Naga Chaitanya-Sobhita Dhulipala: ಇಂದು ಪ್ರೇಯಸಿ ಜತೆ ಸಮಂತಾ ಮಾಜಿ ಪತಿ ಎಂಗೇಜ್‌ಮೆಂಟ್?
Team Udayavani, Aug 8, 2024, 9:14 AM IST
ಹೈದರಾಬಾದ್: ಕಳೆದ ಕೆಲ ವರ್ಷಗಳಿಂದ ಟಾಲಿವುಡ್‌ನಲ್ಲಿ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ ಧೂಳಿಪಾಲ (Sobhita Dhulipala) ಇಬ್ಬರು ಡೇಟಿಂಗ್‌ನಲ್ಲಿರುವ ವಿಚಾರ ಹರಿದಾಡುತ್ತಿದೆ.
ಈ ಡೇಟಿಂಗ್ ವಿಚಾರ ಮತ್ತೊಂದು ಹಂತಕ್ಕೆ ತಲುಪಿದೆ ಎನ್ನಲಾಗಿದ್ದು, ನಾಗಚೈತನ್ಯ ಶೋಭಿತಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಚಾರ ಟ್ರೆಂಡ್ ಆಗಿದೆ.
ಇತ್ತೀಚಿನ ವರ್ಷದಲ್ಲಿ ನಾಗಚೈತನ್ಯ ಹಾಗೂ ಶೋಭಿತಾ ಇಬ್ಬರು ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ವಿದೇಶದಲ್ಲಿ ಇಬ್ಬರು ಹಾಲಿ ಡೇ ಮೂಡ್ ನಲ್ಲಿರುವ ಕೆಲ ಫೋಟೋಗಳು ಹರಿದಾಡಿತ್ತು. ಆದರೆ ಇಬ್ಬರು ತಮ್ಮ ಡೇಟಿಂಗ್ ಬಗ್ಗೆ ಬಹಿರಂಗವಾಗಿ ಎಲ್ಲೂ ಕೂಡ ಬಾಯಿಬಿಡದೆ, ಗೌಪ್ಯವಾಗಿ ರಿಲೇಷನ್ ಶಿಪ್ ನಲ್ಲಿದ್ದರು.
ಇದೀಗ ಇಬ್ಬರು ಮದುವೆ ಆಗಲು ಬಯಸಿದ್ದು, ಗುರುವಾರ (ಆ.8ರಂದು) ನಾಗಚೈತನ್ಯ ಅವರ ನಿವಾಸದಲ್ಲಿ ಮನೆಯವರ ಸಮ್ಮುಖದಲ್ಲಿ ಎಂಗೇಜ್ ಮೆಂಟ್ (Engagement) ಕಾರ್ಯಕ್ರಮ ನಡೆಯಲಿದೆ ಎಂದು ‘ ಗ್ರೇಟ್ ಆಂಧ್ರ’ ವರದಿ ಮಾಡಿದೆ.
ಇಬ್ಬರು ಶೀಘ್ರದಲ್ಲೇ ಮದುವೆ ಆಗಲಿದ್ದಾರೆ. ನಿಶ್ಚಿತಾರ್ಥದ ವಿಚಾರವನ್ನು ಸಮಾರಂಭದ ಬಳಿಕ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.
2017 ರಲ್ಲಿ ನಾಗಚೈತನ್ಯ ಸಮಂತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2021ರಲ್ಲಿ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆ ವಿಚ್ಚೇದನ ಪಡೆದಿದ್ದರು.
ಸದ್ಯ ನಾಗಚೈತನ್ಯ ಹಾಗೂ ಶೋಭಿತಾ ಅವರಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನಿರ್ದೇಶಕನಿಗೆ ಅಮಾನತು ಶಿಕ್ಷೆ
GOAT: 3 ದಿನದಲ್ಲಿ 100 ಕೋಟಿ ಗಳಿಕೆ ಕಂಡ ʼಗೋಟ್ʼ; ತಮಿಳು ವರ್ಷನ್‌ನಿಂದಲೇ ಹೆಚ್ಚು ಗಳಿಕೆ
30 ಟಿವಿ ಚಾನೆಲ್, 2 ಕ್ರಿಕೆಟ್ ಟೀಮ್.. ಇವರೇ ನೋಡಿ ಭಾರತದ ಶ್ರೀಮಂತ ಸಿನಿಮಾ ನಿರ್ಮಾಪಕ
Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ
Devara: ಗಣೇಶ ಹಬ್ಬಕ್ಕೆ ʼದೇವರʼ ಸ್ಪಷೆಲ್ ಅಪ್ಡೇಟ್; ಟ್ರೇಲರ್ ಡೇಟ್ ರಿವೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.