Tollywood: ತೆಲುಗಿಗೆ ಫಾಹದ್ ಫಾಸಿಲ್ ʼಆವೇಶಮ್ʼ ರಿಮೇಕ್; ಲೀಡ್ ರೋಲ್‌ನಲ್ಲಿ ಬಾಲಯ್ಯ
Team Udayavani, Aug 6, 2024, 3:11 PM IST
ಕೊಚ್ಚಿ: ಮಾಲಿವುಡ್ ಸ್ಟಾರ್ ಫಾಹದ್ ಫಾಸಿಲ್ (Fahadh Faasil) ಅವರ ʼಆವೇಶಮ್ʼ (Aavesham) ಈ ವರ್ಷದ ಹಿಟ್ ಸಿನಿಮಾಗಳಲ್ಲೊಂದು. ಫೀಲ್ ಗುಡ್, ಕಾಮಿಡಿ ಕೆಟಗರಿಗೆ ಸೇರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಬೆಂಗಳೂರಿನ ಲೋಕಲ್ ಗ್ಯಾಂಗ್ ಸ್ಟರ್ ʼರಂಗನ್ʼ ಪಾತ್ರದಲ್ಲಿ ಫಾಫಾ ನಟಿಸಿದ್ದರು. ಎಂದಿನಂತೆ ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು.
ಜೀತು ಮಾಧವನ್ (Jithu Madhavan) ನಿರ್ದೇಶನದಲ್ಲಿ 30 ಕೋಟಿ ಬಜೆಟ್ ನಲ್ಲಿ ಬಂದ ʼಆವೇಶಮ್ʼ ಹಾಡು ಹಾಗೂ ಹಾಸ್ಯದಿಂದ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ಇದೀಗ ʼಆವೇಶಮ್ʼ ಬಗ್ಗೆ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದೆ. ತೆಲುಗು ಭಾಷೆಗೆ ಸಿನಿಮಾ ರಿಮೇಕ್ ಆಗಲಿದೆ ಎನ್ನಲಾಗಿದೆ.
ʼಆವೇಶಮ್ʼ ತೆಲುಗು ರಿಮೇಕ್ ನಲ್ಲಿ ಹಿರಿಯ ನಟ ಬಾಲಯ್ಯ( Nandamuri Balakrishna) ಅವರು ʼರಂಗನ್ʼ ಅಂದರೆ ಫಾಹದ್ ಫಾಸಿಲ್ ಅವರು ಮಾಡಿದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾತು ಟಾಲಿವುಡ್ (Tollywood) ನಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ: Kichcha Sudeep: ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಲು ನಿರಾಕರಿಸಿದ ನಟ ಸುದೀಪ್
ʼಆವೇಶಂʼ ಚಿತ್ರದ ರೀಮೇಕ್ ಹಕ್ಕುಗಳನ್ನು ಪಡೆಯಲು ಮೈತ್ರಿ ಮೂವಿ ಮೇಕರ್ಸ್ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ. ಇದು ಓಕೆಯಾದರೆ ʼಆವೇಶಮ್ʼ ತೆಲುಗಿನಲ್ಲಿ ಬರಲಿದೆ.
ಈ ಸುದ್ದಿಯನ್ನು ಕೇಳಿ ಬಾಲಯ್ಯ ಫ್ಯಾನ್ಸ್ ಗಳು ಖುಷ್ ಆಗಿದ್ದಾರೆ. ʼರಂಗನ್ʼ ಪಾತ್ರದಲ್ಲಿ ಬಾಲಯ್ಯ ಅವರನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
ಈ ವರ್ಷದ ಮೇ.9ರಂದು ಥಿಯೇಟರ್ ಬಂದ ʼಆವೇಶಮ್ʼ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salaar 2: ಪ್ರಭಾಸ್ – ಪ್ರಶಾಂತ್ ʼಸಲಾರ್-2ʼನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್?
OTT release: ಕೀರ್ತಿ ಸುರೇಶ್ ʼರಘು ತಾತʼ ಓಟಿಟಿ ರಿಲೀಸ್‌ಗೆ ಡೇಟ್ ಲಾಕ್
Actresses: ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್: ರಾಗಿಣಿ, ಶುಭಾ ಕೊಟ್ಟ ಸ್ಪಷ್ಟನೆ ಏನು?
Devara Part 1: ಭಾರೀ ಮೊತ್ತ ಕೊಟ್ಟು ʼದೇವರʼ ಡಿಜಿಟಲ್ ರೈಟ್ಸ್ ಖರೀದಿಸಿದ ನೆಟ್ ಫ್ಲಿಕ್ಸ್
Jayam Ravi: 15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಖ್ಯಾತ ನಟ ಜಯಂ ರವಿ
MUST WATCH
ಹೊಸ ಸೇರ್ಪಡೆ
Kangana Ranaut: 32 ಕೋಟಿ ರೂ.ಗೆ ಬಂಗಲೆ ಮಾರಿದ ಸಂಸದೆ ಕಂಗನಾ
Manipur: ಮತ್ತೆ ಉದ್ವಿಗ್ನ, ಇಂಟರ್ನೆಟ್ ಸ್ಥಗಿತ, ಕರ್ಫ್ಯೂ ಜಾರಿಗೊಳಿಸಿದ ಸರಕಾರ
Bidar: ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !
Hubballi: ಕರ್ತವ್ಯದಲ್ಲಿದ್ದ ಎಎಸ್‌ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್; ತೀವ್ರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.