Samantha Ruth Prabhu: ಖ್ಯಾತ ನಿರ್ದೇಶಕನ ಜತೆ ಸಮಂತಾ ಡೇಟಿಂಗ್? ಇವರೇ ನೋಡಿ ಅವರು
Team Udayavani, Aug 14, 2024, 5:40 PM IST
ಹೈದರಾಬಾದ್: ಟಾಲಿವುಡ್ ನಟಿ ಸಮಂತಾ (Samantha Ruth Prabhu) ಅವರ ಮಾಜಿ ಪತ್ನಿ ನಾಗಚೈತನ್ಯ(Naga Chaitanya) ಶೋಭಿತಾ (Sobhita Dhulipala) ಅವರೊಂದಿಗೆ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಸಮಂತಾ ಅವರ ಲವ್ ಲೈಫ್ ವಿಚಾರ ಮತ್ತೆ ಚರ್ಚೆ ಆಗುತ್ತಿದೆ.
ಸಮಂತಾ ಕೂಡ ಮದುವೆ ಆಗಬೇಕೆಂದು ಅವರ ಅಭಿಮಾನಿಗಳು ನಾಗಚೈತನ್ಯ ಅವರ ಎಂಗೇಜ್ ಮೆಂಟ್ ಬಳಿಕ ಮಾತನಾಡಿಕೊಳ್ಳುತ್ತಿದ್ದಾರೆ. ಕೆಲ ಫ್ಯಾನ್ಸ್ ಗಳು ಸಮಂತಾ ಅವರಿಗೆ ಪ್ರಪೋಸ್ ಮಾಡುವ ಮಿಮ್ಸ್ ರೀತಿಯ ವಿಡಿಯೋಗಳನ್ನು ಹರಿದುಬಿಟ್ಟಿದ್ದಾರೆ.
ಈ ನಡುವೆ ಸಮಂತಾ ಡೇಟಿಂಗ್ ಲೈಫ್ ಬಗ್ಗೆ ಗಾಸಿಪ್‌ಯೊಂದು ಹರಿದಾಡುತ್ತಿದೆ. ‘ರಾಜ್ & ಡಿಕೆ'(Raj & DK) ಖ್ಯಾತಿಯ ನಿರ್ದೇಶಕರ ಜೊತೆ ಸಮಂತಾ ʼಫ್ಯಾಮಿಲಿ ಮ್ಯಾನ್-2ʼ ಸರಣಿಯಲ್ಲಿ ಕೆಲಸ ಮಾಡಿದ್ದಾರೆ. ಮುಂದೆ ‘ರಾಜ್ & ಡಿಕೆ’ ಅವರ “ಸಿಟಾಡೆಲ್: ಹನಿ ಬನ್ನಿ” (Citadel: Honey Bunny) ಸರಣಿಯಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.
ಇವರಲ್ಲಿ ಸಮಂತಾ ನಿರ್ದೇಶಕ ರಾಜ್ ಜೊತೆ ಆಪ್ತವಾಗಿ ಕಾಣಿಸಿಕೊಂಡಿದ್ದು, ಇಬ್ಬರ ನಡುವಿನ ಸ್ನೇಹದಲ್ಲಿ ಆತ್ಮೀಯತೆ ಹೆಚ್ಚಾಗಿದೆ ಎನ್ನಲಾಗಿದೆ. ʼಸಿಟಾಡೆಲ್ʼ ಸರಣಿ ಶೂಟಿಂಗ್ ವೇಳೆ ಸಮಂತಾ, ರಾಜ್ ನಡುವಿನ ಆತ್ಮೀಯತೆ ಹೆಚ್ಚಾಗಿದ್ದು, ಸಮಂತಾ ರಾಜ್ ಅವರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಹಬ್ಬಿರುವ ವರದಿಗಳ ಬಗ್ಗೆ ಸಮಂತಾ – ರಾಜ್ ಇದುವರೆಗೆ ಪ್ರತಿಕ್ರಿಯೆ ನೀಡಿಲ್ಲ.
ನಿರ್ದೇಶಕ ರಾಜ್ ನಿಡಿಮೋರು ವಿವಾಹಿತರಾಗಿದ್ದು, ಶೀಘ್ರವೇ ಅವರು ವಿಚ್ಛೇದನಕ್ಕೆ ಮುಂದಾಗಲಿದ್ದಾರೆ ಎನ್ನುವ ಮಾತುಗಳೂ ಟಾಲಿವುಡ್ ನಲ್ಲಿ ಕೇಳಿ ಬರುತ್ತಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Jani Master: ನನ್ನ ಪತಿ ಎಲ್ಲಿದ್ದಾರೆ.. ಠಾಣೆ ಬಳಿ ಜಾನಿ ಮಾಸ್ಟರ್ ಪತ್ನಿ ರಾದ್ಧಾಂತ
Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್
Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನ
Kanguva Movie: ಸೂರ್ಯ ಪ್ಯಾನ್ ಇಂಡಿಯಾ ʼಕಂಗುವʼ ಹೊಸ ರಿಲೀಸ್ ಡೇಟ್ ಔಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.