Nagarjuna: ಭಾವಿ ಸೊಸೆ ಶೋಭಿತಾರನ್ನು ‘ಹಾಟ್’ ಎಂದಿದ್ದ ನಾಗಾರ್ಜುನ್; ವಿಡಿಯೋ ವೈರಲ್
Team Udayavani, Aug 8, 2024, 2:07 PM IST
ಹೈದರಾಬಾದ್: ನಿನ್ನೆಯಿಂದ ಟಾಲಿವುಡ್ ನಲ್ಲಿ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ ಧೂಳಿಪಾಲ (Sobhita Dhulipala) ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಅಂತೂ ಇಬ್ಬರ ಎಂಗೇಜ್ ಮೆಂಟ್ ನೆರವೇರಿದ್ದು ಹರಿದಾಡುತ್ತಿದ್ದ ಗಾಸಿಪ್ ಗೆ ಫುಲ್ ಸ್ಟಾಪ್ ಬಿದ್ದಿದೆ.
ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ನಲ್ಲಿರುವ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಗುರುವಾರ (ಆ.8ರಂದು) ಹೈದರಾಬಾದ್‌ನಲ್ಲಿರುವ ನಾಗಚೈತನ್ಯ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕುಟುಂಬದವರ ಸಮ್ಮುಖದಲ್ಲಿ ನೆರವೇರಿತು Naga Chaitanya – Sobhita Dhulipala ನಿಶ್ಚಿತಾರ್ಥ
ಮೊದಲ ಫೋಟೋವನ್ನು ನಾಗಚೈತನ್ಯ ತಂದೆ ನಾಗಾರ್ಜುನ ಹಂಚಿಕೊಂಡು, “ನಮ್ಮ ಮಗ ನಾಗ ಚೈತನ್ಯ ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಇಂದು ಬೆಳಿಗ್ಗೆ 9:42ಕ್ಕೆ ನೆರವೇರಿದೆ. ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಘೋಷಿಸಲು ತುಂಬಾ ಸಂತೋಷವಾಗುತ್ತಿದೆ. ಅವಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ. ದಂಪತಿಗಳಿಗೆ ಅಭಿನಂದನೆಗಳು! ಅವರಿಗೆ ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ!” ಎಂದು ಹಾರೈಸಿದ್ದಾರೆ.
ಈ ನಡುವೆ ತನ್ನ ಮಗ ಎಂಗೇಜ್ ಮೆಂಟ್ ಆಗಿರುವ ಶೋಭಿತಾ ಅವರ ಅಂದವನ್ನು ಹೊಗಳಿರುವ ನಾಗಾರ್ಜುನ್ ಅವರ ಹಳೆಯ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. 2018ರಲ್ಲಿ ಸಿನಿಮಾ ಪ್ರಚಾರದ ವೇದಿಕೆಯಲ್ಲಿ ನಾಗಾರ್ಜುನ್ ಶೋಭಿತಾ ಅವರ ಬಗ್ಗೆ ಮಾತನಾಡಿದ್ದರು.
“ಶೋಭಿತಾ ಒಳ್ಳೆಯವರು. ಅಂದರೆ ನಾನು ಈ ರೀತಿ ಹೇಳಬಾರದು ಆಕೆ ಚಿತ್ರದಲ್ಲಿ ತುಂಬಾ ಹಾಟ್ ಆಗಿ ಕಾಣುತ್ತಿದ್ದಳು. ನನ್ನ ಪ್ರಕಾರ ಅವಳಲ್ಲಿ ತುಂಬಾ ಆಕರ್ಷಕವಾಗಿ ಸೆಳೆಯುವ ಅಂಶವೊಂದಿದೆ” ಎಂದು ಹೇಳಿದ್ದರು.
Nagarjuna once said this about his future Daughter in Law, Sobhita
byu/Significant-Neat-142 inBollyBlindsNGossip
ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಭಾವಿ ಸೊಸೆ ಬಗ್ಗೆ ಈ ಹಿಂದೆ ನಾಗಾರ್ಜುನ್ ಈ ರೀತಿ ಹೇಳಿದ್ದರು ಎಂದು ನೆಟ್ಟಿಗರು ಈ ವಿಡಿಯೋವನ್ನು ವೈರಲ್ ಮಾಡುತ್ತಿದ್ದಾರೆ.
2017 ರಲ್ಲಿ ನಾಗಚೈತನ್ಯ ಸಮಂತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2021ರಲ್ಲಿ ಇಬ್ಬರು ಪರಸ್ಪರ ಒಪ್ಪಿಗೆಯ ಮೇರೆ ವಿಚ್ಚೇದನ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salaar 2: ಪ್ರಭಾಸ್ – ಪ್ರಶಾಂತ್ ʼಸಲಾರ್-2ʼನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್?
OTT release: ಕೀರ್ತಿ ಸುರೇಶ್ ʼರಘು ತಾತʼ ಓಟಿಟಿ ರಿಲೀಸ್‌ಗೆ ಡೇಟ್ ಲಾಕ್
Actresses: ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್: ರಾಗಿಣಿ, ಶುಭಾ ಕೊಟ್ಟ ಸ್ಪಷ್ಟನೆ ಏನು?
Devara Part 1: ಭಾರೀ ಮೊತ್ತ ಕೊಟ್ಟು ʼದೇವರʼ ಡಿಜಿಟಲ್ ರೈಟ್ಸ್ ಖರೀದಿಸಿದ ನೆಟ್ ಫ್ಲಿಕ್ಸ್
Jayam Ravi: 15 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ ಖ್ಯಾತ ನಟ ಜಯಂ ರವಿ
MUST WATCH
ಹೊಸ ಸೇರ್ಪಡೆ
Bidar: ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
Bigg Boss Kannada-11: ಬಿಗ್ ಬಾಸ್.. ಪ್ರೋಮೊ ರಿಲೀಸ್: ಆ್ಯಂಕರ್ ಯಾರೆಂಬುದೇ ಕುತೂಹಲ !
Hubballi: ಕರ್ತವ್ಯದಲ್ಲಿದ್ದ ಎಎಸ್‌ಐ ತಲೆ ಮೇಲೆ ಬಿದ್ದ ಕಬ್ಬಿಣದ ರಾಡ್; ತೀವ್ರ ಗಾಯ
Kottigehara: ಭಕ್ತಿಗೆ ಬಡತನವಿಲ್ಲವೆಂದು ತೋರಿಸಿಕೊಟ್ಟ ಬಾಲಕ
Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 12ನೇ ರೀಲ್ಸ್ ಪ್ರಸಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.