ಬಹುಭಾಷಾ ಹಿರಿಯ ನಟಿ ಜಮುನಾ ನಿಧನ
ಮಿಸ್ಸಮ್ಮ ಸಿನಿಮಾದಿಂದ ಹೆಚ್ಚು ಖ್ಯಾತಿಗಳಿಸಿದರು.
Team Udayavani, Jan 27, 2023, 10:37 AM IST
ಹೈದರಾಬಾದ್: ಬಹುಭಾಷಾ ಹಿರಿಯ ನಟಿ ಜಮುನಾ (86) ಶುಕ್ರವಾರ (ಜ.27 ರಂದು) ಮುಂಜಾನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ಸಮಯದಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಮುನಾ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ. ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ನಟಿಯ ಹಿನ್ನೆಲೆ: ಜಮುನಾ ನಟಿ ಹಾಗೂ ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದರು. ತನ್ನ 16ನೇ ವಯಸ್ಸಿನಲ್ಲಿ ʼ ಪುಟ್ಟಿಲುʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, 1955 ರಲ್ಲಿ ರಿಲೀಸ್ ಆದ ಎಲ್.ವಿ.ಪ್ರಸಾದ್ ಅವರ ʼಮಿಸ್ಸಮ್ಮʼ ಸಿನಿಮಾದಿಂದ ಹೆಚ್ಚು ಖ್ಯಾತಿಗಳಿಸಿದರು. ಕನ್ನಡ, ತಮಿಳು ಚಿತ್ರದಲ್ಲೂ ನಟಿಸಿ ಖ್ಯಾತಿಗಳಿಸಿದ್ದಾರೆ.
ಜಮುನಾ 9ನೇ ಲೋಕಸಭೆಯಲ್ಲಿ ಸಂಸದರಾಗಿದ್ದರು ಮತ್ತು ರಾಜಮಂಡ್ರಿಯನ್ನು ಪ್ರತಿನಿಧಿಸಿದ್ದರು.ʼತೆನಾಲಿ ರಾಮಕೃಷ್ಣʼ, ʼಮುದ್ದು ಬಿದ್ದʼ, ʼಗುಂಡಮ್ಮ ಕಥೆʼ, ʼರಾಮುಡು ಭೀಮುಡುʼ ಮತ್ತು ʼಪೂಲ ರಂಗಡುʼ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ.ನಟಿಯ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಟ ಅಜಿತ್ ಕುಮಾರ್ ತಂದೆ ಸುಬ್ರಮಣಿಯಮ್ ಮಣಿ ವಿಧಿವಶ; ಗಣ್ಯರ ಸಂತಾಪ
ಇಹಲೋಕ ತ್ಯಜಿಸಿದ ಖ್ಯಾತ ನಿರ್ದೇಶಕ ಪ್ರದೀಪ್ ಸರ್ಕಾರ್
ಜ್ಯೂ. NTR ಅಭಿನಯದ ʻNTR 30ʼ ಗೆ ಮುಹೂರ್ತ ಫಿಕ್ಸ್… ಅಭಿಮಾನಿಗಳಲ್ಲಿ ಮೂಡಿದ ನಿರೀಕ್ಷೆ
47ನೇ ವಯಸ್ಸಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಲಯಾಳಂ ನಟಿಯ ತಾಯಿ
ಪ್ರತಿನಿತ್ಯ ಈ ಕಾರಣದಿಂದ ಮನೆ ಕೆಲಸದಾಕೆಯ ಪಾದವನ್ನು ಸ್ಪರ್ಶಿಸುತ್ತಾರೆ ಅಂತೆ ನಟಿ ರಶ್ಮಿಕಾ
MUST WATCH
ಹೊಸ ಸೇರ್ಪಡೆ
ಅಂದು ಟೀ ಮಾರಾಟಗಾರ: ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದ ಪೂರ್ಣೇಶ್ ಮೋದಿ ಬಗ್ಗೆ ಗೊತ್ತಾ?
‘ವೀರಂ’ ಟ್ರೇಲರ್‌ನಲ್ಲಿ ಪ್ರಜ್ವಲ್ ದೇವರಾಜ್ ಅಬ್ಬರ
ಬಿಜೆಪಿ ಮುಖಂಡನಿಗೆ ಸೇರಿದ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಸಾಮಗ್ರಿಗಳ ವಶ
ಸಿದ್ದರಾಮಯ್ಯ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲಿ: ಮಾಜಿ ಸಚಿವ ದಿವಾಕರ ಬಾಬು
ಅತಂತ್ರ ಸ್ಥಿತಿ ಬೇಡ, ಬಿಜೆಪಿಗೆ ಪೂರ್ಣ ಬಹುಮತ ನೀಡಿ ಮೋದಿ ಕೈ ಬಲಪಡಿಸಿ: ಅಮಿತ್ ಶಾ