Udayavni Special

ಕಾಸರಗೋಡು: 9 ಮಂದಿಗೆ ಕೋವಿಡ್ 19 ಸೋಂಕು ; ಮೀನುಗಾರಿಕೆ, ಮೀನು ಮಾರಾಟ ನಿಷೇಧ

ಕೊಡಗು: 15 ಪಾಸಿಟಿವ್‌ ಪ್ರಕರಣ ; ಲಾಕ್‌ ಡೌನ್‌ಗೆ ಜನರ ಒಲವು

Team Udayavani, Jul 14, 2020, 6:00 AM IST

ಕಾಸರಗೋಡು: 9 ಮಂದಿಗೆ ಕೋವಿಡ್ 19 ಸೋಂಕು ; ಮೀನುಗಾರಿಕೆ, ಮೀನು ಮಾರಾಟ ನಿಷೇಧ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಾಸರಗೋಡು: ನೀಲೇಶ್ವರ ನಗರಸಭೆಯ ಆರೋಗ್ಯ ಕಾರ್ಯಕರ್ತ ಸಹಿತ ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

ಅವರಲ್ಲಿ 7 ಮಂದಿ ವಿದೇಶಗಳಿಂದಲೂ ಒಬ್ಬರು ಹೊರರಾಜ್ಯದಿಂದಲೂ ಬಂದವರು. ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.

ಕತಾರ್‌ನಿಂದ ಬಂದ ಕುಂಬಳೆಯ ವ್ಯಕ್ತಿ, ದುಬಾೖಯಿಂದ ಬಂದ ಮೊಗ್ರಾಲ್‌ ಪುತ್ತೂರು, ಚೆಮ್ನಾಡ್‌, ಕಾಸರಗೋಡು ನಗರಸಭೆ, ಮುಳಿಯಾರು ನಿವಾಸಿಗಳು, ಒಮಾನ್‌ನಿಂದ ಬಂದ ಕಾಸರಗೋಡು ನಗರಸಭೆ ವ್ಯಾಪ್ತಿಯ ಯುವಕ, ಸೌದಿಯಿಂದ ಬಂದ ಚೆಂಗಳದ ಯುವಕ, ಬೆಂಗಳೂರಿನಿಂದ ಬಂದ 35 ವರ್ಷದ ಕುಂಬಳೆಯ ನಿವಾಸಿಯನ್ನು ಸೋಂಕು ಬಾಧಿಸಿದೆ.

ನೀಲೇಶ್ವರ ನಗರಸಭೆಯ ಆರೋಗ್ಯ ಕಾರ್ಯಕರ್ತರಾದ 54 ವರ್ಷದ ಕರಿವೆಳ್ಳೂರು ಪಂಚಾಯತ್‌ ನಿವಾಸಿಯನ್ನು ಸೋಂಕು ಬಾಧಿಸಿದೆ. ಇದೇ ವೇಳೆ 9 ಮಂದಿ ಗುಣಮುಖರಾಗಿದ್ದಾರೆ.

ಕೇರಳದಲ್ಲಿ 449 ಮಂದಿಗೆ ಸೋಂಕು
ಕೇರಳದಲ್ಲಿ ಸೋಮವಾರ 449 ಮಂದಿಗೆ ಕೋವಿಡ್ 19 ಸೋಂಕು ದೃಢಪಡಿಸಲಾಗಿದೆ. 162 ಮಂದಿ ಗುಣಮುಖರಾಗಿದ್ದಾರೆ. 144 ಮಂದಿಗೆ ಸಂಪರ್ಕದ ಮೂಲಕ ಬಾಧಿಸಿದೆ. 140 ಮಂದಿ ವಿದೇಶದಿಂದಲೂ 64 ಮಂದಿ ಇತರ ರಾಜ್ಯಗಳಿಂದಲೂ ಬಂದವರು. 18 ಮಂದಿಯ ಸೋಂಕಿನ ಮೂಲ ತಿಳಿದು ಬಂದಿಲ್ಲ. ಐವರು ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.

33 ಮಂದಿ ಬಂಧನ
ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಜಿಲ್ಲೆಯಲ್ಲಿ 199 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ. ಲಾಕ್‌ಡೌನ್‌ ಆದೇಶ ಉಲ್ಲಂಘನೆ ಆರೋಪದಲ್ಲಿ 15 ಪ್ರಕರಣಗಳನ್ನು ದಾಖಲಿಸಿ 33 ಮಂದಿಯನ್ನು ಬಂಧಿಸಲಾಗಿದೆ. 8 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೀನುಗಾರಿಕೆ, ಮೀನು ಮಾರಾಟ ನಿಷೇಧ
ಕೋವಿಡ್ 19 ಸಾಮೂಹಿಕ ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ  ಜು. 14ರಿಂದ 17ರ ವರೆಗೆ ಮೀನುಗಾರಿಕೆ, ಮೀನು ಮಾರಾಟ ನಿಷೇಧಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಕೊಡಗು: 15 ಪಾಸಿಟಿವ್‌ ಪ್ರಕರಣ
ಕೊಡಗು ಜಿಲ್ಲೆಯಲ್ಲಿ ಸೋಮವಾರ ಹೊಸದಾಗಿ 15 ಕೋವಿಡ್ 19 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 184ಕ್ಕೆ ಏರಿಕೆಯಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ 13, ವೀರಾಜಪೇಟೆ 1, ಮಡಿಕೇರಿ ತಾಲೂಕಿನ ಒಬ್ಬರು ಬಾಧಿತರಲ್ಲಿ ಸೇರಿದ್ದಾರೆ. ಸೋಮವಾರಪೇಟೆ ತಾಲೂಕು ತೊರೆನೂರು ಗ್ರಾಮದ 85 ವರ್ಷದ ಮಹಿಳೆ ಬಾಧಿತರಲ್ಲಿ ಅತೀ ಹಿರಿಯರಾದರೆ, 18ರ ಹರೆಯದ ಇಬ್ಬರು ಯುವಕರು ಅತೀ ಕಿರಿಯರು.

ಲಾಕ್‌ ಡೌನ್‌ಗೆ ಜನರ ಒಲವು
ಹಸುರು ವಲಯದಲ್ಲಿದ್ದ ಪುಟ್ಟ ಜಿಲ್ಲೆ ಕೊಡಗು ಇಂದು 184 ಸೋಂಕಿತರನ್ನು ಕಂಡಿದ್ದು, ಜನರಲ್ಲಿ ಸಹಜವಾಗಿಯೇ ಆತಂಕ ಮನೆ ಮಾಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜಿಲ್ಲೆಯಲ್ಲಿ ಅನಾಹುತವೇ ಸಂಭವಿಸಬಹುದು ಎಂದು ಅಭಿಪ್ರಾಯಪಡುತ್ತಿರುವ ವಿವಿಧ ಸಂಘ-ಸಂಸ್ಥೆಗಳು ಕನಿಷ್ಠ ಎರಡು ವಾರಗಳ ಕಾಲ ಲಾಕ್‌ ಡೌನ್‌ ಜಾರಿ ಮಾಡಬೇಕೆಂದು ಜಿಲ್ಲಾಡಳಿತಕ್ಕೆ ಒತ್ತಡ ಹೇರಿವೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

k-s-eshwarappa

ಇಂತಹ ಗೂಂಡಾಗಿರಿಯನ್ನು ಉಳಿದ ಮುಸ್ಲಿಮರು ಖಂಡಿಸಬೇಕು: ಕೆ.ಎಸ್ ಈಶ್ವರಪ್ಪ

kumarsawamy

ಯಾರೇ ಗೂಂಡಾಗಿರಿ ಮಾಡಿದರೂ ಮುಲಾಜಿಲ್ಲದೆ ಮಟ್ಟಹಾಕಿ: H.D ಕುಮಾರಸ್ವಾಮಿ

ಆಕ್ಷೇಪಾರ್ಹ ಪೋಸ್ಟ್-ಹಿಂಸಾಚಾರ ಕೇಸ್: ಆರೋಪಿ ನವೀನ್ ಸೇರಿ 110 ಮಂದಿ ಬಂಧನ

ಆಕ್ಷೇಪಾರ್ಹ ಪೋಸ್ಟ್-ಹಿಂಸಾಚಾರ ಕೇಸ್: ಆರೋಪಿ ನವೀನ್ ಸೇರಿ 110 ಮಂದಿ ಬಂಧನ

ಡಿ.ಜೆ ಹಳ್ಳಿ ಗಲಭೆ ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳು ಎರಡೂ ಖಂಡನೀಯ: ಸಿದ್ದರಾಮಯ್ಯ

ಡಿ.ಜೆ ಹಳ್ಳಿ ಗಲಭೆ ಅದಕ್ಕೆ ಪ್ರಚೋದನೆ ನೀಡಿದ ಘಟನೆಗಳು ಎರಡೂ ಖಂಡನೀಯ: ಸಿದ್ದರಾಮಯ್ಯ

dk-shivakumar

ಡಿ.ಜೆ ಹಳ್ಳಿ ಗಲಭೆಯ ಹಿಂದೆ ವ್ಯವಸ್ಥಿತ ಸಂಚು, ಯಾರೂ ಕಾನೂನು ಕೈಗೆತ್ತಿಕೊಳ್ಳಬೇಡಿ: ಡಿಕೆಶಿ

ಎರಡು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಇಂದಿನ ದರ ಎಷ್ಟು ಗೊತ್ತಾ?

ಎರಡು ದಿನದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ: ಇಂದಿನ ದರ ಎಷ್ಟು ಗೊತ್ತಾ?

ರೈತರ ಬೆಳೆ ಸಮೀಕ್ಷೆಗೆ ಕೃಷಿ ಸಚಿವರಿಂದ ಆಪ್ ಲೋಕಾರ್ಪಣೆ

ರೈತರ ಬೆಳೆ ಸಮೀಕ್ಷೆಗೆ ಕೃಷಿ ಸಚಿವರಿಂದ ಆ್ಯಪ್ ಲೋಕಾರ್ಪಣೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋವಿಡ್ ವರದಿ ನೆಗೆಟಿವ್: ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಾಜಿ ಸಿಎಂ ಸಿದ್ದರಾಮಯ್ಯ ಕೋವಿಡ್ ವರದಿ ನೆಗೆಟಿವ್: ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೋವಿಡ್ ಕಳವಳ-ಆಗಸ್ಟ್ 11:  6257 ಹೊಸ ಪ್ರಕರಣಗಳು ; 6473 ಡಿಸ್ಚಾರ್ಜ್ ; 86 ಸಾವು

ಕೋವಿಡ್ ಕಳವಳ-ಆಗಸ್ಟ್ 11: 6257 ಹೊಸ ಪ್ರಕರಣಗಳು ; 6473 ಡಿಸ್ಚಾರ್ಜ್ ; 86 ಸಾವು

ಚಾಮರಾಜನಗರ: 99 ಪ್ರಕರಣಗಳು ಪತ್ತೆ: ಇಬ್ಬರು ಸಾವು

ಚಾಮರಾಜನಗರ: 99 ಕೋವಿಡ್ ಪ್ರಕರಣಗಳು ಪತ್ತೆ: ಇಬ್ಬರು ಸಾವು

ಹಾಸನ: 145 ಹೊಸ ಕೋವಿಡ್ ಸೋಂಕು ಪ್ರಕರಣಗಳು, ಮೂವರು ಸೋಂಕಿತರು ಸಾವು

ಹಾಸನ: 145 ಹೊಸ ಕೋವಿಡ್ ಸೋಂಕು ಪ್ರಕರಣಗಳು, ಮೂವರು ಸೋಂಕಿತರು ಸಾವು

ರಾಜ್ಯದ ಕೋವಿಡ್ ಸ್ಥಿತಿಗತಿಯ ಬಗ್ಗೆ ಸಚಿವರ ಜೊತೆ ಪ್ರಧಾನಿ ಮೋದಿ ಸಂವಾದ

ರಾಜ್ಯದ ಕೋವಿಡ್ ಸ್ಥಿತಿಗತಿಯ ಬಗ್ಗೆ ಸಚಿವರ ಜೊತೆ ಪ್ರಧಾನಿ ಮೋದಿ ಸಂವಾದ

MUST WATCH

udayavani youtube

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

udayavani youtube

ಕೋವಿಡ್ ತಡೆಗೆ ಸಿದ್ಧವಾಯ್ತ ವಿಶ್ವದ‌ ಮೊದಲ ಲಸಿಕೆ? ಪುಟಿನ್ ಪುತ್ರಿಗೂ ವ್ಯಾಕ್ಸಿನ್?

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agricultureಹೊಸ ಸೇರ್ಪಡೆ

ಯೂರಿಯಾ ರಸಗೊಬ್ಬರ ಕೊರತೆ

ಯೂರಿಯಾ ರಸಗೊಬ್ಬರ ಕೊರತೆ

ಅನುಭವದಿಂದ ಕಲಿತುಕೊಳ್ಳೋಣ

ಜೀವಯಾನ: ಅನುಭವದಿಂದ ಕಲಿತುಕೊಳ್ಳೋಣ

100 ಮಂಕೀಸ್‌ನಲ್ಲಿ ಪ್ರಮೋದ್‌

100 ಮಂಕೀಸ್‌ನಲ್ಲಿ ಪ್ರಮೋದ್‌

ಕೆ.ಜಿ.ಹಳ್ಳಿ ಗಲಭೆ: ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪತ್ರಕರ್ತರಿಂದ ಪತ್ರ ಚಳುವಳಿ

ಕೆ.ಜಿ.ಹಳ್ಳಿ ಗಲಭೆ: ಪತ್ರಕರ್ತರ ಮೇಲೆ ಹಲ್ಲೆ ಖಂಡಿಸಿ ಪತ್ರಕರ್ತರಿಂದ ಪತ್ರ ಚಳುವಳಿ

k-s-eshwarappa

ಇಂತಹ ಗೂಂಡಾಗಿರಿಯನ್ನು ಉಳಿದ ಮುಸ್ಲಿಮರು ಖಂಡಿಸಬೇಕು: ಕೆ.ಎಸ್ ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.