Udayavni Special

ಬಿಸಿ ತಾಗದ ಬಂಡಾಯ


Team Udayavani, Mar 15, 2020, 7:00 AM IST

Naragunda-Bhandaya

ಉತ್ತರ ಕರ್ನಾಟಕದ ನರಗುಂದದ ಯುವ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಸ್ವಾಭಿಮಾನಿಯಾಗಿ ಒಕ್ಕಲುತನವನ್ನು ನಡೆಸಿಕೊಂಡು, ಊರಿನವರಿಗೆಲ್ಲ ಅಚ್ಚುಮೆಚ್ಚಾಗಿರುವಾತ. ಈತನ ನೇರ ನಡೆ, ನುಡಿ, ನ್ಯಾಯಪರ ನಿಲುವು ಸಹಜವಾಗಿಯೇ ಒಂದಷ್ಟು ವಿರೋಧಿಗಳ ಸಂಖ್ಯೆಗೂ ಕಾರಣವಾಗಿರುತ್ತದೆ. ಹೀಗಿರುವಾಗಲೇ, ರೈತರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸಬೇಕಾದ ಸರಕಾರ ಇದ್ದಕ್ಕಿದ್ದಂತೆ ನೀರಿನ ಮೇಲಿನ ಸುಂಕ ಮತ್ತು ಅಭಿವೃದ್ಧಿ ಕರವನ್ನು ಹೆಚ್ಚಿಸುತ್ತದೆ.

ಇದು ಸಹಜವಾಗಿಯೇ ರೈತರಿಗೆ ಹೊರೆ ಯಾಗುವುದರ, ಜೊತೆ ಆಕ್ರೋಶಕ್ಕೂ ಕಾರಣವಾಗುತ್ತದೆ. ಈ ಆದೇಶವನ್ನು ಹಿಂಪಡೆ ಯು ವಂತೆ ರೈತರು ಮಾಡಿದ ಮನವಿಗಳಿಗೆ ಅಧಿಕಾರಿಗಳು, ಸರಕಾರ ಕಿಮ್ಮತ್ತು ನೀಡದಿದ್ದರಿಂದ, ಕೊನೆಗೆ ಅನಿವಾರ್ಯವಾಗಿ ರೈತರು ಸರಕಾರದ ಆದೇಶದ ವಿರುದ್ಧ ಬೀದಿಗಿಳಿಯುತ್ತಾರೆ. ಈ ಹೋರಾಟದ ನೇತೃತ್ವ ವಹಿಸುವ ಯುವ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ಕೊನೆಗೆ ಪೊಲೀಸರ ಗುಂಡಿಗೆ ಬಲಿಯಾಗಿ ಹುತಾತ್ಮನಾಗುತ್ತಾನೆ.

1980ರ ದಶಕದಲ್ಲಿ ನಡೆದ ಈ ಘಟನೆ ನಂತರ ರಾಜ್ಯ ರಾಜಕೀಯದಲ್ಲಿ ಅನೇಕ ಬದಲಾವಣೆಗಳಿಗೂ ಕಾರಣವಾಗಿತ್ತು. ಇದೇ ಕಥೆಯನ್ನು ಇಟ್ಟು ಕೊಂಡು ತೆರೆಗೆ ಬಂದಿರುವ ಚಿತ್ರ “ನರಗುಂದ ಬಂಡಾಯ’. ನೈಜ ಘಟನೆಯನ್ನು ಎಳೆಯಾಗಿ ಇಟ್ಟುಕೊಂಡು, ಅದಕ್ಕೆ ಒಂದಷ್ಟು ಸಿನಿಮ್ಯಾಟಿಕ್‌ ಅಂಶಗಳನ್ನು ಸೇರಿಸಿ “ನರಗುಂದ ಬಂಡಾಯ’ವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕ ನಾಗೇಂದ್ರ ಮಾಗಡಿ. ಆದರೆ ಅದು ಎಷ್ಟು ಪರಿಣಾಮಕಾರಿಯಾಗಿ ತೆರೆಮೇಲೆ ಮೂಡಿ ಬಂದಿದೆ ಅನ್ನೋದೆ ಮುಂದಿರುವ ಪ್ರಶ್ನೆ.

ಯಾವುದೇ ನೈಜ ಘಟನೆಯ ಕಥೆಯಾದರೂ, ತೆರೆಮೇಲೆ ಬರುವಾಗ ಅದರ ಚಿತ್ರಕಥೆ ಮತ್ತು ನಿರೂ ಪಣೆ ತುಂಬ ಮಹತ್ವ ಪಡೆದು ಕೊಳ್ಳು ತ್ತದೆ. ಚಿತ್ರಕಥೆ, ನಿರೂಪಣೆ ವಿಭಿನ್ನ ವಾಗಿ, ಪರಿಣಾಮ ಕಾರಿ ಯಾಗಿ ತೆರೆಮೇಲೆ ಬರದಿದ್ದರೆ, ಮಿಕ್ಕೆಲ್ಲವೂ ನೋಡುಗನಿಗೆ ಗೌಣ ಎನಿಸಲು ಶುರು ವಾಗುತ್ತದೆ. “ನರಗುಂದ ಬಂಡಾಯ’ ಚಿತ್ರದಲ್ಲೂ ಹಾಗೆಯೇ ಆಗಿದೆ. ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಕಥೆಗೆ ಕೊಟ್ಟಷ್ಟು ಗಮನವನ್ನು ಅದರ ಚಿತ್ರಕಥೆ, ನಿರೂಪಣೆ ಕಡೆಗೆ ಕೊಟ್ಟಂತೆ ಕಾಣುತ್ತಿಲ್ಲ.

ಸರಾಗ ವಾಗಿ ಸಾಗುವ ಕಥೆಗೆ ಚಿತ್ರಕಥೆ, ನಿರೂಪಣೆ ಅಲ್ಲಲ್ಲಿ ಹಾದಿ ತಪ್ಪಿಸುವಂತಿವೆ. ಅನಗತ್ಯ ಸನ್ನಿವೇಶಗಳು, ಅಲ್ಲಲ್ಲಿ ಕಿರಿಕಿರಿಯನ್ನು ಉಂಟು ಮಾಡುವ ಹಾಡು ಗಳು ಕಥೆಯ ಗಂಭೀರತೆಯನ್ನು ಕುಗ್ಗಿಸುತ್ತವೆ. ಕಮರ್ಶಿಯಲ್‌ ಕಂಟೆಂಟ್‌ ಇರಬೇಕು ಎಂದು ಮಾಡಿದ ಫೈಟ್ಸ್‌, ಸಾಂಗ್ಸ್‌, ಕಾಮಿಡಿ ಯಾವುದೂ ಚಿತ್ರದ ಕೈ ಹಿಡಿಯುವುದಿಲ್ಲ. ಒಂದು ಅಪರೂಪದ ಕಥಾವಸ್ತುವನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರ ಮುಂದಿ ರುವ ಎಲ್ಲ ಅವಕಾಶವನ್ನು ಚಿತ್ರತಂಡ ಎಲ್ಲೂ ಸಮರ್ಥವಾಗಿ ಬಳಸಿಕೊಂಡಂತಿಲ್ಲ.

ಇನ್ನು ಕಲಾವಿದರ ಅಭಿನಯ ಬಗ್ಗೆ ಹೇಳುವು ದಾದರೆ, ನವನಟ ರಕ್ಷ್ ಮೆಲ್ನೋಟಕ್ಕೆ ಯುವ ರೈತನಂತೆ ಕಂಡರೂ, ತನ್ನ ಹಾವ- ಭಾವ ಅಭಿನ ಯದಲ್ಲಿ ಅದನ್ನು ಪೂರ್ಣವಾಗಿ ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಇನ್ನು ನಾಯಕಿ ಶುಭಾ ಪೂಂಜಾ ಪಾತ್ರ ಕೂಡ ಮನಸ್ಸಿನಲ್ಲಿ ಉಳಿ ಯು ವುದಿಲ್ಲ. ಎಂದಿನಂತೆ ಕಿಂಚಿತ್ತೂ ಬದಲಾವಣೆ ಯಿಲ್ಲದ ಸಾಧು ಕೋಕಿಲ ಹಾಸ್ಯ ಇಲ್ಲೂ ಮುಂದುವರೆದಿ ರುವುದರಿಂದ, ನೋಡುಗರಿಗೆ ನಗು ಬರುವುದು ಕಷ್ಟ.

ಉಳಿದಂತೆ ಅವಿನಾಶ್‌, ನೀನಾಸಂ ಅಶ್ವಥ್‌, ಸಂಗೀತಾ, ರವಿಚೇತನ್‌ ನಿರ್ದೇಶಕರ ಅಣತಿ ಯಂತೆ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಚಿತ್ರದ ಛಾಯಾಗ್ರಹಣ, ಸಂಕಲನ, ಹಾಡುಗಳು, ಹಿನ್ನೆಲೆ ಸಂಗೀತ ಹೀಗೆ ತೆರೆ ಹಿಂದಿನ ತಾಂತ್ರಿಕ ಕಾರ್ಯಗಳಿಗೆ ನಿರ್ದೇಶಕರು, ನಿರ್ಮಾಪಕರು ಹೆಚ್ಚಿನ ಗಮನ ಕೊಡಬಹುದಿತ್ತು. ಸಿ.ಜಿ ವರ್ಕ್‌, ಕಲರಿಂಗ್‌, ಲೈಟಿಂಗ್ಸ್‌ ಮೊದಲಾದ ಕೆಲಸಗಳಲ್ಲಿ ಗುಣಮಟ್ಟದ ಕೊರತೆ ಕಾಣುತ್ತದೆ.

ಚಿತ್ರ: ನರಗುಂದ ಬಂಡಾಯ
ನಿರ್ಮಾಣ: ಶೇಖರ್‌ ಯಲುವಿಗಿ, ಸಿದ್ದೇಶ್‌ ವಿರಕ್ತಮಠ
ನಿರ್ದೇಶನ: ನಾಗೇಂದ್ರ ಮಾಗಡಿ
ತಾರಾಗಣ: ರಕ್ಷ್, ಶುಭಾ ಪೂಂಜಾ, ಅವಿನಾಶ್‌, ನೀನಾಸಂ ಅಶ್ವತ್‌, ರವಿ ಚೇತನ್‌, ಸಾಧುಕೋಕಿಲ, ಚಿತ್ಕಲಾ ಬಿರಾದಾರ್‌, ಸಂಗೀತಾ, ಭವ್ಯಾ ಮತ್ತಿತರರು.

* ಜಿ.ಎಸ್‌ ಕಾರ್ತಿಕ ಸುಧನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸಚಿವ ಸುರೇಶ್ ಕುಮಾರ್

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸಚಿವ ಸುರೇಶ್ ಕುಮಾರ್

ದ.ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಹೆಚ್ಚಿದ ಒತ್ತಡ: ಸಿಎಂ ಸಭೆಯಲ್ಲಿ ನಳಿನ್ ಒತ್ತಾಯ

ದ.ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಹೆಚ್ಚಿದ ಒತ್ತಡ: ಸಿಎಂ ಸಭೆಯಲ್ಲಿ ನಳೀನ್ ಒತ್ತಾಯ

ಕೃಷಿ ಸಚಿವ ಬಿ.ಸಿ. ಪಾಟೀಲ್ ಹೋಮ್ ಕ್ವಾರೆಂಟೆನ್!

ಹೋಮ್ ಕ್ವಾರೆಂಟೆನ್ ಗೆ ಒಳಗಾದ ಕೃಷಿ ಸಚಿವ ಬಿ.ಸಿ. ಪಾಟೀಲ್ !

ಭಾರತೀಯ ವಿದ್ಯಾರ್ಥಿಗಳಿಗೆ ಆತಂಕ ತಂದ ದೇಶ ಬಿಡಿ ಆದೇಶ

ಭಾರತೀಯ ವಿದ್ಯಾರ್ಥಿಗಳಿಗೆ ಆತಂಕ ತಂದ ದೇಶ ಬಿಡಿ ಆದೇಶ

ಮನುಷ್ಯನ ಆಯುಷ್ಯ ವೃದ್ಧಿಗೆ ನಡೆದಿದೆ ಔಷಧ ಸಂಶೋಧನೆ?

ಮನುಷ್ಯನ ಆಯುಷ್ಯ ವೃದ್ಧಿಗೆ ನಡೆದಿದೆ ಔಷಧ ಸಂಶೋಧನೆ?

ಹೀಗೆ ಮಾಡಿದರೆ ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣ ಸಾಧ್ಯ: ಸರ್ಕಾರಕ್ಕೆ ಎಚ್ ಡಿಕೆ ಸಲಹೆ

ಹೀಗೆ ಮಾಡಿದರೆ ಕರ್ನಾಟಕದಲ್ಲಿ ಕೋವಿಡ್ ನಿಯಂತ್ರಣ ಸಾಧ್ಯ: ಸರ್ಕಾರಕ್ಕೆ ಎಚ್ ಡಿಕೆ ಸಲಹೆ

20 ದಿನ ನಿಯೋವೈಸ್‌ ಧೂಮಕೇತುವಿನ ದರ್ಶನ : ಖಗೋಳಾಸಕ್ತರಿಗೆ ನಾಳೆಯಿಂದ ಹಬ್ಬ

20 ದಿನ ನಿಯೋವೈಸ್‌ ಧೂಮಕೇತುವಿನ ದರ್ಶನ : ಖಗೋಳಾಸಕ್ತರಿಗೆ ನಾಳೆಯಿಂದ ಹಬ್ಬ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-Adi-7-Angula

ರಿವೇಂಜ್‌ ಸ್ಟೋರಿಯಲ್ಲಿ ಟ್ವಿಸ್ಟ್‌ಗಳದ್ದೇ ಕಾರುಬಾರು!

shivarjuna

ಕಮರ್ಶಿಯಲ್‌ ಪ್ಯಾಕೇಜ್‌ನಲ್ಲಿ ಶಿವ ನರ್ತನ!

cinema-tdy-3

ತರರ್ಲೆ ಹುಡುಗನ ಮದ್ವೆ ಫ‌ಜೀತಿ

drona

“ದ್ರೋಣ’ನ ಹೊಡೆದಾಟ ಜೊತೆಗೆ ನೀತಿಪಾಠ

Ondu-Shikariya-Kathe

ಹೃದಯ ಶಿಕಾರಿ ಮಾಡುವ ಒಂದು ಕಥೆ

MUST WATCH

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk


ಹೊಸ ಸೇರ್ಪಡೆ

ಜಿಲ್ಲೆಯಲ್ಲಿ 250ಕ್ಕೇರಿದ ಸೋಂಕಿತರು

ಜಿಲ್ಲೆಯಲ್ಲಿ 250ಕ್ಕೇರಿದ ಸೋಂಕಿತರು

ಬಸ್‌ ಕಂಡಕ್ಟರ್‌ಗೆ ಕೋವಿಡ್: ಅಧಿಕಾರಿಗಳ ಸಭೆ

ಬಸ್‌ ಕಂಡಕ್ಟರ್‌ಗೆ ಕೋವಿಡ್: ಅಧಿಕಾರಿಗಳ ಸಭೆ

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸಚಿವ ಸುರೇಶ್ ಕುಮಾರ್

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಸಚಿವ ಸುರೇಶ್ ಕುಮಾರ್

13 ಮಂದಿಗೆ ಸೋಂಕು ದೃಢ

13 ಮಂದಿಗೆ ಸೋಂಕು ದೃಢ

ದ.ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಹೆಚ್ಚಿದ ಒತ್ತಡ: ಸಿಎಂ ಸಭೆಯಲ್ಲಿ ನಳಿನ್ ಒತ್ತಾಯ

ದ.ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಹೆಚ್ಚಿದ ಒತ್ತಡ: ಸಿಎಂ ಸಭೆಯಲ್ಲಿ ನಳೀನ್ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.