ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆನ್ಲೈನ್ ನಲ್ಲಿ “ಸಾಹೋ” ಲೀಕ್

Team Udayavani, Aug 30, 2019, 6:30 PM IST

ಟಾಲಿವುಡ್ ಸೇರಿದಂತೆ ಬಹುಭಾಷೆಯಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದ್ದ “ಸಾಹೋ”  ಚಿತ್ರ ಇಂದು  ವಿಶ್ವದಾದ್ಯಂತ ಏಕಕಾಲಕ್ಕೆ ಬಿಡುಗಡೆಗೊಂಡು ಯಶಸ್ವಿ ಆರಂಭ ಪಡೆದುಕೊಂಡಿದೆ.

ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬರುತ್ತಿದ್ದು,ಚಿತ್ರ ಪ್ರೇಮಿಗಳಿಗೆ ಸಾಹೋ ಕೊಂಚ ನಿರಾಸೆ ಮೂಡಿಸಿದ್ದು ನಿಜ. ಚಿತ್ರ ಭಾರತದಲ್ಲಿ ಬಿಡುಗಡೆಗೊಂಡು ಕೆಲವೇ ಗಂಟೆಗಳಲ್ಲಿ ಆನ್ಲೈನ್ ನಲ್ಲಿ ದೊಡ್ಡ ಚಿತ್ರಗಳನ್ನು ಲೀಕ್  ಮಾಡುವ “ತಮಿಳು ರಾಕರ್ಸ್” ಹ್ಯಾಕರ್ಸ್ ಸಾಹೋ ಚಿತ್ರವನ್ನು ತನ್ನ ವೈಬ್ ಸೈಟ್  ನಲ್ಲಿ ಸೋರಿಕೆ ಮಾಡಿದೆ ಅನ್ನುವ ಸುದ್ದಿ ಹಬ್ಬಿದೆ. ತಮಿಳು ರಾಕರ್ಸ್ ಈ ರೀತಿಯಾಗಿ ದೊಡ್ಡ ಚಿತ್ರಗಳ ಮೇಲೆ ಕಣ್ಣಿಟ್ಟು ಅದನ್ನು ಆನ್ಲೈನ್ ನಲ್ಲಿ ಸೋರಿಕೆ ಮಾಡುವುದು ಮೊದಲಲ್ಲ. ತಮಿಳು ರಾಕರ್ಸ್ ಹ್ಯಾಕರ್ಸ್ಈ ರೀತಿಯಾಗಿ ಮಾಡುತ್ತಿದ್ರೂ ಇದುವರೆಗೂ ಇದರ ಮೂಲ ಹುಡುಕಲು ಸಾಧ್ಯವಾಗಿಲ್ಲ. ಬಾಲಿವುಡ್ ಲೈಪ್ ವರದಿಯ ಪ್ರಕಾರ ಸಾಹೋ ಚಿತ್ರದ ಉತ್ತಮ-ಗುಣಮಟ್ಟದ ಕಾಪಿ ಆನ್ಲೈನ್  ಲೀಕ್ ಆಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ