Udayavni Special

ಹೇಗಿದೆ ಈ ಸಿನಿಮಾ: ‘ಯುವ ಮನಸ್ಸುಗಳಿಗೊಂದು ‘ಪವರ್ ಫುಲ್‌’ ಮೆಸೇಜ್‌


Team Udayavani, Apr 2, 2021, 8:19 AM IST

yuvaratna movie review

ಸಿನಿಮಾದಲ್ಲೊಂದು ಕಥೆ ಇರಬೇಕು, ಆ ಕಥೆಗೊಂದು ಉದ್ದೇಶವಿರಬೇಕು ಮತ್ತು ಆ ಉದ್ದೇಶ ಇವತ್ತಿನ ಸಮಾಜಕ್ಕೆ ಹತ್ತಿರವಿರಬೇಕು… ಹೀಗೆ ಬಯಸುವ ಸಿನಿಮಾ ಪ್ರೇಮಿಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಕೇವಲ ಹೊಡಿ ಬಡಿ, ಹಾಡು, ಡ್ಯಾನ್ಸ್‌ ಅಷ್ಟೇ ಇದ್ದರೆ ಸಾಲದು, ಅದರಾಚೆ ಚಿಂತಿಸುವ ವಿಷಯವಿರಬೇಕು ಎಂದು ಬಯಸುವವರಿಗೆ “ಯುವರತ್ನ ’ ಒಂದು ಒಳ್ಳೆಯ ಆಯ್ಕೆಯಾಗಬಹುದು. ಹಾಗಂತ “ಯುವರತ್ನ’ ದಲ್ಲಿ ಇಡೀ ಸಂದೇಶವೇ ತುಂಬಿಕೊಂಡಿದೆಯೇ ಎಂದರೆ ಖಂಡಿತಾ ಇಲ್ಲ. ಇದು ಕೂಡಾ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಆದರೆ, ಅದನ್ನು ಕಟ್ಟಿಕೊಡುವ ಹಿನ್ನೆಲೆಯಲ್ಲಿ ಸಾಗುವ ಕಥೆ ತುಂಬಾ ಗಂಭೀವಾಗಿದೆ. ಎಜುಕೇಶನ್‌ ಮಾಫಿಯಾ ಜೊತೆಗೆ ಸರ್ಕಾರಿ ಶಾಲಾ-ಕಾಲೇಜುಗಳ ಕುರಿತಾದ ಅಂಶವನ್ನಿಟ್ಟುಕೊಂಡು ಈ ಸಿನಿಮಾವನ್ನು ಕಟ್ಟಿಕೊಡಲಾಗಿದೆ.

ಒಬ್ಬ ಸ್ಟಾರ್‌ ನಟನನ್ನಿಟ್ಟುಕೊಂಡು ತುಂಬಾ ಗಂಭೀರವಾದ ವಿಚಾರ ಹೇಳುವಾಗ ನಿರ್ದೇಶಕ ತುಂಬಾ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ಕಥೆಯ ಜೊತೆಗೆ ಸ್ಟಾರ್‌ ನಟನ ಅಭಿಮಾನಿಗಳನ್ನು ಖುಷಿ ಪಡಿಸುವ ಜವಾಬ್ದಾರಿ ಕೂಡಾ ಆತನಿಗಿರುತ್ತದೆ. ಆ ನಿಟ್ಟಿನಲ್ಲಿ ನಿರ್ದೇಶಕ ಸಂತೋಷ್‌ ಆನಂದರಾಮ್‌ ಒಂದು ಗಂಭೀರ ವಿಚಾರವನ್ನು ಮನಮುಟ್ಟುವಂತೆ ಜೊತೆ ಮಾಸ್‌ ಪ್ರೇಕ್ಷಕರು “ಜೈಕಾರ’ ಹಾಕುವಂತೆಯೂ ಕಟ್ಟಿ ಕೊಟ್ಟಿರೋದು ಅವರ ಹೆಚ್ಚು ಗಾರಿಕೆ. ಚಿತ್ರದಲ್ಲಿ ಸಾಕಷ್ಟು ಸನ್ನಿವೇಶಗಳು, ಘಟನೆಗಳು ಬಂದು ಹೋಗು ತ್ತವೆ. ಆದರೆ, ಅವೆಲ್ಲವನ್ನು ನೀಟಾಗಿ ಜೋಡಿಸುವ ಮೂಲಕ ಚಿತ್ರವನ್ನು ಗೊಂದಲ ಮುಕ್ತವನ್ನಾಗಿಸಿದ್ದಾರೆ. ಮುಖ್ಯವಾಗಿ ಈ ಚಿತ್ರ ಪ್ರೇಕ್ಷ ಕರ ಕುತೂಹಲವನ್ನು ಕ್ಷಣ ಕ್ಷಣಕ್ಕೂ ಹೆಚ್ಚಿಸಿಕೊಂಡು ಹೋಗುತ್ತದೆ. ಪುನೀತ್‌ ಎಂಟ್ರಿಯಿಂದ ಹಿಡಿದು ಅವರ ಮ್ಯಾನರೀಸಂ, ಡೈಲಾಗ್‌ .. ಹೀಗೆ ಪ್ರತಿ ವಿಷಯವೂ ಪ್ರೇಕ್ಷಕರಲ್ಲಿ ಒಂದು ಕುತೂಹಲವನ್ನು ಬಿಟ್ಟೇ ಮುಂದೆ ಸಾಗುತ್ತದೆ.

ಇದನ್ನೂ ಓದಿ:ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಪತ್ನಿಗೆ ಬ್ಲಡ್ ಕ್ಯಾನ್ಸರ್

ಸಿನಿಮಾದ ಹೈಲೈಟ್‌ಗಳಲ್ಲಿ ಸಿನಿಮಾ ನಿರೂಪಣಾ ಶೈಲಿ ಕೂಡಾ ಒಂದು. ಚಿತ್ರದ ಕಥೆ ಗಂಭೀರವಾಗಿದ್ದರೂ ಸಿನಿಮಾ ಮಾತ್ರ ಪದೇ ಪದೇ ಮೂಡ್‌ ಬದಲಿಸುತ್ತಾ ಸಾಗುವ ಮೂಲಕ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ. ಆ್ಯಕ್ಷನ್‌, ಕಾಮಿಡಿ, ಸಾಂಗ್‌, ಫೈಟ್‌, ಫ‌ನ್ನಿ ಡೈಲಾಗ್‌ … ಹೀಗೆ ಅಲ್ಲಲ್ಲಿ ಧುತ್ತನೆ ಬರುವ ಮೂಲಕ ಪ್ರೇಕ್ಷಕನ ಪಾಲಿಗೆ ಇದು “ಸ್ಪೆಷಲ್‌ ಮೀಲ್ಸ್‌’ ಇದ್ದಂತೆ. ಪುನೀತ್‌ ಅಭಿಮಾನಿಗಳಿಗಾಗಿಯೇ ಇಲ್ಲಿ ಒಂದಷ್ಟು ಡೈಲಾಗ್‌ಗಳಿವೆ. “ಓಂ ಸಿನಿಮಾನಾ ನಾವೇ ಪ್ರೊಡ್ನೂಸ್‌ ಮಾಡಿರೋದು, ಧಮ್‌ ಇಲ್ಲಿದೆ ಇಲ್ಲಿ ಬೇಡ, ನನಗೆ ಮತ್ತು ನಮ್ಮಣ್ಣಂಗೆ ವಯಸ್ಸೇ ಆಗಲ್ಲ, ಹೆಗಲ ಮೇಲಿರುವ ಸ್ಟಾರ್‌ ಡ್ನೂಟಿಯಲ್ಲಿರೋ, ಅಭಿಮಾನಿಗಳು ಕೊಟ್ಟಿರೋ ಸ್ಟಾರ್‌ ನಾವು ಇರೋವರೆಗೂ, ದುಡ್ಡು ಕೊಟ್ಟು ವೋಟು ಹಾಕಿಸಿಕೊಂಡಿರೋ ನಿಮಗೆ ಇಷ್ಟ್ ಇರ ಬೇಕಾದರೆ, ಜನರೇ ದುಡ್ಡುಕೊಟ್ಟು ವೋಟ್‌ ಹಾಕಿ ಗೆಲ್ಲಿಸಿರೋ ನಮಗೆ ಎಷ್ಟಿರಬೇಡ, ನನಗೆ ಹೌಸ್‌ ಫ‌ುಲ್‌ ನೋಡಿಯೇ ಅಭ್ಯಾಸ, ಕೋಟ್ಯಾಂತರ ಅಭಿಮಾನಿಗಳು ಆರಾಧಿಸಿರುವ ಬ್ಲಿಡ್‌ ಅದು, ತುಂಬಾ ಪ್ರೇಶಿಯಸ್‌… ಜೋಪಾನ …’ ಹೀಗೆ ಚಿತ್ರದಲ್ಲಿರುವ ಒಂದಷ್ಟು ಡೈಲಾಗ್‌ಗಳು ಮಜ ಕೊಡುತ್ತಾ ಸಾಗುತ್ತವೆ.

ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿರುವವರು ಪುನೀತ್‌ ರಾಜ್‌ಕುಮಾರ್‌. ಪ್ರತಿ ದೃಶ್ಯದಲ್ಲೂ ಅವರ ಖದರ್‌, ಪವರ್‌, ಎನ ರ್ಜಿ ಇಷ್ಟವಾಗುತ್ತದೆ. ಹಾಡು, ಫೈಟ್‌ ಜೊತೆಗೆ ಗಂಭೀರ ದೃಶ್ಯದಲ್ಲಿ ಪುನೀತ್‌ ಮಿಂಚಿದ್ದಾರೆ.

ನಾಯಕಿ ಸಯ್ಯೇಶಾ ತೆರೆ ಮೇಲೆ ಮುದ್ದಾದ ಗೊಂಬೆ. ಉಳಿದಂತೆ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಪ್ರಕಾಶ್‌ ರೈ, ಅವಿನಾಶ್‌, ರಂಗಾಯಣ ರಘು, ಸಾಧು ಕೋಕಿಲ, ರಾಜೇಶ್‌ ನಟರಂಗ, ಧನಂಜಯ್‌, ಸಾಯಿಕುಮಾರ್‌, ದಿಗಂತ್‌, ತಾರಕ್‌, ಸೋನು ಗೌಡ, ರವಿಶಂಕರ್‌, ಅಚ್ಯುತ್‌ … ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳು ಸಿನಿಮಾದ ಜೋಶ್‌ ಹೆಚ್ಚಿಸಿವೆ.

 

ರವಿಪ್ರಕಾಶ್ ‌ರೈ

ಟಾಪ್ ನ್ಯೂಸ್

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಇದನ್ನೂ ಓದಿ  ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಇದನ್ನೂ ಓದಿ ಏಕದಿನ ಸರಣಿ : ಇಂಗ್ಲೆಂಡ್‌ ತಂಡಕ್ಕೆ ಜಾರ್ಜ್‌ ಗಾರ್ಟನ್‌ ಸೇರ್ಪಡೆ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಟೆಸ್ಟ್‌ ನಾಯಕತ್ವ: ಧೋನಿಯನ್ನು ಮೀರಿಸಿದ ವಿರಾಟ್‌ ಕೊಹ್ಲಿ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನಿವೃತ್ತ IAS ಅಧಿಕಾರಿ ಅರವಿಂದ ಕುಮಾರ್‌ ಶರ್ಮಾ ನೇಮಕ

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

ಕೇವಲ ಐದು ನಿಮಿಷಗಳ ಅಂತರದಲ್ಲಿ ಮಹಿಳೆಗೆ ಎರಡು ಲಸಿಕೆ! ಲಸಿಕಾ ಕೇಂದ್ರದ ಸಿಬಂದಿಯ ಯಡವಟ್ಟು

2022ಕ್ಕೆ ಎಲ್ಲಾ 36 ರಫೇಲ್‌ ಭಾರತಕ್ಕೆ : ಭಾರತೀಯ ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆ

2022ಕ್ಕೆ ಎಲ್ಲಾ ರಫೇಲ್‌ ಯುದ್ಧ ವಿಮಾನಗಳು ಭಾರತಕ್ಕೆ : ವಾಯುಪಡೆ ಮುಖ್ಯಸ್ಥ ಬದೌರಿಯಾ ಭರವಸೆ

19-11

ರಸ್ತೆ ಕಾಮಗಾರಿ ವೇಳೆ ಸ್ಫೋಟಕ ಬಳಕೆ: ಜನರ ಆಕ್ರೋಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‘ರಿವೈಂಡ್’ ಚಿತ್ರ ವಿಮರ್ಶೆ: ಮಾಡರ್ನ್ ಟೆಕ್ನಿಕ್‌ನಲ್ಲಿ ಕನಸುಗಳ ಹುಡುಕಾಟ

‘ರಿವೈಂಡ್’ ಚಿತ್ರ ವಿಮರ್ಶೆ: ಮಾಡರ್ನ್ ಟೆಕ್ನಿಕ್‌ನಲ್ಲಿ ಕನಸುಗಳ ಹುಡುಕಾಟ

ಟಾಕೀಸ್‌ನೊಳಗೊಂದು ಥ್ರಿಲ್ಲಿಂಗ್‌ ಅನುಭವ!

ಟಾಕೀಸ್‌ನೊಳಗೊಂದು ಥ್ರಿಲ್ಲಿಂಗ್‌ ಅನುಭವ!

kodemuruga

ಚಿತ್ರವಿಮರ್ಶೆ: ‘ಮುರುಗ’ನ ಅಡ್ಡದಲ್ಲಿ ಭರಪೂರ ನಗು

ranam kannada movie

ಚಿತ್ರ ವಿಮರ್ಶೆ: ಆ್ಯಕ್ಷನ್‌ ಅಬ್ಬರದಲ್ಲಿ ರಣ ಕಹಳೆ

ondu gante kathe kannada movie

ಚಿತ್ರ ವಿಮರ್ಶೆ: ಒಂದು ಗಂಟೆಯ ನಂತರ ಒಂದು ಸಂದೇಶ!

MUST WATCH

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

udayavani youtube

ಕೊರ್ಗಿ : ಡಾ. ರವಿಶಂಕರ್‌ ಶೆಟ್ಟಿ ಅವರಿಂದ ಆಕ್ಸಿಜನ್ ಸಾಂದ್ರಕ ಕೊಡುಗೆ

udayavani youtube

ಸಾಮಾಜಿಕ ಅಂತರವಿಲ್ಲದೆ ಶಿಕ್ಷಕರಿಗೆ ಲಸಿಕಾ ಅಭಿಯಾನ

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

ಹೊಸ ಸೇರ್ಪಡೆ

The floating library

ತೇಲುವ ಗ್ರಂಥಾಲಯದೊಳಗೆ  ವಿಶಾಲ ಜಗತ್ತಿನ ದರ್ಶನ

desiswara

ಒಂದು ಗುಂಗಿನ ಒಳಗೆ  ಒಂದಲ್ಲ; ನೂರಾರು ಸ್ವರಗಳು!

Points of Light Award

ಯೋಗ ಪ್ರೋಡೈಜಿ ಈಶ್ವರ್‌ ಶರ್ಮಾಗೆ ಪಾಯಿಂಟ್ಸ್‌ ಆಫ್ ಲೈಟ್‌ ಪ್ರಶಸ್ತಿ

desiswara

ಯಾರು ಬೇಕಾದರೂ ಕತೆಗಾರ,  ವಿನ್ಯಾಸಗಾರರಾಗಬಹುದು: ನಾಗರಾಜ್‌ ವಸ್ತಾರೆ

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

ಟೋಕಿಯೊ ಒಲಿಂಪಿಕ್ಸ್‌ : ಭಾರತೀಯರಿಗೆ ದಿನವೂ ಕೋವಿಡ್‌ ಟೆಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.