ಅಣ್ತಮ್ಮ ಮಾತನಾಡಿದ್ದಾರೆ…


Team Udayavani, Aug 8, 2017, 10:45 AM IST

NOV-NAANU-AVALU-01.jpg

ಮಿನರ್ವ ಮಿಲ್‌ನಲ್ಲಿ ಕಲರ್‌ಫ‌ುಲ್‌ ಸೆಟ್‌ ಹಾಕಲಾಗಿತ್ತು. ರವಿಚಂದ್ರನ್‌ ಅವರ ಎರಡನೇ ಪುತ್ರ ವಿಕ್ರಮ್‌ ಸ್ಟೈಲಿಶ್‌ ಆಗಿ ಫೋಸ್‌ ಕೊಡುತ್ತಿದ್ದರು. ಅವರ ಬ್ಯಾಕ್‌ಗ್ರೌಂಡ್‌ಲ್ಲಿ ಗ್ಲಾಮರಸ್‌ ಬೆಡಗಿಯರು. ಹೀಗೆ ವಿಕ್ರಮ್‌ ಫೋಸ್‌ ಕೊಡುತ್ತಾ, ಸ್ಟೆಪ್‌ ಹಾಕುತ್ತಿದ್ದುದು “ನವೆಂಬರ್‌ನಲ್ಲಿ ನಾನು ಅವಳು’ ಚಿತ್ರಕ್ಕೆ. ಕನಕಪುರ ಶ್ರೀನಿವಾಸ್‌ ನಿರ್ಮಾಣದ, ನಾಗಶೇಖರ್‌ ನಿರ್ದೇಶನದ ಈ ಚಿತ್ರದ ಟೀಸರ್‌ ಹಾಗೂ ಫೋಟೋಶೂಟ್‌ ಚಿತ್ರೀಕರಣ ನಡೆಯುತ್ತಿತ್ತು.

ತಮ್ಮನ ಮೊದಲ ಚಿತ್ರದ ಫೋಟೋಶೂಟ್‌ನಲ್ಲಿ ಸಾಥ್‌ ನೀಡಲು, ನೈತಿಕ ಬೆಂಬಲ ನೀಡಲು, ಹೆದರಬೇಡ ಧೈರ್ಯವಾಗಿ ಮಾಡು ಎನ್ನಲು ವಿಕ್ರಮ್‌ ಸಹೋದರ, ಮನೋರಂಜನ್‌ ಕೂಡಾ ಸೆಟ್‌ನಲ್ಲೇ ಇದ್ದರು. ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಇಬ್ಬರು ಮಕ್ಕಳು ಒಂದೇ ಸೆಟ್‌ನಲ್ಲಿ ಒಟ್ಟಿಗೆ ಮಾತನಾಡಿದ್ದಾರೆ. ಈ ಅಣ್ತಮ್ಮನ ಚಿಟ್‌ಚಾಟ್‌ ಇಲ್ಲಿದೆ …

* ಹೀರೋ ಆಗಿದ್ದೀರಿ. ನಿಮ್ಮ ಕೆರಿಯರ್‌ನ ಮೊದಲ ಫೋಟೋಶೂಟ್‌ ನಡೀತಾ ಇದೆ. ಈ ಸಂದರ್ಭ ಹೇಗಾನಿಸ್ತಾ ಇದೆ?
ಡ್ರೀಮ್‌ ಕಮ್‌ ಟ್ರೂ ಅಂತಾರಲ್ಲ, ಆ ತರಹದ ಖುಷಿಯಲ್ಲಿದ್ದೇನೆ ನಾನು. ಚಿಕ್ಕ ವಯಸ್ಸಿನಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ. ಈಗ ಆ ದಿನ ಕೂಡಿ ಬಂದಿದೆ. ಪ್ರತಿ ಕಲಾವಿದರ ಜೀವನದಲ್ಲೂ ಹೀರೋ ಆಗಿ ಲಾಂಚ್‌ ಆಗುವ ಮೊದಲ ಸಿನಿಮಾ ತುಂಬಾ ಮಹತ್ವದ್ದಾಗಿರುತ್ತದೆ. ನಾನು ಕೂಡಾ ಅದೇ ಕುತೂಹಲ, ಉತ್ಸಾಹದಿಂದಿದ್ದೇನೆ. 

* ನೀವು ಟೆಕ್ನಿಷಿಯನ್‌ ಆಗುತ್ತೀರಿ ಎಂಬ ಮಾತು ಕೇಳಿಬರುತ್ತಿತ್ತಲ್ಲ?
ನನಗೆ ಟೆಕ್ನಿಕಲಿ ತುಂಬಾ ಇಂಟರೆಸ್ಟ್‌ ಇತ್ತು. ಈಗಲೂ ಇದೆ. ಆದರೆ, ಆರಂಭದಿಂದಲೂ ನನಗೆ ಹೀರೋ ಆಗುವ ಆಸೆ ಇತ್ತು. ಆ ನಂತರ ಟೆಕ್ನಿಷಿಯನ್‌. ಒಂದು ಹಂತದಲ್ಲಿ ನಾನೇ ಸಿನಿಮಾ ನಿರ್ದೇಶನ ಮಾಡಿ, ಹೀರೋ ಆಗಿ ನಟಿಸಬೇಕೆಂದುಕೊಂಡಿದ್ದೆ. ಆ ಸಮಯದಲ್ಲಿ ಈ ಆಫ‌ರ್‌ ಬಂತು. ಒಳ್ಳೆಯ ಕಥೆ, ತಂಡವನ್ನು ಮಿಸ್‌ ಮಾಡಿಕೊಳ್ಳಬಾರದೆಂಬ ಕಾರಣಕ್ಕೆ ಒಪ್ಪಿಕೊಂಡೆ. ಮುಂದಿನ ದಿನಗಳಲ್ಲಿ ನಿರ್ದೇಶನ ಮಾಡೋ ಆಸೆಯೂ ಇದೆ. 

* ಹಾಗಾದರೆ ಈ ಸಿನಿಮಾಕ್ಕೆ ನೀವು ಆಚಾನಕ್‌ ಆಗಿ ಹೀರೋ ಆಗಿದ್ದಾ?
ಖಂಡಿತಾ ಅಲ್ಲ, ಆಫ‌ರ್‌ ಬಂದ ನಂತರ ಎರಡ್ಮೂರು ಸಿಟ್ಟಿಂಗ್‌ ಆಗಿ ಪ್ಲ್ರಾನ್‌ ಮಾಡಿದ ನಂತರ ಈ ಸಿನಿಮಾ ಮಾಡಲು ನಿರ್ಧರಿಸಿದ್ದು. ಒಳ್ಳೆಯ ಬ್ಯಾನರ್‌, ಒಳ್ಳೆಯ ಕಥೆ, ಒಳ್ಳೆಯ ನಿರ್ದೇಶಕ. ಒಬ್ಬ ನ್ಯೂ ಕಮ್ಮರ್‌ನ ಸಿನಿಮಾಕ್ಕೆ ಇವೆಲ್ಲವೂ ಕೂಡಿ ಬಂದಾಗ ಮಿಸ್‌ ಮಾಡಿದರೆ ಅದನ್ನು ನಾವು ಮಾಡಿದ ಬಹುದೊಡ್ಡ ತಪ್ಪಾಗುತ್ತದೆ. ಅದಕ್ಕೆ ಖುಷಿಯಿಂದ ಒಪ್ಪಿಕೊಂಡೆ. 

* ಆರಂಭದಲ್ಲಿ ಕಥೆ ಕೇಳಿದ್ದು, ನೀವಾ, ನಿಮ್ಮ ತಂದೆನಾ?
ಶುರುವಿಗೆ ನಾನೇ ಕಥೆ ಕೇಳಿದೆ. ಕಥೆ ಇಷ್ಟವಾಗಿ ಸಿನಿಮಾ ಮಾಡಲು ಡಿಸೈಡ್‌ ಮಾಡಿದೆ. ಆ ನಂತರ ನಾನೇ ಡ್ಯಾಡಿಗೆ ಕಥೆ ಹೇಳಿದೆ. ನಿನಗೆ ಇಷ್ಟವಾದರೆ ಮಾಡು, ನಿನ್ನ ಜೊತೆ ನಾನಿರುತ್ತೇನೆ ಎಂದರು. 

* ಕಥೆ ತುಂಬಾ ಕಾಡಿತಾ?
ಕಥೆ ಹಾಂಟ್‌ ಮಾಡಿದ್ದಕ್ಕಿಂತ ಹೆಚ್ಚಾಗಿ ಡೈರೆಕ್ಟರ್‌ ಅವರು ಹಾಂಟ್‌ ಮಾಡಿಸಿದರು. ಒಬ್ಬ ಹೊಸಬನಿಗೆ ಏನು ಬೇಕೋ ಆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿವೆ. ರವಿಚಂದ್ರನ್‌ ಅವರ ಮಗ ಅಂದಾಗ ಜನ ಏನು ನಿರೀಕ್ಷಿಸ್ತಾರೋ ಅದು ಕೂಡಾ ಈ ಸಿನಿಮಾದಲ್ಲಿದೆ. ಜೊತೆಗೆ ನನ್ನ ಲುಕ್‌, ಮ್ಯಾನರೀಸಂಗೆ ಏನು ಬೇಕೋ ಅವೆಲ್ಲವೂ ಈ ಸಿನಿಮಾದಲ್ಲಿವೆ. 

* ನಿಮ್ಮ ತಯಾರಿ ಹೇಗಿದೆ? 
ಡ್ಯಾನ್ಸ್‌, ಫೈಟ್‌ ಕಲಿಯುತ್ತಿದ್ದೇನೆ. ಜೊತೆಗೆ ಡ್ರಾಮಾ ಕೂಡಾ ನಡೀತಾ ಇದೆ. ಚಿತ್ರದ ಫ‌ಸ್ಟ್‌ಹಾಫ್ನಲ್ಲಿ ಬೈಕ್‌ ರೇಸರ್‌ ಗೆಟಪ್‌ ಬರುತ್ತದೆ. ಅದಕ್ಕೆ ಬೈಕ್‌ ರೈಡಿಂಗ್‌ ಕೂಡಾ ಕಲಿಯಬೇಕು. ನಾನು ತುಂಬಾ ಬೈಕ್‌ ರೈಡಿಂಗ್‌ ಮಾಡೋದಿಲ್ಲ. ಈಗ ಬೈಕ್‌ ರೈಡಿಂಗ್‌ ಕಲಿಯುತ್ತಿದ್ದೇನೆ. ಅದು ರೇಸರ್‌ ಶೈಲಿಯಲ್ಲಿ.

* ಅಪ್ಪನ ನಿರ್ದೇಶನದಲ್ಲಿ ಲಾಂಚ್‌ ಆಗಬೇಕೆಂಬ ಆಸೆ ಇತ್ತಾ?
ಈಗಾಗಲೇ ಅವರ ಸಿನಿಮಾದಲ್ಲಿ ನಟಿಸಿದ್ದೇನೆ. ಮುಂದೆಯೂ ನಟಿಸಬಹುದು. ಕೇವಲ ನಿರ್ದೇಶನವಷ್ಟೇ ಅಲ್ಲ, ಅವರ ಜೊತೆಗೂ ನಟಿಸಬಹುದು. ಬೇರೆ ಟೀಂ ಜೊತೆ ವರ್ಕ್‌ ಮಾಡೋದನ್ನು ಕಲಿತುಕೊಂಡರೆ, ಅಪ್ಪನ ಜೊತೆ ಇನ್ನೂ ಸುಲಭವಾಗಿ ಕೆಲಸ ಮಾಡಬಹುದು. 

* ನಿಮ್ಮ ಅಣ್ಣನೂ ಹೀರೋ ಆಗಿದ್ದಾರೆ. ಈಗ ಜೊತೆಗೆ ಇದ್ದಾರೆ?
ಅಣ್ಣ ನನ್ನ ಬೆನ್ನೆಲು ಎನ್ನಬಹುದು. ಜೊತೆಗೆ ಇರ್ತಾರೆ. ಬ್ರದರ್‌ ಅನ್ನೋದಕ್ಕಿಂತ ನನ್ನ ಗುರು. 

* ಮುಂದೆ ಯಾವ ಜಾನರ್‌ನಲ್ಲಿ ಗುರುತಿಸಿಕೊಳ್ಳಲು ಇಷ್ಟಪಡುತ್ತೀರಿ?
ಯಾವುದೇ ಜಾನರ್‌ಗೆ ಅಂಟಿಕೊಳ್ಳದೇ, ಒಳ್ಳೆಯ ಕಮರ್ಷಿಯಲ್‌ ಸಿನಿಮಾ ಮಾಡುವ ಆಸೆ ಇದೆ. ನಿರ್ದೇಶಕರ ಕಲ್ಪನೆಗೆ ಜೀವ ತುಂಬುತ್ತಾ, ನಿರ್ದೇಶಕರ ನಟ ಅಗಲು ಇಷ್ಟ.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kushee ravi spoke about Case of Kondana

Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…

aradhana

Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್‌ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ

rishab-shetty

ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ

TDY-39

ಸಾರ್ವಜನಿಕರೇ ಆನ್‌ಲೈನ್‌ ಆಮಿಷಕ್ಕೆ ಮಾರುಹೋಗದಿರಿ

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.