Salaar 2: ಪ್ರಭಾಸ್ – ಪ್ರಶಾಂತ್ ʼಸಲಾರ್-2ʼನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್?
Team Udayavani, Sep 10, 2024, 3:41 PM IST
ಹೈದರಾಬಾದ್: ಡಾರ್ಲಿಂಗ್ ಪ್ರಭಾಸ್ (Prabhas) ʼಸಲಾರ್ʼ(Salaar) ಹಾಗೂ ʼಕಲ್ಕಿ 2898 ಎಡಿʼ (Kalki 2898 AD) ಮೂಲಕ ಬ್ಯಾಕ್ ಟು ಬ್ಯಾಕ್ ಮೆಗಾ ಹಿಟ್ ಕೊಟ್ಟಿದ್ದಾರೆ.
ಪ್ರಶಾಂತ್ ನೀಲ್ (Prashanth Neel) ಅವರ ʼಸಲಾರ್-2ʼ ಬಗ್ಗೆಯೂ ದೊಡ್ಡ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಆದರೆ ʼಸಲಾರ್-2ʼ(Salaar Part 2: Shouryaanga) ಆರಂಭಕ್ಕೂ ಮುನ್ನ ಪ್ರಭಾಸ್ ಬೇರೆ ಪ್ರಾಜೆಕ್ಟ್‌ಗಳತ್ತ ಮುಖ ಮಾಡಿದ್ದಾರೆ.
ಪ್ರಭಾಸ್ ಅವರ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಆಗುತ್ತಿರುವ ಬೆನ್ನಲ್ಲೇ ʼಸಲಾರ್-2ʼನಲ್ಲಿ ಖ್ಯಾತ ದಕ್ಷಿಣ ಭಾರತದ ಕಲಾವಿದರೊಬ್ಬರು ಬಣ್ಣ ಹಚ್ಚಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿದೆ.
ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ (Mohanlal) ಅವರನ್ನು ʼಸಲಾರ್-2ʼ ನಲ್ಲಿ ಪ್ರಧಾನ ಪಾತ್ರವೊಂದರಲ್ಲಿ ನಟಿಸಲು ಕೇಳಿಕೊಂಡಿದೆ ಎಂದು ʼಟ್ರ್ಯಾಕ್ ಟಾಲಿವುಡ್ʼ ವರದಿ ತಿಳಿಸಿದೆ.
ಈ ಹಿಂದೆ ಮೋಹನ್ ಲಾಲ್ ʼಜನತಾ ಗ್ಯಾರೇಜ್ʼ ಎನ್ನುವ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಇನ್ನೊಂದೆಡೆ ರವಿ ಬಸ್ರೂರ್ ಅವರ ಬದಲಿಗೆ ಅನಿರುದ್ಧ್ ರವಿಚಂದರ್ ಅವರು ಮ್ಯೂಸಿಕ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ. ಈ ಪ್ರಾಜೆಕ್ಟ್ ಪ್ರಸ್ತುತ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ.
ಇನ್ನು ಸಲಾರ್ -2 ನಲ್ಲೂ ಪ್ರಭಾಸ್ ಜತೆ ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಶ್ರೀಯಾ ರೆಡ್ಡಿ, ಜಗಪತಿ ಬಾಬು ಮತ್ತು ಇತರರು ಇರಲಿದ್ದಾರೆ. 2025ರಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.
ಸದ್ಯ ಪ್ರಭಾಸ್ ʼರಾಜಾಸಾಬ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಆ ಬಳಿಕ ಸಂದೀಪ್ ವಂಗಾ ಅವರ ʼಸ್ಪಿರಿಟ್ʼ ಕೂಡ ಸರತಿ ಸಾಲಿನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Bala: ಮಾಜಿ ಪತ್ನಿ ಜತೆ ಅನುಚಿತ ವರ್ತನೆ ಆರೋಪ; ಖ್ಯಾತ ನಟ ಬಂಧನ
Actress: ಖ್ಯಾತ ನಟಿಯ ಖಾಸಗಿ ವಿಡಿಯೋ ಲೀಕ್..ಕಮೆಂಟ್ ಮಾಡಿದವರಿಗೆ ಎಂಜಾಯ್ ಮಾಡಿ ಎಂದ ನಟಿ
Box office: ಮಾರ್ಟಿನ್ To ಜಿಗ್ರಾ.. ದಸರಾಕ್ಕೆ ರಿಲೀಸ್ ಆದ ಸಿನಿಮಾಗಳು ಗಳಿಸಿದ್ದೆಷ್ಟು?
Megastar Chiranjeevi;ವಿಶ್ವಂಭರ ಟೀಸರ್ ಬಿಡುಗಡೆ: ಸದ್ಯದ ಟ್ರೆಂಡ್ ಗೋಚರ
Devara 2: ʼದೇವರ-2ʼ ನಲ್ಲೂ ಬಾಲಿವುಡ್ ಸ್ಟಾರ್ಸ್? ನಿರ್ದೇಶಕರು ಹೇಳಿದ್ದೇನು?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.