ಚಿತ್ತ ಹುತ್ತಗಟ್ಟುವುದೇ  ಕವಿಯ ಗೆಲುವಿನ ಗುಟ್ಟು

Team Udayavani, Sep 8, 2021, 6:30 AM IST

Untitled-1

ಕಾವ್ಯಲೋಕದ ಚಿರಯೌವನಿಗ ಎಂದು ಹೆಸರಾದವರು ಬಿ.ಆರ್‌. ಲಕ್ಷ್ಮಣರಾವ್‌. “ತುಂಟಕವಿ’ ಎನ್ನುವುದು ಅವರಿಗೆ ಅಂಟಿಕೊಂಡ ಬಿರುದು. ಸುಬ್ಟಾಭಟ್ಟರ ಮಗಳೇ… ಪದ್ಯ ಅವರ ಕಿಲಾಡಿತನಕೆ ಕನ್ನಡಿ! ನಾಳೆ (ಸೆ.9) ಅವರ 75ನೇ ಹುಟ್ಟುಹಬ್ಬ. ಈ ನೆಪದಲ್ಲಿ ಅವರ ಕಾವ್ಯಪಯಣದ ಕುರಿತು ಒಂದು ಮಾತುಕತೆ… 

ತುಂಟಕವಿಗೆ ವಯಸ್ಸಾಯಿತು ಎನ್ನುವುದನ್ನು ನಿಮ್ಮೊಳಗಿನ ಯಾವ ಸಂಗತಿ ಮತ್ತೆ ಮತ್ತೆ ನೆನಪಿಸುತ್ತಿದೆ?

ವಯಸ್ಸಾಗಿದ್ದರ ಅರಿವು ನನ್ನೊಳಗೆ ಇದ್ದೇ ಇದೆ. ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಮುಪ್ಪಿಲ್ಲ ಎನ್ನುವ ನಂಬಿಕೆ ನನ್ನದು. ಅದರಲ್ಲೂ ಕವಿಗೆ ಮುಪ್ಪಿನ ಹಂಗಿಲ್ಲ. ನನ್ನ “ನವೋನ್ಮೇಷ’ ಎಂಬ ಪದ್ಯದ ಅಂತರಾಳವೂ ಅದೇ. ಕವಿತೆ ಎಂದಿಗೂ ಕವಿಯನ್ನು ಯವ್ವನಸ್ಥನನ್ನಾಗಿಯೇ ಉಳಿಸುವಂಥ ಲೀಲೆ. ಸಾಮಾಜಿಕವಾಗಿ ನಾನು, ನನ್ನ ನಿಲುವು ವಯೋವೃದ್ಧನಂತೆ ನಡೆದುಕೊಳ್ಳುತ್ತದೆಯಾದರೂ ರಚನೆಗಳಿಗೆ ನೆರಿಗೆ ಮೂಡಿಲ್ಲ.

ಹೊಸಗನ್ನಡ ಸಾಹಿತ್ಯದ ಹಲವು ಕಾಲಘಟ್ಟಗಳನ್ನು ದಾಟಿ ಬಂದ ನಿಮ್ಮನ್ನು ಸೆರೆಯಾಗಿಸಿದ ಕಾಲ ಯಾವುದು?

ನಾನು ಬರುವ ಮೊದಲೇ ನವೋದಯ ಮುಗಿದಿತ್ತು. ನವ್ಯದ ಉಚ್ಛಾ†ಯ ಕಾಲದಲ್ಲಿ ಕಾವ್ಯಲೋಕಕ್ಕೆ ಕಾಲಿಟ್ಟೆ. ಬಳಿಕ ಬಂಡಾಯ, ದಲಿತ ಬಂತು. ಇವೆಲ್ಲವನ್ನೂ ಹಾದು ಬಂದಿದ್ದೇನೋ ನಿಜ. ಆದರೆ, ಎಲ್ಲ ಚಳವಳಿಗಳ ಪ್ರಭಾವ ಪರೋಕ್ಷವಾಗಿ ನನ್ನ ಮೇಲೆ ಬಿದ್ದಿದೆ. ಆದರೆ ಯಾವುದೇ ಒಂದು ಚಳವಳಿಯ ಜತೆಗೂ ನಾನು ಗುರುತಿಸಿಕೊಳ್ಳಲಿಲ್ಲ. ಪ್ರಾರಂಭದಲ್ಲಿ ನವ್ಯದಲ್ಲೇ ಬರೆದೆನಾದರೂ, ಆರಂಭದ ನನ್ನ “ಗೋಪಿ ಮತ್ತು ಗಾಂಡಲೀನಾ’ದಿಂದಲೂ ನಾನು ನವ್ಯದ ಚೌಕಟ್ಟಿನಿಂದ ಹೊರಕ್ಕೆ ಬಂದು, ನನ್ನ ತನವನ್ನು ಉಳಿಸಿಕೊಂಡೆ. ಇದಕ್ಕೆ ಅಡಿಗರೇ ನನಗೆ ಮಾದರಿ.

ಇಂಗ್ಲಿಷ್‌ ಅಧ್ಯಾಪನ, ಫೋಟೋಗ್ರಫಿ- ಇವೆರಡರಲ್ಲಿ ನಿಮ್ಮ ಕಾವ್ಯಗಡಲೊಳಗೆ ಲಂಗರು ಹಾಕಿದ ಸಂಗತಿ ಯಾವುದು?

ನನಗೆ ಬಿ.ಎ.ಯಲ್ಲಿ ಅಧ್ಯಯನಕ್ಕೆ ಸಿಕ್ಕಿದ್ದು ಇಂಗ್ಲಿಷ್‌ ಮತ್ತು ಸಂಸ್ಕೃತ. ನನ್ನ ಮೇಲೆ ಇಂಗ್ಲಿಷ್‌ ಸಾಹಿತ್ಯದ ಪ್ರಭಾವ ದಟ್ಟವಿದೆ. ಹಾಗೆಯೇ ಫೋಟೋಗ್ರಫಿಯ ನೆರಳೂ ನನ್ನ ಕಾವ್ಯದ ಮೇಲೆ ಬಿದ್ದಿದೆ. ನನ್ನ ತಂದೆಯ ವೃತ್ತಿ, ಫೋಟೋಗ್ರಫಿ. ಅವರಿಗೆ ಅನಾರೋಗ್ಯವಾಗಿದ್ದಾಗ ನಾನೇ ಫೋಟೊಧೀಗ್ರಫಿ ಮಾಡುತ್ತಿದ್ದೆ. ಆದರೆ ನನಗೆ ಕಾವ್ಯದ ಕಡೆಗೆ ಒಲವು ಇದ್ದಿದ್ದರಿಂದ ಫೋಟೋಗ್ರಫಿ ಕಸುಬಾಗಲಿಲ್ಲ. ಇಂಗ್ಲಿಷ್‌ ಅಧ್ಯಾಪನದಿಂದ ಕಾವ್ಯಕ್ಕೆ ಸೌಂದರ್ಯ ಬಂತು. ಫೋಟೊಧೀಗ್ರಫಿಯ ನೋಟಗಳಿಂದ ಕವಿತೆಗಳಿಗೆ ಹೊಸ ದೃಷ್ಟಿ ಸಿಕ್ಕಿತು. ನನ್ನ ಸಮಗ್ರ ಕಾವ್ಯದ ಹೆಸರು ಕೂಡ “ಕ್ಯಾಮೆರಾ ಕಣ್ಣು’!

ಗೋಪಿ ಮತ್ತು ಗಾಂಡಲೀನಾ’ದಂಥ ತುಂಟ ಕವಿತೆ ಬರೆಯು ತ್ತಲೇ, “ಅಮ್ಮ ನಿನ್ನ ಎದೆಯಾಳದಲ್ಲಿ’ ಎಂದು ಗಾಳ ಹಾಕಿದವರು ನೀವು. ರೂಪಾಂತರ ಕುಸುರಿಗೆ ನಿಮ್ಮ ಸಿದ್ಧತೆ ಯಾವ ಬಗೆ?

ಕವಿತೆ ನನ್ನ ಪಾಲಿಗೆ ಲೀಲೆ. ಮಿಗಿಲಾಗಿ, ಕವಿಯೂ ಒಬ್ಬ ಮನುಷ್ಯನೇ. ಬೆಳಗ್ಗಿನಿಂದ ರಾತ್ರಿಯ ತನಕ ನಾನೂ ವಿವಿಧ ಮನಃಸ್ಥಿತಿ, ಭಾವಸ್ಥಿತಿಗಳಲ್ಲಿರುತ್ತೇನೆ. ಭಾವನಾತ್ಮಕ ಅನುಭವ, ಹಾಗೆಯೇ ಗಂಭೀರ ಕವಿತೆಗಳಿಗೆ ಬೇಕಾದ ಅನುಭವ ಮುಖಾಮುಖೀಯಾಗುತ್ತಲೇ ಇರುತ್ತವೆ. ಇವೆಲ್ಲ ಕವಿಯೊಳಗೆ ಒಂದೇ ದಿನದಲ್ಲಿ ಘಟಿಸುವಂಥ ಭಾವಾಂತರಗಳು. ನನ್ನ ಜೀವನಾನುಭವಗಳೇ ಕವಿತೆಯಾದವು. ಸಹಜವಾಗಿ ಕಾವ್ಯ ಕಟ್ಟುವುದನ್ನು ನಾನು ರೂಢಿಸಿಕೊಂಡೆ. ನೋಡುತ್ತಾ ನೋಡುತ್ತಾ, ನನ್ನ ಅನೇಕ ಕವಿತೆಗಳು ಭಾವ ಗೀತೆಗಳಾಗಿ ರೂಪಾಂತರಗೊಂಡವು. “ಜಾಲಿಬಾರಿನಲ್ಲಿ ಕುಳಿತ ಪೋಲಿ ಗೆಳೆಯರು’- ಹಾಡಾಯಿತು. “ಅಮ್ಮಾ ನಿನ್ನ ಎದೆಯಾಳದಲ್ಲಿ’- ಜನರ ಮನಸ್ಸನ್ನು ತಟ್ಟಿತು.

ಖಂಡ ಕಾವ್ಯ, ಮಹಾಕಾವ್ಯ  ಪ್ರಯೋಗಕ್ಕೆ ಜಿಗಿಯಲಿಲ್ಲವೇ?

ನನಗೆ ಮಾದರಿ ಆದವರು ಅಡಿಗರು, ಬೇಂದ್ರೆ,  ಕೆಎಸ್‌ನ. ಹೀಗಾಗಿ, ನಾನು ಆ ಹಾದಿಯಲ್ಲಿ ಹೆಜ್ಜೆ ಇಡಲಿಲ್ಲ. ಅದರ ಅಗತ್ಯವೂ ಕಾಣಲಿಲ್ಲ. ಯಾವಾಗ ಕಾದಂಬರಿ ಬಂತೋ, ಆಗ ಮಹಾಕಾವ್ಯ ಮಸುಕಾಯಿತು.

ಪರಂಪರೆ ಮತ್ತು ಹೊತ್ತಿನ ಹೊಸ ತಲೆಮಾರಿನ ಬರಹಗಾರರ ಬಗ್ಗೆ ನಿಮ್ಮ ನಿಲುವು?

“ಪದ್ಯವಂತರಿಗೆ ಇದು ಕಾಲವಲ್ಲ’ ಎಂಬ ನನ್ನ ಪದ್ಯವೇ ಇದೆ. ಈಗ ಪದ್ಯಬರವಣಿಗೆ ಅನೇಕರಿಗೆ ಸಲೀಸು. ಅದು ಸುಲಭ ಎನ್ನುವ ಕಾರಣಕ್ಕೆ ಬರೆಯುತ್ತಿದ್ದಾರೆ. ಏನು ಬರೆದರೂ ಪದ್ಯ ಎನ್ನುವಂತಾಗಿದೆ. ಸಿದ್ಧತೆ ಬೇಕಿಲ್ಲ, ಶಿಲ್ಪ ತಿಳಿದಿಲ್ಲ, ಪರಂಪರೆ ಅಧ್ಯಯನದ ಅರಿವಿಲ್ಲ. ನಾನು ಹೊಸತೇನಾದರೂ ಬರೆಯುವುದಕ್ಕಿದೆಯಾ? ಅಥವಾ ನಾನು ಬರೆದುದರಲ್ಲಿ ಹೊಸತೇನಾದರೂ ಇದೆಯಾ?- ಎಂಬುದನ್ನೂ ನೋಡುವುದಿಲ್ಲ. ಕವಿಗೆ ವುÂತ್ಪತ್ತಿ ಜಾಸ್ತಿ ಯಾದಷ್ಟು ಅವನ ಕಾವ್ಯದ ಉತ್ಪತ್ತಿಯೂ ಜಾಸ್ತಿಯಾ ಗುತ್ತದೆ. ಈ ಸತ್ಯವನ್ನು ಇಂದಿನವರು ಅರಿತುಕೊಳ್ಳಬೇಕು. ಹಾಗೆಂದು ಚೆನ್ನಾಗಿ ಕವಿತೆ ಬರೆಯುವ ಹೊಸಕವಿಗಳೂ ನಮ್ಮ ನಡುವೆಯೇ ಇದ್ದಾರೆ. ಆದರೆ ಫೇಸ್‌ ಬುಕ್‌- ವಾಟ್ಸ್‌ಆ್ಯಪ್‌ನ ಈ ಯುಗದಲ್ಲಿ ರಚನೆಗಳಿಗೆ ಸರಿಯಾದ ವಿಮರ್ಶೆ ಸಿಗುತ್ತಿಲ್ಲ.

-ಸಂದರ್ಶನ:  ಕೀರ್ತಿ ಕೋಲ್ಗಾರ್‌

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kushee ravi spoke about Case of Kondana

Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…

aradhana

Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್‌ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ

rishab-shetty

ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ

TDY-39

ಸಾರ್ವಜನಿಕರೇ ಆನ್‌ಲೈನ್‌ ಆಮಿಷಕ್ಕೆ ಮಾರುಹೋಗದಿರಿ

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

ಉದಯವಾಣಿ ಸಂದರ್ಶನ: ಸಿಎಂ ಆಗಲು ಸಮಾವೇಶ ಮಾಡುತ್ತಿಲ್ಲ; ಸಿದ್ದರಾಮಯ್ಯ  

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.