‘ಇಂದು ಸರ್ಕಾರ್’ ಚಿತ್ರಕ್ಕೆ ತಡೆ ಕೋರಿದ ‘ಸಂಜಯ್ ಗಾಂಧಿ ಪುತ್ರಿ’
Team Udayavani, Jul 22, 2017, 4:45 PM IST
ಮುಂಬಯಿ : ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುತ್ರ ದಿವಂಗತ ಸಂಜಯ್ ಗಾಂಧಿ ಅವರಿಗೆ ಜನಿಸಿದ ಪುತ್ರಿ ತಾನು ಎಂದು ಹೇಳಿಕೊಂಡಿರುವ ಪ್ರಿಯಾ ಪೌಲ್ ಎಂಬ ಮಹಿಳೆ ಬಾಲಿವುಡ್ ಚಿತ್ರ ನಿರ್ದೇಶಕ ಮಧುರ್ ಭಂಡಾರ್‌ಕರ್ ಅವರ ಮುಂಬರುವ “ಇಂದು ಸರ್ಕಾರ್’ ಚಿತ್ರಕ್ಕೆ ತಡೆ ನೀಡಬೇಕೆಂದು ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಲೇರಿದ್ದಾರೆ.
ಎಪ್ಪತ್ತರ ದಶಕದಲ್ಲಿ ದೇಶ ಕಂಡಿದ್ದ ಕರಾಳ ತುರ್ತು ಪರಿಸ್ಥಿತಿಯ ಹಿನ್ನೆಲೆಯನ್ನು ಹೊಂದಿರುವ ತನ್ನ “ಇಂದು ಸರ್ಕಾರ್’ ಸಿನೇಮಾದ ಶೇ.30 ಭಾಗ ಸತ್ಯಾಂಶ ಹೊಂದಿದ್ದು ಉಳಿದ ಭಾಗ ಕಾಲ್ಪನಿಕವಾಗಿದೆ ಎಂದು ಈಚೆಗೆ ಮಧುರ್ ಭಂಡಾರ್‌ಕರ್ ಹೇಳಿಕೊಂಡಿದ್ದರು.
ಭಂಡಾರ್‌ಕರ್ ಅವರು ತಮ್ಮ ಇಂದು ಸರ್ಕಾರ್ ಚಿತ್ರದಲ್ಲಿ ‘ಸತ್ಯ ಯಾವುದು ಕಟ್ಟು ಕಥೆ ಯಾವುದು’ ಎಂಬುದನ್ನು ವಿವರಿಸಿ ಸ್ಪಷ್ಟೀಕರಣ ನೀಡುವಂತೆ ಅವರಿಗೆ ನಿರ್ದೇಶ ನೀಡಬೇಕೆಂದು ಕೋರಿ ಪ್ರಿಯಾ ಪೌಲ್ ನಿನ್ನೆ ಶುಕ್ರವಾರ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ತುರ್ತು ಪರಿಸ್ಥಿತಿಯ ವೇಳೆ ನೆಗೆಟೀವ್ ಹೀರೋ ಆಗಿ ಮೆರೆದಿದ್ದ ಸಂಜಯ್ ಗಾಂಧಿಯನ್ನು ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿರುವ ಸಾಧ್ಯತೆಯನ್ನು ಪ್ರಿಯಾ ಪೌಲ್ ಶಂಕಿಸಿ ಚಿತ್ರದ ತಡೆಗೆ ಹೈಕೋರ್ಟಿಗೆ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಮಧುರ್ ಭಂಡಾರ್‌ಕರ್ ಅವರ ಇಂದು ಸರ್ಕಾರ್ ಸಿನೇಮಾ ಜು.28ರಂದು ತೆರೆ ಕಾಣಲಿದೆ.
ಭಂಡಾರ್‌ಕರ್ ಅವರು ತಮ್ಮ ಇಂದು ಸರ್ಕಾರ್ ಚಿತ್ರದಲ್ಲಿನ ನಿಜದ ಭಾಗವನ್ನು ತೆಗೆದು ಹಾಕುವ ವರೆಗೆ ಅವರ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ಪ್ರಿಯಾ ಪೌಲ್ ತಮ್ಮ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.
ಸೆನ್ಸಾರ್ ಮಂಡಳಿ ಇಂದು ಸರ್ಕಾರ್ ಚಿತ್ರಕ್ಕೆ 12 ಕಟ್‌ಗಳನ್ನು ಆದೇಶಿಸಿ ಯು/ಎ ಸರ್ಟಿಫಿಕೇಟ್ ನೀಡಿದೆ. ಪ್ರಿಯಾ ಪೌಲ್ ಅವರ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಜುಲೈ 24ರಂದು ನಡೆಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕಬಡ್ಡಿ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಆಟಗಾರ ಉದಯ ಚೌಟ ಇನ್ನಿಲ್ಲ
ಇಂದಿನ ಗ್ರಹಬಲ: ಈ ರಾಶಿಯವರಿಂದು ಉದ್ಯೋಗದಲ್ಲಿ ಘರ್ಷಣೆಗೆ ಅವಕಾಶ ನೀಡಬೇಡಿ
ಧಾರವಾಡದಲ್ಲಿ ಭೀಕರ ಅಪಘಾತ: ಮರಕ್ಕೆ ಕ್ರೂಸರ್ ಢಿಕ್ಕಿ; ಮಕ್ಕಳು ಸೇರಿ ಸ್ಥಳದಲ್ಲೇ 7 ಜನ ಸಾವು
ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ
ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ