BBK11: ಬಿಗ್ ಬಾಸ್ ಮನೆಯಲ್ಲಿ ದೆವ್ವಗಳ ಕಾಟ.. ಸ್ಪರ್ಧಿಗಳಿಗೆ ಶುರುವಾಯಿತು ಭೀತಿ
Team Udayavani, Oct 9, 2024, 7:24 PM IST
ಬೆಂಗಳೂರು: ಕನ್ನಡ ಬಿಗ್ ಬಾಸ್(Bigg Boss Kannada-11) ಆಟ ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ʼಸ್ವರ್ಗ – ನರಕʼದ ಸ್ಪರ್ಧಿಗಳ ಎದೆಯಲ್ಲಿ ಢವ ಢವ ಎನ್ನುವಂತಹ ಪ್ರಸಂಗಗಳು ದೊಡ್ಮನೆಯಲ್ಲಿ ನಡೆಯುತ್ತಿದೆ.
ಜಗದೀಶ್, ಹಂಸಾ ಅವರ ಮಾತೇ ಈ ವಾರ ಹೆಚ್ಚು ಸದ್ದು ಮಾಡಿದೆ. ನಿನ್ನೆಯ ಸಂಚಿಕೆಯಲ್ಲಿ ಬಿಗ್ ಬಾಸ್ ಟಾಸ್ಕ್ ತಯಾರಿ ವೇಳೆ ನಿಯಮ ಉಲ್ಲಂಘನೆ ಆಗಿದೆ. ಇದರ ಪರಿಣಾಮ ಬಿಗ್ ಬಾಸ್ ಮನೆಮಂದಿಗೆ ಹಾಗೂ ಕ್ಯಾಪ್ಟನ್‌ಗೆ ತಕ್ಕ ಶಿಕ್ಷೆಯನ್ನು ನೀಡಿದ್ದಾರೆ.
ಇದರ ನಡುವೆ ಬಿಗ್ ಬಾಸ್ ಮನೆಮಂದಿ ಭಯ ಬೀಳುವ ಪ್ರಸಂಗ ನಡೆದಿದೆ. ಇದನ್ನು ನೋಡಿ ಸ್ಪರ್ಧಿಗಳು ಬೆಚ್ಚಿ ಬಿದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದೆವ್ವದ ಕಾಟ ಶುರುವಾಗಿದೆ ಎಂದು ಸ್ಪರ್ಧಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಆಗಿದ್ದೇನು?: ಸ್ವರ್ಗ ನಿವಾಸಿಗಳು ಒಂದು ಕಡೆ ಕೂತುಕೊಂಡು ಟಾಸ್ಕ್ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ನಡುವೆ ಇದ್ದಕ್ಕಿದ್ದಂತೆ ತಟ್ಟೆಯೊಂದು ಕೆಳಗೆ ಬಿದ್ದು ಒಡೆದು ಹೋಗಿದೆ. ಇದನ್ನು ನೋಡಿದ ಸ್ಪರ್ಧಿಗಳು ಅತ್ತ ಕಡೆ ಹೋಗಿದ್ದಾರೆ. ತಟ್ಟೆಗಳು ಹೆಂಗೆ ಒಡೆದು ಹೋಗುತ್ತಿದೆ. ಈ ಮನೆಯಲ್ಲಿ ದೆವ್ವ ಇರಬಹುದೆಂದು ಸ್ಪರ್ಧಿಯೊಬ್ಬರು ಗಾಬರಿಯಿಂದ ಮಾತನಾಡಿದ್ದಾರೆ. ಐಶ್ವರ್ಯಾ ಹೆಚ್ಚು ಭಯ ಬಿದ್ದಿದ್ದು, ಈ ಮನೆಯಲ್ಲಿ ಏನೋ ನೆಗೆಟಿವ್ ಶಕ್ತಿಯಿದೆ. ನನ್ನ ತಲೆಯಲ್ಲಿ ಅದೇ ಓಡುತ್ತಿದೆ ಎಂದು ಹೇಳಿದ್ದಾರೆ.
ಇದಕ್ಕೆ ಉಗ್ರಂ ಮಂಜು ಹಾಗೂ ಇತರರು ಇಲ್ಲ ಹಾಗೇನಿಲ್ಲ. ದೆವ್ವ- ಗಿವ್ವಾ ಏನೂ ಇರಲ್ಲ ಎಂದಿದ್ದಾರೆ. ಮತ್ತೊಬ್ಬರು ನೆಗೆಟಿವ್ ಎನರ್ಜಿ ಎಲ್ಲ ಹೋಯಿತು ಅನ್ಕೊಳ್ಳಿ ಎಂದು ಐಶ್ವರ್ಯಾ ಅವರಿಗೆ ಧೈರ್ಯ ತುಂಬಿದ್ದಾರೆ. ಹೀಗೆ ಮಾತನಾಡುವಾಗಲೇ ಸ್ಪರ್ಧಿಗಳ ಮುಂದೆಯೇ ಮತ್ತೊಂದು ತಟ್ಟೆ ಒಡೆದು ಹೋಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ನಿಗೂಢವಾಗಿ ಒಡೀತಿವೆ ತಟ್ಟೆಗಳು; ಸದಸ್ಯರ ಎದೆಯಲ್ಲಿ ಢವಢವ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30
#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/zLHcHlE2Zg— Colors Kannada (@ColorsKannada) October 9, 2024
ಇಂದು ರಾತ್ರಿ (ಅ.9ರಂದು) ಈ ಸಂಚಿಕೆ ಪ್ರಸಾರವಾಗಲಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…
BBK11: ಬೆನ್ನ ಹಿಂದೆ ನಡೆದ ಮಾತಿನ ಬಂಡವಾಳ ಬಹಿರಂಗ.. ಮೋಕ್ಷಿತಾ – ತ್ರಿವಿಕ್ರಮ್ ಟಾಕ್ ವಾರ್
BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ
BBK11: ಬಿಗ್ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.