ಪಾಕಿಸ್ಥಾನ ರೆಸ್ಟೋರೆಂಟ್ಗೆ ನಟಿ ಆಲಿಯಾ ಭಟ್ ಜಾಹೀರಾತು
Team Udayavani, Jun 19, 2022, 7:10 AM IST
ಪಾಕಿಸ್ಥಾನದ ಕರಾಚಿಯಲ್ಲಿರುವ “ಸ್ವಿಂಗ್’ ಹೆಸರಿನ ರೆಸ್ಟೋರೆಂಟ್ ಬಾಲಿವುಡ್ ಸಿನೆಮಾವೊಂದನ್ನು ತನ್ನ ಜಾಹೀರಾತಿಗೆ ಬಳಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಮೆನ್ಸ್ ಮಂಡೇ ಸ್ಪೆಷಲ್ ಆಫರ್ನ ಜಾಹೀರಾತಿಗೆ ನಟಿ ಆಲಿಯಾ ಭಟ್ ಅಭಿನಯಿಸಿರುವ “ಗಂಗೂಭಾಯಿ ಕಥಿಯಾವಾಡಿ’ ಸಿನೆಮಾದ ದೃಶ್ಯವೊಂದನ್ನು ಬಳಸಿಕೊಳ್ಳಲಾಗಿದೆ.
ಅದರಲ್ಲಿ ವೇಶ್ಯೆ ಪಾತ್ರದಲ್ಲಿರುವ ನಟಿ, ಪುರುಷರನ್ನು ಕರೆಯುವ ದೃಶ್ಯವಿದೆ. ಈ ಭಾವನಾತ್ಮಕ ದೃಶ್ಯವನ್ನು ತನ್ನ ಲಾಭಕ್ಕೆ ಬಳಸಿಕೊಂಡ ರೆಸ್ಟೋರೆಂಟ್ ವಿರುದ್ಧ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಲಾರಂಭಿಸಿದ್ದಾರೆ.