Kangana; ಖಾನ್ ತ್ರಯರನ್ನು ಒಟ್ಟಾಗಿಸಿ ಚಿತ್ರ ನಿರ್ಮಿಸಿ, ನಿರ್ದೇಶಿಸಲು ಇಷ್ಟಪಡುತ್ತೇನೆ!!
ನನ್ನ ನೆಚ್ಚಿನ ಖಾನ್‌ಗಳಲ್ಲಿ ಒಬ್ಬರಾದ... ಖ್ಯಾತ ನಟಿ, ಬಿಜೆಪಿ ಸಂಸದೆ ವಿಷಾದ ವ್ಯಕ್ತ ಪಡಿಸಿದ್ದೇಕೆ?
Team Udayavani, Aug 14, 2024, 4:10 PM IST
ಮುಂಬೈ: ಬಾಲಿವುಡ್ ದಿಗ್ಗಜರಾದ ಶಾರುಖ್ ಖಾನ್ , ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರನ್ನು ಒಂದೇ ಚಿತ್ರದಲ್ಲಿ ಒಟ್ಟಿಗೆ ಸೇರಿಸಲು ನಾನು ಬಯಸುತ್ತೇನೆ ಎಂದು ಖ್ಯಾತ ನಟಿ-ಚಲನಚಿತ್ರ ನಿರ್ಮಾಪಕಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಬುಧವಾರ(ಆಗಸ್ಟ್ 11) ಗಮನ ಸೆಳೆಯುವ ಹೇಳಿಕೆ ನೀಡಿದ್ದಾರೆ.
ಕಂಗನಾ ಅವರು ತಮ್ಮ ನಿರ್ದೇಶನದ “ಎಮರ್ಜನ್ಸಿ”(Emergency) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ. Emergency ಚಿತ್ರದಲ್ಲಿ ಬಿಜೆಪಿ ಸಂಸದೆಯಾಗಿರುವ ಕಂಗನಾ ಕಾಂಗ್ರೆಸ್ ಪ್ರಬಲ ನಾಯಕಿಯಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವುದು ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸುವಂತೆ ಮಾಡಿದೆ. ಚಿತ್ರ ಸೆಪ್ಟೆಂಬರ್ 6 ರಂದು ತೆರೆಗೆ ಬರಲಿದೆ.
ನನ್ನ ನೆಚ್ಚಿನ ಖಾನ್‌ಗಳಲ್ಲಿ ಒಬ್ಬರಾದ ದಿವಂಗತ ಇರ್ಫಾನ್ ಖಾನ್ ಅವರ ಚಿತ್ರ ನಿರ್ದೇಶಿಸಲು ನನಗೆ ಸಾಧ್ಯವಾಗಲಿಲ್ಲ ಎಂದು ವಿಷಾದ ವ್ಯಕ್ತ ಪಡಿಸಿದರು.
“ನಾನು ಮೂವರೂ ಖಾನ್‌ಗಳ ಚಿತ್ರ ನಿರ್ಮಿಸಲು ಮತ್ತು ನಿರ್ದೇಶಿಸಲು ಇಷ್ಟಪಡುತ್ತೇನೆ. ಅವರ ಪ್ರತಿಭಾ ಸಂಪನ್ನತೆಯನ್ನು ತೋರಿಸಲು ನಾನು ಇಷ್ಟಪಡುತ್ತೇನೆ, ಅಲ್ಲಿ ಅವರು ನಟಿಸಿ ಅತ್ಯುತ್ತಮವಾಗಿ ಕಾಣಬಹುದು, ಸಮಾಜದಲ್ಲಿ ಗಮನಾರ್ಹವಾದದ್ದನ್ನು ಸಹ ಮಾಡಬಹುದು.ಅವರು ಪ್ರತಿಭಾವಂತರು ಮತ್ತು ಉದ್ಯಮಕ್ಕೆ ಸಾಕಷ್ಟು ಆದಾಯವನ್ನು ಸೇರಿಸಬಹುದು. ಅವರಿಗೆ ನಾವು ಚಿರಋಣಿಯಾಗಿರಬೇಕು ” ಎಂದು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ದೊಡ್ಡ ಮಟ್ಟದ ಹೇಳಿಕೆ ನೀಡಿದ್ದಾರೆ.
ಮಂಡಿಯಿಂದ ಬಿಜೆಪಿ ಟಿಕೆಟ್‌ನಲ್ಲಿ ಸಂಸದೆಯಾಗಿ ಆಯ್ಕೆಯಾದ ನಂತರ ಬಿಡುಗಡೆಯಾಗುತ್ತಿರುವ ಕಂಗನಾ ಅವರ ಮೊದಲ ಚಿತ್ರ “ಎಮರ್ಜನ್ಸಿ” ಆಗಿದ್ದು, ರಾಜಕೀಯವಾಗಿಯೂ ಭಾರೀ ಸಂಚಲನ ಮೂಡಿಸಿದೆ.
ಶಾರುಖ್ ಮತ್ತು ಸಲ್ಮಾನ್ ಅವರು “ಕರಣ್ ಅರ್ಜುನ್” ಮತ್ತು “ಕುಚ್ ಕುಚ್ ಹೋತಾ ಹೇ ” ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಸಲ್ಮಾನ್ ಮತ್ತು ಆಮೀರ್ “ಅಂದಾಜ್ ಅಪ್ನಾ ಅಪ್ನಾ” ನಲ್ಲಿ ಸಹ ನಟಿಸಿದ್ದಾರೆ. ಇದುವರೆಗೆ ಮೂವರು ಖಾನ್ ತ್ರಯರು ಚಿತ್ರವೊಂದರ ಮೂಲಕ ಜತೆಗೂಡಿಲ್ಲ ಎನ್ನುವುದು ವಿಶೇಷ. ಸಲ್ಮಾನ್ ಅವರ 2011 ರ ಚಲನಚಿತ್ರ “ರೆಡಿ” ಯಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Japan ಆ್ಯನಿಮೇಟೆಡ್ ರಾಮಾಯಣ ಅ.18ಕ್ಕೆ ಮರು ಬಿಡುಗಡೆ
Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್
Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?
Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್ ಬಾಸ್ʼ ಖ್ಯಾತಿಯ ಅಬ್ದು ವಿವಾಹ
National Cinema Day: ಈ ದಿನ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.