ಸರ್ ನಿಮ್ಮ ನಿರ್ದೇಶನ ಯಾವಾಗ ಅಂದ್ರೆ.. 2 ಸ್ಕ್ರಿಪ್ಟ್ ರೆಡಿ ಇದೆ ಅಂದ್ರು ಉಪ್ಪಿ


Team Udayavani, Sep 15, 2021, 12:43 PM IST

fsfhghgdaas

ಇದು ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಅಭಿಮಾನಿಗಳ ಪಾಲಿಗೆ ತುಂಬಾ ಸ್ಪೆಷಲ್‌ ಡೇ. ಅದಕ್ಕೆ ಕಾರಣ ಅಂದು ನಟ ಉಪೇಂದ್ರ ಅವರ ಹುಟ್ಟು ಹಬ್ಬ. ಜೀರೋದಿಂದ ಬಂದು ಹೀರೋ ಆದ ನಟ ಉಪೇಂದ್ರ ಎಂಬುದು ಗೊತ್ತಿದೆ. ಅದೇ ಕಾರಣದಿಂದ ಅವರನ್ನು ಅಂತರಾಳ ದಿಂದ ಮನಸಾರೆ ಪ್ರೀತಿಸುವ, ಆರಾಧಿಸುವ ಅಭಿಮಾನಿಗಳ ಬಳಗ ದೊಡ್ಡದಿದೆ. ಹಾಗಾಗಿಯೇ ಅವರ ಹುಟ್ಟುಹಬ್ಬ ದಿನ ಮನೆ ಮುಂದೆ ಬಂದು ನೆಚ್ಚಿನ ನಟನಿಗೆ ಹಾರೈಸುತ್ತಾರೆ.

ಆದರೆ, ಕಳೆದ ವರ್ಷ (2020) ಈ ಅವಕಾಶ ಅಭಿಮಾನಿಗಳಿಗೆ ಸಿಕ್ಕಿಲ್ಲ. ಅದಕ್ಕೆ ಕಾರಣ ಕೊರೊನಾ. ಆದರೆ, ಈ ವರ್ಷವಾದರೂ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸೋದು ಕಷ್ಟ. ಇದರ ಜೊತೆಗೆ ಅಭಿಮಾನಿಗಳಲ್ಲಿ ಮತ್ತೂಂದು ಪ್ರಶ್ನೆ ಕಾಡುತ್ತಿದೆ. ಅದೇನೆಂದರೆ ಈ ವರ್ಷವಾದರೂ ಉಪೇಂದ್ರ ನಿರ್ದೇಶನದ ಸಿನಿಮಾ ಅನೌನ್ಸ್‌ ಮಾಡು ತ್ತಾರಾ ಎಂಬುದು. ಈ ಕುತೂಹಲಕ್ಕೆ ಒಂದು ಕಾರಣವಿದೆ. ಅದು ಉಪೇಂದ್ರ ನಿರ್ದೇಶನದ ಸಿನಿಮಾ ಬಾರದೇ ಬರೋಬ್ಬರಿ 6 ವರ್ಷಗಳಾಗಿವೆ.

2015ರಲ್ಲಿ ಉಪ್ಪಿ-2 ಬಿಟ್ಟರೆ ಮತ್ತೆ ಉಪೇಂದ್ರ ನಿರ್ದೇಶನದಲ್ಲಿ ಯಾವುದೇ ಸಿನಿಮಾ ಬಂದಿಲ್ಲ. ಹಾಗಾಗಿ, ಈ ಬಾರಿಯಾದರೂ ಅನೌನ್ಸ್‌ ಮಾಡುತ್ತಾರಾ ಎಂಬ ಕಾತರ ಸಿನಿಪ್ರೇಮಿಗಳದ್ದು. ಅದೇ ಕಾರಣದಿಂದ ಉಪೇಂದ್ರ ಎಲ್ಲೇ ಹೋದರೂ ಅವರ ಅಭಿಮಾನಿಗಳು ಕೇಳುವ ಒಂದೇ ಒಂದು ಪ್ರಶ್ನೆ ಎಂದರೆ ಅದು ನಿರ್ದೇಶನ ಯಾವಾಗ ಎಂಬುದು.

ಈ ಪ್ರಶ್ನೆಗೆ ಉಪ್ಪಿ ಉತ್ತರಿಸೋದು ಹೀಗೆ “ನಿರ್ದೇಶನಕ್ಕೆ ಬೇಕಾದ ಕಥೆ ಸಿದ್ಧವಾಗಿದೆ. ಎರಡ್ಮೂರು ಸ್ಕ್ರಿಪ್ಟ್ ಮಾಡಿಕೊಂಡಿದ್ದೇನೆ. ಒಮ್ಮೆ ನಿರ್ದೇಶನಕ್ಕೆ ಇಳಿದರೆ ಪೂರ್ಣ ಪ್ರಮಾಣದಲ್ಲಿ ಅದರಲ್ಲಿ ತೊಡಗಿಸಿಕೊಳ್ಳ ಬೇಕು. ಸದ್ಯ ಬೇರೆ ಬೇರೆ ಸಿನಿಮಾಗಳ ಕಮಿಟ್‌ ಮೆಂಟ್‌ಗಳಿವೆ. ಜೊತೆಗೆ ಕೊರೊನಾ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಎಲ್ಲವನ್ನು ನೋಡಿಕೊಂಡು ನನ್ನ ನಿರ್ದೇಶನದ ಸಿನಿಮಾವನ್ನು ಅನೌನ್ಸ್‌ ಮಾಡುತ್ತೇನೆ’ ಎಂದರು.

ಬರ್ತ್‌ಡೇ ಆಚರಿಸಲ್ಲ: ಉಪೇಂದ್ರ ಈ ಬಾರಿಯೂ ಬರ್ತ್‌ಡೇ ಆಚರಿಸಿಕೊಳ್ಳುವುದಿಲ್ಲ. ಅದಕ್ಕೆ ಮತ್ತದೇ ಕಾರಣ, ಕೊರೊನಾ. “ಅಭಿಮಾನಿಗಳು ಪ್ರೀತಿಯಿಂದ ಬರ್ತ್‌ ಡೇ ಆಚರಿಸುತ್ತಿದ್ದರು. ಹಲವಾರು ಕೇಕ್‌, ಗಿಫ್ಟ್ ಗಳನ್ನು ತರುತ್ತಿದ್ದರು. ಆದರೆ, ಕಳೆದ ವರ್ಷದಿಂದ ಆಸಂಭ್ರಮವಿಲ್ಲ. ಈ ವರ್ಷವೂ ನಾನು ಬರ್ತ್‌ಡೇ ದಿನ ಮನೆಯಲ್ಲಿ ಇರೋದಿಲ್ಲ. ಅಭಿಮಾನಿಗಳು ಇದ್ದಲ್ಲಿಂದಲೇ ವಿಶ್‌ ಮಾಡಿ. ಎಲ್ಲಾ ಸರಿ ಹೋದರೆ ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸುವ’ ಎನ್ನುವುದು ಉಪೇಂದ್ರ ಮಾತು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.