ಬದುಕಿನ ಸಾರದಲ್ಲಿ ಪ್ರೀತಿಯ ಪಾಕ 


Team Udayavani, Jan 12, 2019, 6:14 AM IST

lambodhara.jpg

“ಲಂಬೋದರ ಪೋಲಿ ಆಗಿರಬಹುದು. ಆದರೆ, ಕೆಟ್ಟವನಲ್ಲ…’ ಈ ಡೈಲಾಗ್‌ ಬರುವ ಹೊತ್ತಿಗೆ, ಆ “ಲಂಬೋದರ’ ಸಿಕ್ಕ ಸಿಕ್ಕ ಹುಡುಗಿಯ ಹಿಂದೆ ಅಲೆದಾಡಿ, ಕುಣಿದಾಡಿ, ಒದ್ದಾಡಿ ಕೊನೆಗೆ ಬದುಕಿನ ಮೌಲ್ಯ ಅರಿತು, ಮನೆಯವರೊಂದಿಗೆ ಬೆರೆತು, ಪ್ರೀತಿಗೆ ಕಲೆತು ನೆಮ್ಮದಿ ಜೀವನದತ್ತ ದಾಪುಗಾಲಿಡುತ್ತಾನೆ. ಶೀರ್ಷಿಕೆ ನೋಡಿದವರಿಗೆ ಇದೊಂದು ಹಾಸ್ಯ ಪ್ರಧಾನ ಚಿತ್ರವೇ ಇರಬೇಕು ಅಂದುಕೊಂಡರೆ ಆ ಊಹೆ ಸುಳ್ಳಾಗಲ್ಲ.

ಒಂದು ಮನರಂಜನಾತ್ಮಕ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅವೆಲ್ಲವೂ “ಲಂಬೋದರ’ನಲ್ಲಿದೆ. ಒಂದೇ ಮಾತಲ್ಲಿ ಹೇಳುವುದಾದರೆ, ಯುವಕರನ್ನೇ ಕೇಂದ್ರೀಕರಿಸಿ ಮಾಡಿರುವ ಚಿತ್ರವಿದು. ಹಾಗಂತ, ಪೋಲಿತನವೇ ಇಲ್ಲಿಲ್ಲ. ತುಂಟತನದ ಜೊತೆಗೆ ಬದುಕಿನ ಸಾರ, ಪ್ರೀತಿಯ ಪಾಕ ಎಲ್ಲವೂ ತುಂಬಿಕೊಂಡಿದೆ. ಒಂದು ಸರಳ ಕಥೆಗೆ ಇಲ್ಲಿ ಚಿತ್ರಕಥೆಯೇ ಮೂಲಾಧಾರ. ಇಲ್ಲಿ ಚುರುಕಾಗಿರುವ ಚಿತ್ರಕಥೆ ಸುಮ್ಮನೆ ನೋಡಿಸಿಕೊಂಡು ಹೋಗುತ್ತದೆ.

ಕೆಲವೆಡೆ ಅನಗತ್ಯ ದೃಶ್ಯಗಳು ತೂರಿಬಂದರೂ, ಕೆಲವು ಕಚಗುಳಿ ಇಡುವಂತಹ ಸಂಭಾಷಣೆಗಳು ಆ ಅನಗತ್ಯ ದೃಶ್ಯಗಳನ್ನು ಮರೆಸುತ್ತವೆ. ಯುವಕರನ್ನೇ ಮನಸ್ಸಲ್ಲಿಟ್ಟುಕೊಂಡು ಹೆಣೆದ ಕಥೆ ಇಲ್ಲಿರುವುದರಿಂದ ಒಂದಷ್ಟು ಡಬ್ಬಲ್‌ ಮೀನಿಂಗ್‌ ಮಾತುಗಳಿಗೂ ಜಾಗ ಕಲ್ಪಿಸಲಾಗಿದೆ. ಆಗಾಗ ಕೇಳಿಬರುವ ಅಂತಹ ಒಂದಷ್ಟು ಮಾತುಗಳು ಆ ಕ್ಷಣಕ್ಕೆ ತುಸು ಜಾಸ್ತಿಯಾಯ್ತು ಎನಿಸುವುದು ಬಿಟ್ಟರೆ, ಸುಮ್ಮನೆ ನೋಡಿಸಿಕೊಂಡು ಹೋಗುವ ತಾಕತ್ತು ಚಿತ್ರಕ್ಕಿದೆ.

ವಿನಾಕಾರಣ ಇಲ್ಲಿ ಹಾಡುಗಳನ್ನು ತೂರಿಸಿಲ್ಲ. ಅನಾವಶ್ಯಕ ಫೈಟುಗಳೂ ಇಲ್ಲ. ಎಲ್ಲವೂ ಚಿತ್ರಕಥೆಗೆ ಪೂರಕವಾಗಿವೆ ಎಂಬುದು ಸಮಾಧಾನ. ಲಂಬೋದರನ ಲೈಫ‌ಲ್ಲಿ ಒಬ್ಬ ಹುಡುಗಿಯೂ ಸಿಕ್ಕಿಲ್ಲ. ಯಾವ ಹುಡುಗಿ ಕಣ್ಣಿಗೆ ಬಿದ್ದರೂ ಆಕೆಯ ಹಿಂದೆ ಅಲೆದಾಡುವ ವ್ಯಕ್ತಿತ್ವ ಅವನದು. ಅತ್ತ ಪೋಲಿ ಅಂದುಕೊಂಡರೆ ಪೋಲಿ ಅಲ್ಲ, ಇತ್ತ ಒಳ್ಳೆಯ ಹುಡುಗನೆಂದರೆ ಅದೂ ಅಲ್ಲ.

ತನ್ನಿಬ್ಬರ ಗೆಳೆಯರ ಜೊತೆ ಹಾದಿ ಬೀದಿ ಸುತ್ತಿಕೊಂಡು, ಹುಡುಗಿಯನ್ನು ಪಟಾಯಿಸಿಕೊಳ್ಳಬೇಕೆಂಬ ಹಂಬಲದಲ್ಲೇ ಸಾಗುವ ಅವನ ಪರಿಪಾಟಿಲು ಚಿತ್ರದ ಹೈಲೈಟು. ಇಲ್ಲಿ ಯೋಗಿ ಅವರಿಗೆ ಪಕ್ಕಾ ಹೇಳಿಮಾಡಿಸಿದಂತಹ ಪಾತ್ರವಿದೆ. ಹಿಂದೆ ಕಾಣಿಸಿಕೊಂಡಿರುವ ಯೋಗಿಗೂ, ಇಲ್ಲಿ ಕಾಣಿಸಿಕೊಂಡಿರುವ ಯೋಗಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಲಾಂಗು, ಮಚ್ಚು ಹಿಡಿದು ಬಡಿದಾಡುವ ಯೋಗಿಯನ್ನು ನೋಡಿದವರಿಗೆ, ಯೋಗಿ ಇಷ್ಟೊಂದು ನಗಿಸುತ್ತಾರಾ, ಅಷ್ಟೊಂದು ಭಾವುಕತೆಯನ್ನೂ ಹೆಚ್ಚಿಸುತ್ತಾರ ಎಂಬುದನ್ನು ಇಲ್ಲಿ ಕಾಣಬಹುದು. 

ಇನ್ನು, ಲಂಬೋದರನ ಹುಡುಗಾಟಿಕೆಯನ್ನು ಅಷ್ಟೇ ಮಜವಾಗಿ ನಿರೂಪಿಸಿರುವ ನಿರ್ದೇಶಕರ ಕೆಲಸ ಆಗಾಗ ಖುಷಿ ಕೊಡುತ್ತದೆ. ಜೊತೆಗೆ ಅಲ್ಲಲ್ಲಿ ನಗುವನ್ನೂ ತರಿಸುತ್ತದೆ. ಈಗಿನ ಕಾಲದ ಹುಡುಗರ ಅಭಿರುಚಿ ಹೇಗೆಲ್ಲಾ ಇರುತ್ತೆ ಎಂಬ ವಾಸ್ತವ ಚಿತ್ರಣದೊಂದಿಗೆ ಮೊದಲರ್ಧ ಮುಗಿದರೆ, ಶಾಲೆ ದಿನಗಳ ನೆನಪಿಗೆ ಜಾರುವ ಲಂಬೋದರನ ಪ್ರಾಯದ ಕ್ಷಣಗಳ ಆಟಾಟೋಪಗಳ ಜೊತೆ ಒಂದಷ್ಟು ಭಾವನಾತ್ಮಕ ಸನ್ನಿವೇಶಗಳೊಂದಿಗೆ ಅರ್ಥಪೂರ್ಣ ಸಂದೇಶದೊಂದಿಗೆ ದ್ವಿತಿಯಾರ್ಧ ಪೂರ್ಣಗೊಳ್ಳುತ್ತದೆ.

ಇಲ್ಲಿ ಕಥೆಯಲ್ಲಿ ಗಟ್ಟಿತನವಿದೆಯೋ ಇಲ್ಲವೋ ಅದನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಮನರಂಜನೆಗೆ ಕೊರತೆಯಿಲ್ಲ. ನೋಡುಗರು ಎಲ್ಲೋ ಒಂದು ಕಡೆ ಸೀಟಿಗೆ ಒರಗಿಕೊಳ್ಳುವ ಹೊತ್ತಿಗೇ ಚಂದದ ಹಾಡುಗಳು ಕಾಣಿಸಿಕೊಂಡು ಮತ್ತಷ್ಟು ಉತ್ಸಾಹ ತುಂಬುವ ಮೂಲಕ “ಲಂಬೋದರ’ ತನ್ನ ಮೈಲೇಜ್‌ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿವೆ. ಎಲ್ಲಾ ವಯಸ್ಸಿನ ಹುಡುಗರಿಗೂ ಆಗುವಂತಹ ಬದಲಾವಣೆಗಳು ಲಂಬೋದರನಲ್ಲೂ ಆಗುತ್ತವೆ.

ಆದರೆ, ನೂರೆಂಟು ವಿಘ್ನಗಳು ಎದುರಾಗುವ ಮೂಲಕ ಇಡೀ ಚಿತ್ರದುದ್ದಕ್ಕೂ ಲಂಬೋದರ ಪಡುವ ಪರಿಪಾಟಿಲು ನಗೆಗಡಲಲ್ಲಿ ತೇಲಿಸುತ್ತದೆ, ಹುಡುಗಿಯನ್ನು ಮುಟ್ಟಬೇಕು, ಅಪ್ಪಿಕೊಳ್ಳಬೇಕು ಎಂಬ ಮನಸ್ಥಿತಿ ಇರುವ ಲಂಬೋದರನಿಗೆ ಹುಡುಗಿಯ ಸ್ಪರ್ಶವಾಗುತ್ತಾ, ಪ್ರೀತಿ ಸಿಗುತ್ತಾ, ಆ ಪ್ರೀತಿ ಮಧ್ಯೆ ಕಳೆದುಕೊಂಡ ಅಮ್ಮನ ಮಮತೆ, ಅಪ್ಪನ ವಾತ್ಸಲ್ಯ, ಗೆಳೆಯರ ಪ್ರೀತಿ ಮತ್ತೆ ಸಿಗುತ್ತಾ ಅನ್ನೋದೇ ಕಥೆ.

ಬದುಕನ್ನು ಸೋಮಾರಿಯಾಗಿಸಿಕೊಂಡ ಲಂಬೋದರ ಬದುಕನ್ನೆ ಹೇಗೆ ಪ್ರೀತಿಸ್ತಾನೆ ಎಂಬುದೇ ಕಥೆ. ಕುತೂಹಲವಿದ್ದರೆ, ಲಂಬೋದರನ ಮನರಂಜನೆ ಪಡೆದು ಬರಬಹುದು. ಯೋಗಿ ಇಲ್ಲಿ ಸಂಪೂರ್ಣ ಬದಲಾಗಿದ್ದಾರೆ. ಅವರ ಪಾತ್ರ ಎಂದಿಗಿಂತಲೂ ಹೊಸದಾಗಿದೆ. ಅದನ್ನು ಅಷ್ಟೇ ಚೆನ್ನಾಗಿ ತೂಗಿಸಿಕೊಂಡು ಹೋಗಿದ್ದಾರೆ. ಈ ಪಾತ್ರ ಮೂಲಕ ಮತ್ತಷ್ಟು ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಇನ್ನು, ಫೈಟ್‌ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಆಕಾಂಕ್ಷ ಗ್ಲಾಮರ್‌ಗಷ್ಟೇ ಸೀಮಿತ. ಅಚ್ಯುತಕುಮಾರ, ಅರುಣಬಾಲರಾಜ್‌ ಅಪ್ಪ, ಅಮ್ಮನಾಗಿ ಇಷ್ಟವಾಗುತ್ತಾರೆ. ಧರ್ಮಣ್ಣ, ಸಿದ್ದು ಇತರೆ ಪಾತ್ರಗಳು ಇರುವಷ್ಟು ಕಾಲ ಗಮನಸೆಳೆಯುತ್ತವೆ. ಕಾರ್ತಿಕ್‌ ಶರ್ಮ ಸಂಗೀತದ ಎರಡು ಹಾಡುಗಳು ಗುನುಗುವಂತಿವೆ. ಮಿಥುನ್‌ ಮುಕುಂದನ್‌ ಹಿನ್ನೆಲೆ ಸಂಗೀತ ಚಿತ್ರದ ವೇಗ ಹೆಚ್ಚಿಸಿದೆ. ಅರವಿಂದ್‌ ಕಶ್ಯಪ್‌ ಅವರ ಛಾಯಾಗ್ರಹಣ ಚಿತ್ರಕ್ಕೆ ಪೂರಕ.

ಚಿತ್ರ: ಲಂಬೋದರ 
ನಿರ್ಮಾಣ: ವಿಶ್ವೇಶ್ವರ.ಪಿ., ರಾಘವೇಂದ್ರ ಭಟ್‌
ನಿರ್ದೇಶನ: ಕೆ.ಕೃಷ್ಣರಾಜ್‌
ತಾರಾಗಣ: ಯೋಗಿ, ಆಕಾಂಕ್ಷ, ಅಚ್ಯುತಕುಮಾರ್‌, ಅರುಣ ಬಾಲರಾಜ್‌, ಧರ್ಮಣ್ಣ, ಸಿದ್ದು ಮೂಲಿಮನಿ ಇತರರು.

* ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.