ಬಿಂಕ-ಭಿನ್ನಾಣದ ಕಲರ್‌ಫ‌ುಲ್‌ ಯಾನ

ಚಿತ್ರ ವಿಮರ್ಶೆ

Team Udayavani, Jul 13, 2019, 3:01 AM IST

ಸಾಮಾನ್ಯವಾಗಿ ಹುಡುಗರು ಲವ್‌ ಫೇಲ್ಯೂರ್‌ ಆದ್ರೆ, ಫ್ಯಾಮಿಲಿ ಪ್ರಾಬ್ಲಂ ಅಥವಾ ಇನ್ನೇನಾದ್ರೂ ಬೇಸರವಾದರೆ ಆದ್ರೆ ಹಳೆಯದನ್ನೆಲ್ಲ ಮರೆಯಲು ಕೈಯಲ್ಲಿ ಬಾಟಲ್‌ ಹಿಡಿಯುವುದು ಅಥವಾ ಲಾಂಗ್‌ ಡ್ರೈವ್‌ ಹೋಗುವುದನ್ನ ಅನೇಕ ಚಿತ್ರಗಳಲ್ಲಿ ನೋಡಿದ್ದೇವೆ. ಒಂದು ವೇಳೆ ಹುಡುಗಿಯರಿಗೂ ಇಂಥದ್ದೇ ಪರಿಸ್ಥಿತಿ ಬಂದರೆ ಅವರೇನು ಮಾಡಬಹುದು? ಹುಡುಗರಂತೆ, ಹುಡುಗಿಯರಿಗೂ ರೀಫ್ರೆಶ್‌ ಆಗಲು ಲೈಫ್ ರೀಸ್ಟಾರ್ಟ್‌ ಮಾಡಲು ಏನೇನು ದಾರಿಗಳಿರುತ್ತವೆ?

ಕೊನೆಯಾಗುತ್ತದೆ ಎಂದುಕೊಂಡ ಹುಡುಗಿಯರ ಜೀವನ ಹೊಸದಾಗಿ ಹೇಗೆಲ್ಲ ಶುರುವಾಗಬಹುದು? ಇವೆಲ್ಲದರ ಚಿತ್ರಣವೇ “ಯಾನ’ ಚಿತ್ರ. ಹೆಸರೇ ಹೇಳುವಂತೆ “ಯಾನ’ ಮಾಯಾ, ನಂದಿನಿ, ಅಂಜಲಿ ಎನ್ನುವ ಮೂವರು ಹುಡುಗಿಯರ ಜೀವನ “ಯಾನ’ದ ಚಿತ್ರ. ಮೂವರು ಬೇರೆ ಬೇರೆ ಹಿನ್ನೆಲೆಯಿಂದ ಬಂದ ಹುಡುಗಿಯರು ತಮಗೆ ಎದುರಾಗುವ ಸವಾಲುಗಳನ್ನು ಹೇಗೆ ಸ್ವೀಕರಿಸಿ, ಹೊಸ ಜೀವನಕ್ಕೆ ತೆರೆದುಕೊಳ್ಳುತ್ತಾರೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ.

ಇಲ್ಲಿ ಇಂದಿನ ಜನರೇಶನ್‌ ಹುಡುಗ-ಹುಡುಗಿಯರ ಮನಸ್ಥಿತಿ, ಪೋಷಕರಾದವರ ಪರಿಸ್ಥಿತಿ, ಕಥೆ-ವ್ಯಥೆ, ನೋವು-ನಲಿವು ಎಲ್ಲವೂ ಇದೆ. ಹಾಗಂತ ಚಿತ್ರದ ಕಥೆಯಲ್ಲಿ ತೀರಾ ಹೊಸದೇನನ್ನೂ ನಿರೀಕ್ಷಿಸುವಂತಿಲ್ಲ. ಸರಳವಾದ ಕಥೆಯನ್ನೇ ಕಲರ್‌ಫ‌ುಲ್‌ ಆಗಿ ಕಟ್ಟಿಕೊಟ್ಟಿರುವುದರಿಂದ ಚಿತ್ರದಲ್ಲಿ ಗ್ಲಾಮರ್‌ಗಂತೂ ಕೊರತೆಯಿಲ್ಲ.

ಕೆಲವೆಡೆ ಸ್ವಲ್ಪ ಜರ್ಕ್‌ ತೆಗೆದುಕೊಂಡು “ಯಾನ’ ನಿಧಾನವೆನಿಸಿದರೂ, ಅದರ ಹಿಂದೆಯೇ ಬರುವ ಸಾಂಗ್ಸ್‌, ಡ್ಯಾನ್ಸ್‌, ಕಾಮಿಡಿ ಹೀಗೆ ಒಂದಷ್ಟು ಮನರಂಜನಾತ್ಮಕ ಅಂಶಗಳು ಪ್ರೇಕ್ಷಕರನ್ನು ಮರಳಿ ಟ್ರ್ಯಾಕ್‌ಗೆ ಕರೆದುಕೊಂಡು ಹೋಗುತ್ತದೆ. ಒಟ್ಟಾರೆ “ಅದೇ ದಾರಿ’ಯಲ್ಲಿ ಎಲ್ಲೂ ಬೋರ್‌ ಆಗದೇ ಪ್ರೇಕ್ಷಕರ “ಯಾನ’ ಸುಖಕರವಾಗಿರುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

ಇನ್ನು ಇಡೀ ಚಿತ್ರದ ಬಹುಭಾಗ ಮೂವರು ಹುಡುಗಿಯರ ಸುತ್ತವೇ ನಡೆಯುವುದರಿಂದ ಚಿತ್ರದ ಮೂವರೂ ನಾಯಕಿಯರು (ವೈಭವಿ,ವೈನಿಧಿ, ವೈಸಿರಿ) ಕೂಡ ಅಭಿನಯ ಮತ್ತು ಅಂದ ಎರಡರಲ್ಲೂ ಗಮನ ಸೆಳೆಯುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದ್ರೆ ಚಿತ್ರದುದ್ದಕ್ಕೂ ಮೂವರು ಸುಂದರ ಸೋದರಿಯರೇ ಹೈಲೈಟ್‌!

ಉಳಿದಂತೆ ಅನಂತನಾಗ್‌, ಸುಹಾಸಿನಿ, ರಂಗಾಯಣ ರಘು ಮೊದಲಾದ ಅನುಭವಿ ಕಲಾವಿದರದ್ದು ಅಚ್ಚುಕಟ್ಟು ಅಭಿನಯ. ಸಾಧುಕೋಕಿಲ, ಚಿಕ್ಕಣ್ಣ, ಸಂಜು ಬಸಯ್ಯ ಮೊದಲಾದ ಪಾತ್ರಗಳನ್ನು ಕಾಮಿಡಿಗಾಗಿಯೇ ಬಲವಂತವಾಗಿ ಸೇರಿಸಿದಂತಿದೆ. ನಾಯಕರ ಪಾತ್ರಗಳು ಹೆಸರಿಗಷ್ಟೇ ಇರುವಂತಿದೆ.

ಇನ್ನು ಚಿತ್ರದ ತಾಂತ್ರಿಕ ಗುಣಮಟ್ಟ ಚೆನ್ನಾಗಿದ್ದು, ಛಾಯಾಗ್ರಹಣ, ಸಂಕಲನ, ಹಿನ್ನೆಲೆ ಸಂಗೀತ ಸಾಕಷ್ಟು ಗಮನ ಸೆಳೆಯುತ್ತದೆ. ಅದ್ಧೂರಿ ಲೊಕೇಶನ್‌ಗಳು, ಕಾಸ್ಟೂéಮ್‌, ಮೂವರು ಬೆಡಗಿಯರ ಬಿಂಕ-ಭಿನ್ನಾಣ ಎಲ್ಲವೂ ತೆರೆಮೇಲೆ “ಯಾನ’ವನ್ನು ಕಲರ್‌ಫ‌ುಲ್‌ ಆಗಿ ಮಾಡಿದೆ. ಒಟ್ಟಿನಲ್ಲಿ ತೀರಾ ನಿರೀಕ್ಷೆಗಳಿಲ್ಲದೆ ವಾರಾಂತ್ಯದಲ್ಲಿ ಒಮ್ಮೆ “ಯಾನ’ದ ಅನುಭವವನ್ನು ಕಣ್ತುಂಬಿಕೊಳ್ಳಲು ಅಡ್ಡಿಯಿಲ್ಲ.

ಚಿತ್ರ: ಯಾನ
ನಿರ್ಮಾಣ: ಹರೀಶ್‌ ಶೇರಿಗಾರ್‌
ನಿರ್ದೇಶನ: ವಿಜಯಲಕ್ಷ್ಮೀ ಸಿಂಗ್‌
ತಾರಾಗಣ: ವೈಭವಿ, ವೈನಿಧಿ, ವೈಸಿರಿ, ಅನಂತನಾಗ್‌, ಸುಹಾಸಿನಿ, ಸುಮುಖ, ಅಭಿಷೇಕ್‌, ರಂಗಾಯಣ ರಘು, ರವಿಶಂಕರ್‌, ಸಾಧುಕೋಕಿಲ, ಚಿಕ್ಕಣ್ಣ ಮತ್ತಿತರರು

* ಜಿ.ಎಸ್‌.ಕಾರ್ತಿಕ ಸುಧನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಅಮ್ಮನ ಊರಿಗೆ ದಾರಿ ಇದೇನಾ, ಹೇಳಿ ನೀವಾದ್ರೂ...?' ಹೀಗೆ ಕೇಳುತ್ತಾ ತನ್ನ ಅಮ್ಮನನ್ನು ಹುಡುಕಿ ಹೊರಟವರ ಕಥೆ ಇದು. ಇಲ್ಲಿ ಕಥೆಯೂ ಇದೆ. ಕಣ್ಣೀರ ವ್ಯಥೆಯೂ ಇದೆ. ಒಂದೇ...

  • ಆ ಹುಡುಗನ ಹೆಸರು ಹರ್ಷ. ಹೆಸರಿನಲ್ಲಿ ಹರ್ಷ ಅಂತಿದ್ದರೂ, ಅವನ ಪಾಲಿಗೆ ನಿಜವಾದ ಹರ್ಷ, ಖುಷಿ ಅನ್ನೋದು ಮರೀಚಿಕೆಯಂತೆ. ಇರೋದಕ್ಕೆ ದೊಡ್ಡ ಮನೆ, ಓದೋದಕ್ಕೆ ಒಳ್ಳೆಯ...

  • ಜಗತ್ತು ಮತ್ತು ಜನಗಳನ್ನು ದೇವರು ರಕ್ಷಿಸಿ, ಪೋಷಿಸುತ್ತಾನೆ ಎನ್ನುವ ನಂಬಿಕೆ ಬಹುತೇಕ (ಆಸ್ತಿಕ)ರದ್ದು. ಅನೇಕರು ಈ ವಿಷಯದಲ್ಲಿ ಅವರವರ ನೆಚ್ಚಿನ ದೇವರ ಮೊರೆ ಹೋಗುವುದನ್ನು...

  • ಬಿಲ್‌ಗೇಟ್ಸ್‌ ಹೆಸರು ಕೇಳಿದ್ದಿರೇನ್ರೋ? - ಆ ಎಂಟನೇ ತರಗತಿಯ ಸ್ಕೂಲ್‌ ಮೇಷ್ಟ್ರು ಆ ಬೈಟು ಬ್ರದರ್ಸ್‌ಗೆ ಈ ಪ್ರಶ್ನೆ ಕೇಳಿದಾಗ, "ಸಾ ನಾವು ಸ್ಕೂಲ್‌ ಗೇಟ್‌ ಬಿಟ್ರೆ,...

  • 18 ಗಂಟೆ ನಿದ್ದೆ 6 ಗಂಟೆ ಎಚ್ಚರ. ಹಾಗಂತ ಆತ ಸೋಮಾರಿಯಲ್ಲ. ಬೇಡವೆಂದರೂ ಕಾಯಿಲೆಯೊಂದು ಆತನನ್ನು ಬಿಟ್ಟುಬಿಡದಂತೆ ಕಾಡುತ್ತಿದೆ. ಎಚ್ಚರವಿರುವ ಹೊತ್ತಲ್ಲಿ ಆತ ಗುಡ್‌ಬಾಯ್‌....

ಹೊಸ ಸೇರ್ಪಡೆ