ಅಮೆರಿಕಕ್ಕೆ ಸೆಡ್ಡು, ವಿಶ್ವ ಆರೋಗ್ಯ ಸಂಸ್ಥೆಗೆ ಮತ್ತೆ 30 ಮಿ. ಡಾಲರ್ ದೇಣಿಗೆ ನೀಡಿದ ಚೀನಾ!
ಅಭಿವೃದ್ಧಿಶೀಲ ದೇಶಗಳ ಆರೋಗ್ಯ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಬೆಂಬಲ ನೀಡಲು ಈ ನೆರವು ನೀಡಿರುವುದಾಗಿ ತಿಳಿಸಿದೆ.
Team Udayavani, Apr 23, 2020, 4:17 PM IST
ಬೀಜಿಂಗ್/ಚೀನಾ: ಮಹಾಮಾರಿ ಕೋವಿಡ್ 19 ವಿಚಾರದಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾ ನಡುವೆ ವಾಕ್ಸಮರ, ಜಟಾಪಟಿ ಮುಂದುವರಿದಿರುವುದು ತಿಳಿದಿರುವ ವಿಷಯ. ಇದೀಗ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡಬೇಕಾಗಿದ್ದ ಹಣಕಾಸು ನೆರವನ್ನು ತಡೆಹಿಡಿದಿದ್ದರಿಂದ ಚೀನಾ ಡಬ್ಲ್ಯುಎಚ್ ಒಗೆ ಮತ್ತೆ 30 ಮಿಲಿಯನ್ ಡಾಲರ್ ನಷ್ಟು ದೇಣಿಗೆ ನೀಡುವುದಾಗಿ ಗುರುವಾರ ಘೋಷಿಸಿದೆ.
ಜಾಗತಿಕವಾಗಿ ಕೋವಿಡ್ ವಿರುದ್ಧ ಹೋರಾಡಲು ವಿಶ್ವ ಆರೋಗ್ಯ ಸಂಸ್ಥೆಗೆ ಮತ್ತೆ 30 ಮಿಲಿಯನ್ ಡಾಲರ್ ನಷ್ಟು ಆರ್ಥಿಕ ನೆರವು ನೀಡಲು ನಿರ್ಧರಿಸಿರುವುದಾಗಿ ಚೀನಾ ತಿಳಿಸಿದೆ. ಈಗಾಗಲೇ 20 ಮಿಲಿಯನ್ ಡಾಲರ್ ನಷ್ಟು ಚೀನಾ ದೇಣಿಗೆ ನೀಡಿತ್ತು.
ಜಾಗತಿಕವಾಗಿ ಕೋವಿಡ್ 19 ವಿರುದ್ಧ ಹೋರಾಡಲು, ಅಭಿವೃದ್ಧಿಶೀಲ ದೇಶಗಳ ಆರೋಗ್ಯ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಬೆಂಬಲ ನೀಡಲು ಈ ನೆರವು ನೀಡಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್ ಶುಯಾಂಗ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚೀನಾ ಸರ್ಕಾರದ ಮೇಲಿನ ವಿಶ್ವಾಸ, ಬೆಂಬಲದ ಪ್ರತಿಫಲನ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜನರಿಗೆ ನೀಡಿರುವ ಕೊಡುಗೆಯಾಗಿದೆ ಎಂದು ಚೀನಾ ಬಣ್ಣಿಸಿದೆ.
ಅಮೆರಿಕ ವಿಶ್ವಆರೋಗ್ಯ ಸಂಸ್ಥೆಯ ಅತೀ ದೊಡ್ಡ ದೇಣಿಗೆ ನೀಡುವ ರಾಷ್ಟ್ರವಾಗಿದೆ. ಆದರೆ ಕೋವಿಡ್ 19 ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ ಕೆಲಸ ಮಾಡಿದೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು. ಅಲ್ಲದೇ ಆರ್ಥಿಕ ನೆರವನ್ನು ನಿಲ್ಲಿಸುವುದಾಗಿ ತಿಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ