ಹೃದಯಾಘಾತದಿಂದ ನಿಧನ
ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಹೆಮ್ಮೆ ಸುರೇಖಾ ಸಿಕ್ರಿಯವರದ್ದಾಗಿದೆ.
Team Udayavani, Jul 16, 2021, 11:37 AM IST
ಮುಂಬಯಿ:ಬಾಲಿವುಡ್ ಹಿರಿಯ ತಾರೆ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರೇಖಾ ಸಿಕ್ರಿ (75ವರ್ಷ) ಶುಕ್ರವಾರ (ಜುಲೈ 16) ಹೃದಯಸ್ತಂಭನದಿಂದ ವಿಧಿವಶರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಕೆಲವು ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಸುರೇಖಾ ಅವರು ಇಂದು ಇಹಲೋಕ ತ್ಯಜಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ 30 ಮಂದಿ: ನಾಲ್ವರು ಸಾವು
ಜನಪ್ರಿಯ ಬಾಲಿಕಾ ವಧು ಧಾರಾವಾಹಿಯಲ್ಲಿ ಕಲ್ಯಾಣಿ ದೇವಿ ಪಾತ್ರದಲ್ಲಿ ಮಿಂಚಿದ್ದ ಸುರೇಖಾ, ಬದಾಹಿ ಹೋ ಬಾಲಿವುಡ್ ಕಾಮಿಡಿ ಸಿನಿಮಾದಲ್ಲೂ ತಮ್ಮ ಛಾಪು ಮೂಡಿಸಿದ್ದರು. ಸುರೇಖಾ ಸಿಕ್ರಿ ಅವರು ಮೆದುಳಿನ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ಮ್ಯಾನೇಜರ್ ಓಂ ಸಾಯಿ ರಾಮ್ ಖಚಿತಪಡಿಸಿದ್ದಾರೆ.
2019ರಲ್ಲಿ ಪಾರ್ಶ್ವವಾಯುವಿಗೆ ಒಳಗಾಗಿದ್ದು, 2020ರಲ್ಲಿ ಮತ್ತೆ ಮೆದುಳು ರಕ್ತಸ್ತಾವಕ್ಕೊಳಗಾಗಿದ್ದರು. ಹೀಗೆ ಕೆಲವು ವರ್ಷಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಹೆಮ್ಮೆ ಸುರೇಖಾ ಸಿಕ್ರಿಯವರದ್ದಾಗಿದೆ.
1988ರಲ್ಲಿ ತೆರೆ ಕಂಡಿದ್ದ ತಮಸ್, ಮಮ್ಮೊ(1995) ಹಾಗೂ ಬಧಾಯಿ ಹೋ (2018) ಚಿತ್ರಗಳಲ್ಲಿನ ನಟನೆಗಾಗಿ ಸಿಕ್ರಿ ಮೂರು ಬಾರಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
10 ದಿನಗಳಲ್ಲಿ 2ನೇ ಘಟನೆ: ಬಂಗಾಳಿ ಯುವ ನಟಿ, ರೂಪದರ್ಶಿ ಬಿದಿಶಾ ಡೇ ಶವವಾಗಿ ಪತ್ತೆ
ಕರಣ್ ಜೋಹರ್ ಪಾರ್ಟಿಯಲ್ಲಿ ತನ್ನ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಹೃತಿಕ್ ರೋಶನ್
@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ