Udayavni Special

ನಿರ್ಭಾವುಕ ಜಗತ್ತಿನಲ್ಲಿ ಭಾವುಕ ಪಯಣ


Team Udayavani, Feb 8, 2020, 12:41 PM IST

cinema-tdy-3

18 ಗಂಟೆ ನಿದ್ದೆ 6 ಗಂಟೆ ಎಚ್ಚರ. ಹಾಗಂತ ಆತ ಸೋಮಾರಿಯಲ್ಲ. ಬೇಡವೆಂದರೂ ಕಾಯಿಲೆಯೊಂದು ಆತನನ್ನು ಬಿಟ್ಟುಬಿಡದಂತೆ ಕಾಡುತ್ತಿದೆ. ಎಚ್ಚರವಿರುವ ಹೊತ್ತಲ್ಲಿ ಆತ ಗುಡ್‌ಬಾಯ್‌. ಅಪ್ಪಟ ಪ್ರೇಮಿ, ಪಕ್ಕಾ ಫ್ಯಾಮಿಲಿ ಮ್ಯಾನ್‌ ಜೊತೆಗೆ ಮುದ್ದಿನ ಚಿಕ್ಕಪ್ಪ. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿರುತ್ತದೆ. ಆದರೆ, ಅಂದುಕೊಂಡಂತೆ ಎಲ್ಲವೂ ನಡೆಯಬೇಕಲ್ಲ. ಆ ಒಂದು ಘಟನೆ ಆತನನ್ನು ಇನ್ನಿಲ್ಲದಂತೆ ಕಾಡುತ್ತದೆ. ಆತನೊಳಗಿನ ಕುಂಭಕರ್ಣ ಎದ್ದು ನಿಲ್ಲುತ್ತಾನೆ.

ನೀವು “ಜಂಟಲ್‌ಮೆನ್‌’ ಸಿನಿಮಾ ನೋಡಿದರೆ ಅಲ್ಲಿ ನಿಮಗೆ ಪ್ರೀತಿ, ಪ್ರೇಮ ಜೊತೆಗೆ ಭಾವುಕ ಜಗತ್ತೂಂದು ತೆರೆದುಕೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಬರುವ ಸಿನಿಮಾಗಳಲ್ಲಿ ಕಥೆಯಿಲ್ಲ, ಕಥೆ ಇದ್ದರೂ ಅದು ಕಾಡುವುದಿಲ್ಲ ಎಂಬ ಮಾತಿದೆ. ಆದರೆ, “ಜಂಟಲ್‌ ಮೆನ್‌’ ಒಂದು ಗಟ್ಟಿ ಕಥೆ ಇರುವ ಹಾಗೂ ಅಷ್ಟೇ ಕಾಡುವ ಸಿನಿಮಾ. ಸಿನಿಮಾ ನೋಡ ನೋಡುತ್ತಲೇ ನಿಮ್ಮ ಕಣ್ಣಂಚು ಒದ್ದೆಯಾಗಿರುತ್ತದೆ ಎಂದರೆ ಅದಕ್ಕೆ ಕಾರಣ ಸಿನಿಮಾದ ಕಥೆ ಹಾಗೂ ಸಾಗುವ ರೀತಿ. ನಿರ್ದೇಶಕ ಜಡೇಶ್‌ ಒಂದು ಹೊಸ ಬಗೆಯ ಕಥೆಯನ್ನು ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದಾರೆ. ಮುಖ್ಯವಾಗಿ ಚಿತ್ರದ ನಿರೂಪಣೆ ಕುತೂಹಲದ ಜೊತೆ ಜೊತೆಗೆ ಪ್ರೇಕ್ಷಕರಲ್ಲಿ ಸಣ್ಣದೊಂದು ಚಡಪಡಿಕೆ ಉಂಟಾಗುವಂತೆ ಮಾಡುತ್ತದೆ.

ಅದಕ್ಕೆ ಕಾರಣ ಕಥೆಯ ಜೊತೆಗೆ ಪ್ರೇಕ್ಷಕ ಬೇಗನೇ ಕನೆಕ್ಟ್ ಆಗುತ್ತಾನೆ. ಎಲ್ಲೋ ನಮ್ಮ ಅಕ್ಕಪಕ್ಕದಲ್ಲಿ ಹೀಗಾದರೆ ಹೇಗೆ ಫಿಲ್‌ ಆಗುತ್ತದೋ ಆ ತರಹದ ಒಂದು ಭಾವ ಮೂಡುತ್ತದೆ. ನಿರ್ದೇಶಕ ಜಡೇಶ್‌ ಒಂದು ಕಥೆಯಲ್ಲಿ ಹಲವು ಅಂಶಗಳನ್ನು ಹೇಳುತ್ತಾ ಹೋಗಿದ್ದಾರೆ. ನಿದ್ರಾ ಕಾಯಿಲೆಯಿಂದ ಬಳಲುವ ನಾಯಕನ ಸಮಸ್ಯೆ ಒಂದೆಡೆಯಾದರೆ, ಹೆಣ್ಣುಮಕ್ಕಳ ಕಿಡ್ನಾಪ್‌ ಹಾಗೂ ಅದರ ಹಿಂದಿನ ಮಾಫಿಯಾವನ್ನು ಹೇಳುತ್ತಾ ಹೋಗಿದ್ದಾರೆ. ಮುಖ್ಯವಾಗಿ ಪ್ರೇಕ್ಷಕರ ಊಹಿಸಿಕೊಂಡಂತೆ ಇಲ್ಲಿ ಯಾವುದೂ ನಡೆಯೋದಿಲ್ಲ. ಆತನ ಊಹೆ ಕ್ಲೈಮ್ಯಾಕ್ಸ್‌ನಲ್ಲಿ ಬುಡಮೇಲಾಗುತ್ತದೆ. ಅಂತಹ ಟ್ವಿಸ್ಟ್‌ವೊಂದನ್ನು ನಿರ್ದೇಶಕರು ಇಟ್ಟಿದ್ದಾರೆ. ಅದೇನೆಂಬುದನ್ನು ನೀವು ಸಿನಿಮಾದಲ್ಲೇ ನೋಡಿ.

ಚಿತ್ರದ ಮೊದಲರ್ಧ ಪ್ರೀತಿ, ಪ್ರೇಮ, ಹೊಡೆದಾಟ ಬಡಿದಾಟದಲ್ಲಿ ಸಾಗಿದರೆ, ದ್ವಿತೀಯಾರ್ಧ ಸಿನಿಮಾದ ನಿಜವಾದ ಜೀವಾಳ. ಕಥೆಯ ಪ್ರಮುಖ ಅಂಶ ತೆರೆದುಕೊಳ್ಳುತ್ತದೆ. ನಿರ್ದೇಶಕರು ಇಲ್ಲಿ ಕಥೆಗೆ ಪೂರಕವಾದ ಪರಿಸರ ಹುಡುಕಿರೋದು ಸಿನಿಮಾದ ಮತ್ತೂಂದು ಪ್ಲಸ್‌. ಈ ಚಿತ್ರದ ನಿರ್ಮಾಪಕ ಗುರುದೇಶಪಾಂಡೆ ಅವರ ಸಿನಿಮಾ ಪ್ರೀತಿ ತೆರೆಮೇಲೆ ಕಾಣುತ್ತದೆ.

ನಾಯಕ ಪ್ರಜ್ವಲ್‌ ದೇವರಾಜ್‌ ಇದುವರೆಗೆ ಮಾಡದಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಬ್ಬ ಪ್ರೇಮಿಯಾಗಿ, ಫ್ಯಾಮಿಲಿ ಮ್ಯಾನ್‌ ಆಗಿ ಅವರು ಇಷ್ಟವಾಗುತ್ತಾರೆ. ಅವರ ಚಡಪಡಿಕೆ, ಕೋಪ, ಸಿಟ್ಟು ಎಲ್ಲವೂ ಆ ಪಾತ್ರದ ತೂಕವನ್ನು ಹೆಚ್ಚಿಸಿದೆ. ನಾಯಕಿ ನಿಶ್ವಿ‌ಕಾ ನಾಯ್ಡು ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸಂಚಾರಿ ವಿಜಯ್‌ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ ಮತ್ತು ಈ ಸಿನಿಮಾದ ಅಚ್ಚರಿ ಕೂಡಾ. ಅಜನೀಶ್‌ ಲೋಕನಾಥ್‌ ಸಂಗೀತದ ಹಾಡುಗಳು ಸನ್ನಿವೇಶಕ್ಕೆ ತಕ್ಕಂತಿವೆ.

 

-ರವಿ ರೈ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಇನ್ನಿಲ್ಲ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಕೃಷಿ ಚಟುವಟಿಕೆಗಳಿಗೆ ಯಾವುದೇ ವ್ಯತ್ಯಾಸವಾಗಬಾರದು: ಸಚಿವ ಬಿ.ಸಿ ಪಾಟೀಲ್ ಸೂಚನೆ

ಮುಂಬೈ ಇಡೀ ಆಸ್ಪತ್ರೆ ಲಾಕ್ ಡೌನ್: 26 ನರ್ಸ್, ಮೂವರು ವೈದ್ಯರಿಗೆ ಕೋವಿಡ್ 19 ವೈರಸ್ ದೃಢ

ಮುಂಬೈ ಇಡೀ ಆಸ್ಪತ್ರೆ ಲಾಕ್ ಡೌನ್: 26 ನರ್ಸ್, ಮೂವರು ವೈದ್ಯರಿಗೆ ಕೋವಿಡ್ 19 ವೈರಸ್ ದೃಢ

ಭಾರತದಿಂದ ಬ್ರಿಟನ್‌ ಪ್ರಜೆಗಳನ್ನು ಕರೆತರಲು ಏಳು ವಿಶೇಷ ವಿಮಾನ

ಭಾರತದಿಂದ ಬ್ರಿಟನ್‌ ಪ್ರಜೆಗಳನ್ನು ಕರೆತರಲು ಏಳು ವಿಶೇಷ ವಿಮಾನ

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಕೋವಿಡ್ ಭೀತಿ ನಡುವೆ ಮಂಗನ ಖಾಯಿಲೆಗೆ ಶಿವಮೊಗ್ಗದಲ್ಲಿ ಮತ್ತೊಂದು ಬಲಿ

ಕೋವಿಡ್ 19 ಮಹಾಮಾರಿ ವಿರುದ್ಧ ದೀರ್ಘಕಾಲ ಹೋರಾಡಬೇಕಾಗಿದೆ: ಪ್ರಧಾನಿ ಮೋದಿ

ಕೋವಿಡ್ 19 ಮಹಾಮಾರಿ ವಿರುದ್ಧ ದೀರ್ಘಕಾಲ ಹೋರಾಡಬೇಕಾಗಿದೆ: ಪ್ರಧಾನಿ ಮೋದಿ

ಕೊರೊನಾ ಹರಡಲು 5 ಜಿ ಕಾರಣ ?

ಕೊರೊನಾ ಹರಡಲು 5 ಜಿ ಕಾರಣ ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-Adi-7-Angula

ರಿವೇಂಜ್‌ ಸ್ಟೋರಿಯಲ್ಲಿ ಟ್ವಿಸ್ಟ್‌ಗಳದ್ದೇ ಕಾರುಬಾರು!

Naragunda-Bhandaya

ಬಿಸಿ ತಾಗದ ಬಂಡಾಯ

shivarjuna

ಕಮರ್ಶಿಯಲ್‌ ಪ್ಯಾಕೇಜ್‌ನಲ್ಲಿ ಶಿವ ನರ್ತನ!

cinema-tdy-3

ತರರ್ಲೆ ಹುಡುಗನ ಮದ್ವೆ ಫ‌ಜೀತಿ

drona

“ದ್ರೋಣ’ನ ಹೊಡೆದಾಟ ಜೊತೆಗೆ ನೀತಿಪಾಠ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

isiri-tdy-7

ಸ್ಯಾನಿಟೈಸರ್ ಸೂರ್ಯಕಿರಣಗಳು

ಮೈಸೂರು ಜಿಲ್ಲೆಯ ಮೊದಲ ಸೋಂಕಿತ ಗುಣಮುಖನಾಗಿ ಬಿಡುಗಡೆ

ಮೈಸೂರು ಜಿಲ್ಲೆಯ ಮೊದಲ ಸೋಂಕಿತ ಗುಣಮುಖನಾಗಿ ಬಿಡುಗಡೆ

ಇಎಂಐ ಕಟ್ಟಿಲ್ವಾ ?

ಇಎಂಐ ಕಟ್ಟಿಲ್ವಾ ?

ಮನೆಯೇ ಚಿತ್ರಾಲಯ

ಮನೆಯೇ ಚಿತ್ರಾಲಯ

isiri-tdy-4

ಬಂತು ನೋಡಿ ವಾಟ್ಸ್ ಆ್ಯಪ್ ಬ್ಯಾಂಕಿಂಗ್‌