Devara Part 1: ಭಾರೀ ಮೊತ್ತ ಕೊಟ್ಟು ʼದೇವರʼ ಡಿಜಿಟಲ್ ರೈಟ್ಸ್ ಖರೀದಿಸಿದ ನೆಟ್ ಫ್ಲಿಕ್ಸ್
Team Udayavani, Sep 9, 2024, 3:08 PM IST
ಹೈದರಾಬಾದ್: ಜೂ.ಎನ್ ಟಿಆರ್(Jr. NTR) ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ದೇವರ ಪಾರ್ಟ್ -1(Devara Part -1) ರಿಲೀಸ್‌ಗೆ ದಿನಗಣನೆ ಶುರುವಾಗಿದೆ.
ಇತ್ತೀಚೆಗಷ್ಟೇ ಅಂದರೆ ಗಣೇಶ ಹಬ್ಬದ ಸಂದರ್ಭದಲ್ಲಿ ಹೊಸ ಪೋಸ್ಟರ್ ರಿಲೀಸ್ ಮಾಡಿ ಟ್ರೇಲರ್ ಡೇಟ್ ರಿವೀಲ್ ಮಾಡಿತ್ತು. ಸೆ.10 ರಂದು ಟ್ರೇಲರ್ ರಿಲೀಸ್ ಆಗಲಿದ್ದು, ಫ್ಯಾನ್ಸ್‌ಗಳು ಕ್ಷಣ ಕ್ಷಣಕ್ಕೂ ಎಕ್ಸೈಟ್ ಆಗುತ್ತಿದ್ದಾರೆ.
ಹಾಡು ಹಾಗೂ ಪೋಸ್ಟರ್‌ಗಳಿಂದ ನಿರೀಕ್ಷೆ ಹೆಚ್ಚಿಸಿರುವ ʼದೇವರʼ ಚಿತ್ರದ ಡಿಜಿಟಲ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ.
155 ಕೋಟಿ ರೂ. ಕೊಟ್ಟು ನೆಟ್‌ಫ್ಲಿಕ್ಸ್ ʼದೇವರʼ ಡಿಜಿಟಲ್ ಹಕ್ಕನ್ನು ಖರೀದಿಸಿದೆ ಎಂದು ವರದಿಯಾಗಿದೆ. ಇದು ಯಾವುದೇ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ತೆಲುಗು ಚಲನಚಿತ್ರವೊಂದಕ್ಕೆ ಸಿಕ್ಕ ಅತ್ಯಂತ ದುಬಾರಿ ಡೀಲ್ ಎಂದು ವರದಿಯಾಗಿದೆ.
ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಹ್ನವಿ ಕಪೂರ್ (Janhvi Kapoor), ಸೈಫ್ ಅಲಿಖಾನ್ (Saif Ali Khan) ಹಾಗೂ ʼಆರ್ ಆರ್ ಆರ್ʼನಿಂದ ಖ್ಯಾತಿ ಹೆಚ್ಚಿಸಿಕೊಂಡಿರುವ ಜೂ.ಎನ್ ಟಿಆರ್ ಇರುವುದರಿಂದಲೇ ಸಿನಿಮಾದ ಡಿಜಿಟಲ್ ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ.
ಸದ್ಯ ವಿದೇಶದಲ್ಲಿ ಸಿನಿಮಾದ ಪ್ರೀ ಸೇಲ್ ಟಿಕೆಟ್ ಲಭ್ಯವಿದ್ದು, ಟಿಕೆಟ್ ಲಭ್ಯವಾದ ಕೆಲವೇ ದಿನಗಳಲ್ಲಿ ಯುಎಸ್‌ನಲ್ಲಿ 15,000 ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗುವ ಮೂಲಕ ʼದೇವರʼ ದಾಖಲೆ ಬರೆದಿದೆ. ಶೀಘ್ರದಲ್ಲಿ ಭಾರತದಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಜೂ.ಎನ್.ಟಿಆರ್ – ಕೊರಟಾಲ ಶಿವ (Koratala Siva) ಕಾಂಬಿನೇಷನ್ ನ ‘ದೇವರ’ ಅನೌನ್ಸ್ ಆದ ದಿನದಿಂದಲೇ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಇದೊಂದು ಕಮರ್ಷಿಯಲ್ ಆ್ಯಕ್ಷನ್ ಬಿಗ್ ಬಜೆಟ್ ನ ಸಿನಿಮಾವಾಗಿದೆ.
ಇದೇ ಸೆ.27ರಂದು ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..ಕಮೆಂಟ್ ಮಾಡಿದವರಿಗೆ ಎಂಜಾಯ್ ಮಾಡಿ ಎಂದ ನಟಿ
Box office: ಮಾರ್ಟಿನ್ To ಜಿಗ್ರಾ.. ದಸರಾಕ್ಕೆ ರಿಲೀಸ್ ಆದ ಸಿನಿಮಾಗಳು ಗಳಿಸಿದ್ದೆಷ್ಟು?
Megastar Chiranjeevi;ವಿಶ್ವಂಭರ ಟೀಸರ್ ಬಿಡುಗಡೆ: ಸದ್ಯದ ಟ್ರೆಂಡ್ ಗೋಚರ
Devara 2: ʼದೇವರ-2ʼ ನಲ್ಲೂ ಬಾಲಿವುಡ್ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?
Vettaiyan: ಹೇಗಿದೆ ರಜಿನಿಕಾಂತ್ ʼವೆಟ್ಟಯ್ಯನ್ʼ? ಫಸ್ಟ್ ಹಾಫ್ ಓಕೆ ಸೆಕೆಂಡ್ ಹಾಫ್..
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.