Udayavni Special

ಜೆ ಆ್ಯಂಡ್‌ ಜೆಯ ಲಸಿಕೆ: ಜುಲೈಯಲ್ಲಿ ಪ್ರಯೋಗ


Team Udayavani, Jun 12, 2020, 12:24 PM IST

ಜೆ ಆ್ಯಂಡ್‌ ಜೆಯ ಲಸಿಕೆ: ಜುಲೈಯಲ್ಲಿ ಪ್ರಯೋಗ

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್‌: ಕೋವಿಡ್‌ -19ಗೆ ಲಸಿಕೆ ಸಂಶೋಧನೆಯಲ್ಲಿ ನಿರತವಾಗಿರುವ ಜಾನ್‌ಸನ್‌ ಆ್ಯಂಡ್‌ ಜಾನ್‌ಸನ್‌ ಸಂಸ್ಥೆಯು ತಾನು ಜುಲೈ ಮಧ್ಯಭಾಗದಿಂದ ಮಾನವನ ಮೇಲೆ ಈ ಲಸಿಕೆ ಪ್ರಯೋಗವನ್ನು ನಡೆಸಲಿದೆ ಎಂದು ಹೇಳಿಕೊಂಡಿದೆ. ತನ್ನ ಲಸಿಕೆಯು ಕೋವಿಡ್‌ ವಿರುದ್ಧ ಕೆಲಸ ಮಾಡಲಿದೆ ಎಂಬುದು ಖಚಿತವಾಗುವ ಮೊದಲೇ ಸಂಸ್ಥೆಯು ಅಮೆರಿಕ ಸರಕಾರದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. 2021ರಲ್ಲಿ 1 ಬಿಲಿಯನ್‌ ಡೋಸ್‌ ಔಷಧ ಉತ್ಪಾದನೆಯ ಗುರಿ ಹೊಂದಿದೆ. ಅದಕ್ಕೆ ಬೇಕಾದ ಉತ್ಪಾದನಾ ಸಾಮರ್ಥ್ಯಕ್ಕಾಗಿ ಒಪ್ಪಂದವನ್ನು ಮಾಡಿಕೊಂಡಿದೆ.

ಸಂಸ್ಥೆಯು ತನ್ನ ಲಸಿಕೆಯ ಸುರಕ್ಷೆ ಮತ್ತು ರೋಗ ನಿರೋಧಕ ಪ್ರತಿಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು 18ರಿಂದ 55 ವರ್ಷ ಪ್ರಾಯದ ಸುಮಾರು 1.045 ಆರೋಗ್ಯವಂತ ಜನರ ಮೇಲೆ ಪ್ರಯೋಗ ನಡೆಸಲು ನಿರ್ಧರಿಸಿದೆ. ಜತೆಗೆ 65 ವರ್ಷ ಮೇಲ್ಪಟ್ಟವರ ಮೇಲೂ ಈ ಪ್ರಯೋಗವನ್ನು ನಡೆಸಲಾಗುವುದು ಎಂದು ಜೆ ಆ್ಯಂಡ್‌ ಜೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯೋಗವು ಅಮೆರಿಕ ಮತ್ತು ಬೆಲ್ಜಿಯಂ ದೇಶಗಳಲ್ಲಿ ನಡೆಯಲಿದೆ.

ಇಲ್ಲಿಯವರೆಗೆ ನಾವು ಕಂಡುಕೊಂಡ ಕ್ಲಿನಿಕಲ್‌ಪೂರ್ವ ಅಂಕಿಅಂಶ ಹಾಗೂ ರೆಗ್ಯುಲೇಟರಿ ಅಧಿಕಾರಿಗಳೊಂದಿನ ಮಾತುಕತೆ ಆಧಾರದಲ್ಲಿ ನಾವು ಪ್ರಯೋಗಾಲಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಳ್ಳಲು ಸಮರ್ಥರಾಗಿದ್ದೇವೆ ಎಂದು ಜೆ ಆ್ಯಂಡ್‌ ಜೆ ಮುಖ್ಯ ವೈಜ್ಞಾನಿಕ ಅಧಿಕಾರಿ ಪೌಲ್‌ ಸ್ಟಾಫ್ಲೆಸ್‌ ಅವರು ಹೇಳಿದ್ದಾರೆ.

ಮೊದಲ ಹಂತದ ಅಧ್ಯಯನ ಮತ್ತು ನಿಯಂತ್ರಣ ಮಂಡಳಿಯ ಅಂಗೀಕಾರ ಬಳಿಕ ಲಸಿಕೆ ಕುರಿತು ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸಲು ಹಾಗೂ ಗಂಭೀರ ಸ್ಥಿತಿಯಲ್ಲಿರುವ ರೋಗಿಯ ಮೇಲೆ ಪರೀಕ್ಷೆ ನಡೆಸಲು ನೇಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಅಲರ್ಜಿ ಆ್ಯಂಡ್‌ ಇನ್‌ಫೆಕ್ಷಸ್‌ ಡಿಸೀಸಸ್‌ ಜತೆಗೆ ಕಂಪೆನಿ ಮಾತುಕತೆ ನಡೆಸುತ್ತಿದೆ. ಲಸಿಕೆ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಮೋಡೆರ್ನಾ ಇಂಕ್‌ ಸಂಸ್ಥೆಯು ಈಗಾಗಲೇ ನೋಂದಣಿ ಮಾಡಿಕೊಂಡಿರುವ ಕಡಿಮೆ ತೀವ್ರತೆಯ 600 ರೋಗಿಗಳ ಮೇಲೆ ಔಷಧವನ್ನು ಪರೀಕ್ಷೆ ನಡೆಸಲು ಆರಂಭಿಸಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಮೇಲೆ ಜುಲೈಯಲ್ಲಿ ಪ್ರಯೋಗ ನಡೆಸಲಿದೆ.

ಕೋವಿಡ್‌ 19ಗೆ ಸುಮಾರು 10 ಲಸಿಕೆಯು ಮಾನವನ ಮೇಲೆ ಪರೀಕ್ಷೆಗೆ ಸಿದ್ದವಾಗಿದೆ. ಒಂದು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಅಭಿವೃದ್ಧಿಪಡಿಸಲು ಸುಮಾರು 12ರಿಂದ 18 ತಿಂಗಳು ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಟಾಪ್ ನ್ಯೂಸ್

karkala

ಕಾರ್ಕಳ; ಆಮ್ಲಜನಕದ ಕೊರತೆ; ಬಾವಿಗೆ ಇಳಿದ ಓರ್ವ ಕಾರ್ಮಿಕ ಸಾವು, ಇಬ್ಬರು ಅಸ್ವಸ್ಥ

2035ರೊಳಗೆ ಭಾರತದಿಂದ ಬಂದರು ಯೋಜನೆಗಾಗಿ 6 ಲಕ್ಷ ಕೋಟಿ ರೂ. ಹೂಡಿಕೆ: ಪ್ರಧಾನಿ ಮೋದಿ

2035ರೊಳಗೆ ಭಾರತದಿಂದ ಬಂದರು ಯೋಜನೆಗಾಗಿ 6 ಲಕ್ಷ ಕೋಟಿ ರೂ. ಹೂಡಿಕೆ: ಪ್ರಧಾನಿ ಮೋದಿ

ಕೋವ್ಯಾಕ್ಸಿನ್ ಪಡೆದ ನಟ ಕಮಲ್ ಹಾಸನ್, ಮುಂದಿನ ತಿಂಗಳು ಭ್ರಷ್ಟಾಚಾರದ ವಿರುದ್ಧ ಲಸಿಕೆ!

suresh kumar talk about reopening of schools

1 ರಿಂದ 5 ನೇ ತರಗತಿಗಳ ಆರಂಭ  ಸದ್ಯಕ್ಕಿಲ್ಲ: ಸುರೇಶ್ ಕುಮಾರ್

Government should not be corrupt: Kodihalli Chandrasekhar

ಸರ್ಕಾರ ವಚನ ಭ್ರಷ್ಟವಾಗಬಾರದು; ಸಾರಿಗೆ ನೌಕರರ ಮನವಿಗೆ ಸ್ಪಂದಿಸಬೇಕು:ಕೋಡಿಹಳ್ಳಿ ಚಂದ್ರಶೇಖರ್

ಬಿಜೆಪಿ ಹಿರಿಯ ಮುಖಂಡ, ಲೋಕಸಭಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ನಿಧನ

ಬಿಜೆಪಿ ಹಿರಿಯ ಮುಖಂಡ, ಲೋಕಸಭಾ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ನಿಧನ

Redmi Display 27-Inch Monitor With Full-HD IPS Panel, 75Hz Refresh Rate Launched

ರೆಡ್ ಮಿ ಡಿಸ್ಪ್ಲೇ 27 ಇಂಚಿನ ಮಾನಿಟರ್ : ವಿಶೇಷತೆಗಳೇನು..?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎರಡನೇ ಹಂತದ ಕೋವಿಡ್ ಲಸಿಕೆ ವಿತರಣೆ; ಹತ್ತು ಲಕ್ಷಕ್ಕೂ ಅಧಿಕ ಮಂದಿ ನೋಂದಣಿ

ಕೋವಿಡ್ 19-ಲಸಿಕೆ ಪಡೆದ ನಂತರ ಪ್ರಧಾನಿ ಮೋದಿ… ಸಿಸ್ಟರ್ ನಿವೇದಾಗೆ ಹೇಳಿದ್ದೇನು

ಕೋವಿಡ್ 19-ಲಸಿಕೆ ಪಡೆದ ನಂತರ ಪ್ರಧಾನಿ ಮೋದಿ… ಸಿಸ್ಟರ್ ನಿವೇದಾಗೆ ಹೇಳಿದ್ದೇನು?

ಮಹಾರಾಷ್ಟ್ರ: ಐವರು ಸಚಿವರಿಗೆ ಕೋವಿಡ್ 19 ಸೋಂಕು ದೃಢ, ಕೆಲವೆಡೆ ಲಾಕ್ ಡೌನ್

ಮಹಾರಾಷ್ಟ್ರ: ಐವರು ಸಚಿವರಿಗೆ ಕೋವಿಡ್ 19 ಸೋಂಕು ದೃಢ, ಕೆಲವೆಡೆ ಲಾಕ್ ಡೌನ್

ಕೇರಳದಲ್ಲಿ ರೂಪಾಂತರಿ ಕಾಟ; ಸೋಂಕು ಸ್ಫೋಟಗೊಳ್ಳಲು ಹೊಸ ಸ್ವರೂಪ ಕಾರಣ?

ಕೇರಳದಲ್ಲಿ ರೂಪಾಂತರಿ ಕಾಟ; ಸೋಂಕು ಸ್ಫೋಟಗೊಳ್ಳಲು ಹೊಸ ಸ್ವರೂಪ ಕಾರಣ?

ಇದೊಂದು ಭೀಕರ ಪರಿಸ್ಥಿತಿ…ಅಮೆರಿಕದಲ್ಲಿ ಕೋವಿಡ್ ಸಾವಿನ ಸಂಖ್ಯೆ 5 ಲಕ್ಷಕ್ಕೆ ಏರಿಕೆ

ಇದೊಂದು ಭೀಕರ ಪರಿಸ್ಥಿತಿ…ಅಮೆರಿಕದಲ್ಲಿ ಕೋವಿಡ್ ಸಾವಿನ ಸಂಖ್ಯೆ 5 ಲಕ್ಷಕ್ಕೆ ಏರಿಕೆ!

MUST WATCH

udayavani youtube

ಹಳೆಯ ವೃತ್ತ ಪತ್ರಿಕೆಯಿಂದ ಶಿವಾಜಿ ಮಹಾರಾಜರ ಕಲಾಕೃತಿ:

udayavani youtube

ಚಿಟ್ ಚಾಟ್ ವಿಥ್ ಸಿಂಗರ್ ಶ್ರೀ ಹರ್ಷ | Interview with Shree Harsha | Harshadhwani

udayavani youtube

FRIDGE ನೀರು ದೇಹದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರುತ್ತದೆ?

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

udayavani youtube

30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು

ಹೊಸ ಸೇರ್ಪಡೆ

ಎಲ್ಲ ಸಾರ್ವಜನಿಕರಿಗೂ ಕೋವಿಡ್ ಲಸಿಕೆ

ಎಲ್ಲ ಸಾರ್ವಜನಿಕರಿಗೂ ಕೋವಿಡ್ ಲಸಿಕೆ

karkala

ಕಾರ್ಕಳ; ಆಮ್ಲಜನಕದ ಕೊರತೆ; ಬಾವಿಗೆ ಇಳಿದ ಓರ್ವ ಕಾರ್ಮಿಕ ಸಾವು, ಇಬ್ಬರು ಅಸ್ವಸ್ಥ

ಗ್ರಾಮ ವಾಸ್ತವ್ಯ: ಆದಿವಾಸಿಗರ ಮನೆಗೆ ಬಂತು ಬೆಳಕು

ಗ್ರಾಮ ವಾಸ್ತವ್ಯ: ಆದಿವಾಸಿಗರ ಮನೆಗೆ ಬಂತು ಬೆಳಕು

ಸಮರ್ಪಕ ಕುಡಿಯುವ ನೀರು ಪೂರೈಸಿ: ಜಿಲ್ಲಾಧಿಕಾರಿ ರವಿ

ಸಮರ್ಪಕ ಕುಡಿಯುವ ನೀರು ಪೂರೈಸಿ: ಜಿಲ್ಲಾಧಿಕಾರಿ ರವಿ

packers-and-movers

ಪ್ಯಾಕರ್ ಮತ್ತು ಮೂವರ್ಸ್; ಅಶ್ಯೂರ್‌ಶಿಫ್ಟ್ ಮೂಲಕ ಇನ್ನಷ್ಟು ಸುಲಭ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.