Megastar Chiranjeevi;ವಿಶ್ವಂಭರ ಟೀಸರ್ ಬಿಡುಗಡೆ: ಸದ್ಯದ ಟ್ರೆಂಡ್ ಗೋಚರ
ಬಿಡುಗಡೆಯಾಗಿ 6 ಗಂಟೆಗಳ ಒಳಗೆ 58 ಲಕ್ಷಕ್ಕೂ ಹೆಚ್ಚು ವೀಕ್ಷಣೆ...
Team Udayavani, Oct 12, 2024, 6:10 PM IST
ಹೈದರಾಬಾದ್ : ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ”ವಿಶ್ವಂಭರ”(VISHWAMBHARA) ಚಿತ್ರದ ಟೀಸರ್ ವಿಜಯದಶಮಿಯ ದಿನ ಶನಿವಾರ(ಅ12) ರಂದು ಬಿಡುಗಡೆಯಾಗಿದೆ. ಬಿಡುಗಡೆಯಾಗಿ 6 ಗಂಟೆಗಳ ಒಳಗೆ 58 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ಫ್ಯಾಂಟಸಿ ಚಿತ್ರವನ್ನು ಮಲ್ಲಿಡಿ ವಸಿಷ್ಟ ಕಥೆ ಬರೆದು ನಿರ್ದೇಶಿಸಿದ್ದಾರೆ. UV ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಚಿರಂಜೀವಿ ಅವರರೊಂದಿಗೆ ತ್ರಿಶಾ, ಕುನಾಲ್ ಕಪೂರ್, ಮೀನಾಕ್ಷಿ ಚೌಧರಿ ಮತ್ತು ಆಶಿಕಾ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
2023, ಆಗಸ್ಟ್ ನಲ್ಲಿ ಘೋಷಿಸಲಾದ ಚಿತ್ರದ ಶೂಟಿಂಗ್ 2024 ರ ಜನವರಿಯಲ್ಲಿ ಪ್ರಾರಂಭಿಸಲಾಗಿತ್ತು. 2025 ಜನವರಿ 10 ರಂದು ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧಾರ ಮಾಡಿತ್ತು , ಆದರೆ ಅದಿನ್ನೂ ಅಂತಿಮವಾಗಿಲ್ಲ.
ಚಿರಂಜೀವಿ ತೆಲುಗು ಚಿತ್ರರಂಗದ ದಿಗ್ಗಜನಾಗಿ ಭಾರೀ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ‘ವಿಶ್ವಂಭರ’ ಟೀಸರ್ ಬಿಡುಗಡೆಯಾಗಿ ಅಭಿಮಾನಿಗಳಿಗೆ ರಸದೌತಣ ನೀಡಿದ್ದು, ಟೀಸರ್ ನಲ್ಲಿ ಸದ್ಯ ಬರುತ್ತಿರುವ ಚಿತ್ರಗಳ ಶೇಡ್ ಕಾಣಿಸಿದ್ದು, ಚಿತ್ರದ ಕಥಾ ವಸ್ತುವಿನ ಕುರಿತು ಕುತೂಹಲ ಹೆಚ್ಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam: ನಟ ಸಿದ್ಧಿಕ್‌ಗೆ ಮಧ್ಯಂತರ ಜಾಮೀನು ವಿಸ್ತರಣೆ
Pushpa 2: ಅಲ್ಲು ಅರ್ಜುನ್ ಜತೆ ಡ್ಯಾನ್ಸ್ ನಂಬರ್; ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು?
Pushpa 2 The Rule; ಅಲ್ಲು ಅರ್ಜುನ್ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ
Kamal Haasan: ಇನ್ಮುಂದೆ ನನ್ನನ್ನುʼಉಳಗನಾಯಗನ್ʼ ಎಂದು ಕರೆಯಬೇಡಿ.. ಕಮಲ್ ವಿಶೇಷ ಮನವಿ
Toxic: ʼಟಾಕ್ಸಿಕ್ʼ ಶೂಟ್‌ನಲ್ಲಿ ಯಶ್; ಕ್ಯಾಮೆರಾ ಕಂಡು ಮುಖ ಮುಚ್ಚಿಕೊಂಡು ಹೋದ ರಾಕಿಭಾಯ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.