ಶಾರುಖ್ ಸಿನಿಮಾ ಟ್ರೈಲರ್ ನೋಡಿ ಮೋಸಹೋದ ಪ್ರೇಕ್ಷಕಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಯ
Team Udayavani, Sep 21, 2021, 2:11 PM IST
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರು ಸಿನಿಮಾದ ಟ್ರೈಲರ್ ನಂಬಿ ಸಿನಿಮಾ ನೋಡಿ ಮೋಸ ಹೋಗಿದ್ದ ಪ್ರೇಕ್ಷಕಳೊರ್ವಳ ಸುಪ್ರೀಂ ಕೋರ್ಟಿನಲ್ಲಿ ಜಯ ಸಿಕ್ಕಿದ್ದು, 15 ಸಾವಿರ ರೂ.ಪರಿಹಾರ ಕೂಡ ಸಿಗುತ್ತಿದೆ.
2016 ರಲ್ಲಿ ಬಿಡುಗಡೆಯಾಗಿದ್ದ ಶಾರುಖ್ ಅಭಿಯನದ ಫ್ಯಾನ್ ಸಿನಿಮಾ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿತ್ತು. ಚಿತ್ರ ಬಿಡುಗಡೆಯ ಮುನ್ನ ಟೈಟಲ್ ಸಾಂಗ್ ಸಾಕಷ್ಟು ಮೆಚ್ಚುಗೆ ಪಡೆದುದಿತ್ತು.ಈ ಹಾಡಿನಿಂದ ಮೋಡಿಯಾದ ಮಹಾರಾಷ್ಟ್ರದ ಶಾರೂಖ್ ಖಾನ್ ಅಭಿಮಾನಿ ಅಫ್ರೀನ್ ಫಾತೀಮಾ ಎಂಬ ಶಿಕ್ಷಕಿ, ತಮ್ಮ ಮಕ್ಕಳನ್ನು ಕರೆದುಕೊಂಡು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದರು. ಆದರೆ, ಸಿನಿಮಾದಲ್ಲಿ ಆ ಗೀತೆಯನ್ನು ತೆಗೆದು ಹಾಕಲಾಗಿತ್ತು. ಇದು ಫಾತೀಮಾ ಅವರಿಗೆ ನಿರಾಸೆಯ ಜೊತೆ ಕೋಪಕ್ಕೆ ಕಾರಣವಾಯಿತು.
ಹೀಗೆ ಮೋಸ ಮಾಡಿದ ಚಿತ್ರತಂಡದ ವಿರುದ್ಧ ಫಾತೀಮಾ ಅವರು ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು. ಸಿನಿಮಾ ನಿರ್ಮಾಣ ಮಾಡಿದ್ದ ಯಶ್ ರಾಜ್ ಫಿಲಂಸ್ಗೆ 10 ಸಾವಿರ ಹಾಗೂ ಫಾತೀಮಾ ಸಿನಿಮಾ ನೋಡಲು ಖರ್ಚು ಮಾಡಿದ್ದ 5 ಸಾವಿರವನ್ನು ಸೇರಿಸಿ ಒಟ್ಟಾರೆ 15 ಸಾವಿರ ನೀಡಬೇಕು ಅಂತ ಗ್ರಾಹಕರ ವೇದಿಕೆ ಸೂಚಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಚಿತ್ರ ನಿರ್ಮಾಣ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಟ್ರೈಲರ್ ನಲ್ಲಿ ಒಂದು ತೋರಿಸಿ, ಸಿನಿಮಾದಲ್ಲಿ ಅದನ್ನು ತೋರಿಸದೆ ಇದ್ದ ಕಾರಣಕ್ಕೆ ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆ ನೀಡಿದ್ದ ಆದೇಶವನ್ನೇ ಎತ್ತಿ ಹಿಡಿದಿದೆ. ದೂರು ದಾಖಲಿಸಿದ ಫಾತೀಮಾಗೆ 15 ಸಾವಿರ ಪರಿಹಾರ ನೀಡುವಂತೆ ನಿರ್ದೇಶನ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ